logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inexorability
ನಾಮವಾಚಕ
ನಿಷ್ಠುರತೆ; ಕಠೋರತೆ; ನಿಷ್ಕರುಣಿತನ; ನಿಷ್ಕಾರುಣ್ಯ; ನಿರ್ದಯತೆ; ಅಪ್ರಶಾಮ್ಯತೆ; ಕನಿಕರವಿಲ್ಲದ ಸ್ವಭಾವ; ಬೇಡಿಕೊಳ್ಳುವುದರಿಂದ ಮನಕರಗಿಸಲಾಗದ ಸ್ವಭಾವ.

inexorable
ಗುಣವಾಚಕ
ನಿಷ್ಠುರ; ಕಠೋರ, ಕನಿಕರವಿಲ್ಲದ; ನಿಷ್ಕರುಣೆಯ; ನಿರ್ದಯ; ಶಮನಗೊಳ್ಳದ; ಅಪ್ರಶಾಮ್ಯ; ಬೇಡಿಕೊಳ್ಳುವುದರಿಂದ ಮನಸ್ಸನ್ನು ಕರಗಿಸಲಾಗದ.

inexorably
ಕ್ರಿಯಾವಿಶೇಷಣ
ನಿಷ್ಠುರವಾಗಿ; ಕಠೋರವಾಗಿ; ಕನಿಕರವಿಲ್ಲದೆ; ನಿಷ್ಕರುಣೆಯಿಂದ; ನಿರ್ದಯತೆಯಿಂದ; ಅಪ್ರಶಾಮ್ಯವಾಗಿ; ಬೇಡಿಕೊಳ್ಳುವುದರಿಂದ ಮನಕರಗಿಸಲಾರದಂತೆ.

inexpediency
ನಾಮವಾಚಕ
  • ಅಸಾಮಯಿಕತೆ; ಸಮಯೋಚಿತವಲ್ಲದ, ಸಂದರ್ಭೋಚಿತವಲ್ಲದ – ಲಕ್ಷಣ.
  • ಅನುಚಿತತೆ; ಅನನುಕೂಲತೆ; ಲಾಭದಾಯಕವಲ್ಲದಿರುವಿಕೆ; ಅನುಪಯುಕ್ತತೆ; ಅಪ್ರಯೋಜಕತೆ.

  • inexpedient
    ಗುಣವಾಚಕ
  • ಅಸಾಮಯಿಕ; ಸಮಯೋಚಿತವಲ್ಲದ; ಸಂದರ್ಭೋಚಿತವಲ್ಲದ; ಕಾಲೋಚಿತವಲ್ಲದ; ಸಮಯಕ್ಕೆ ಸಲ್ಲದ.
  • ಅನುಚಿತ; ಅಯುಕ್ತ; ಅನನುಕೂಲ; ಲಾಭದಾಯಕವಲ್ಲದ; ಅನುಪಯುಕ್ತ; ಅಪ್ರಯೋಜಕ.

  • inexpensive
    ಗುಣವಾಚಕ
  • ಅಗ್ಗದ; ಸೋವಿ; ಸಸ್ತಾ; ಕಡಮೆ ಬೆಲೆಯ.
  • (ಕೊಟ್ಟಿರುವ) ಹಣಕ್ಕೆ ಸಾಕಷ್ಟು ಒಳ್ಳೆಯ ಗುಣದ; ಬೆಲೆಗೆ ತಕ್ಕ; ಒಳ್ಳೆಯ ಮಟ್ಟದ.

  • inexpensively
    ಕ್ರಿಯಾವಿಶೇಷಣ
  • ಅಗ್ಗವಾಗಿ; ಸೋವಿಯಾಗಿ; ಸಸ್ತಾ ಬೆಲೆಗೆ; ಕಡಮೆ ಬೆಲೆಗೆ.
  • (ಕೊಟ್ಟಿರುವ) ಹಣಕ್ಕೆ ತಕ್ಕ ಗುಣದಂತೆ.

  • inexpensiveness
    ನಾಮವಾಚಕ
  • ಅಗ್ಗವಾಗಿರುವಿಕೆ; ಸೋವಿಯಾಗಿರುವುದು; ಬೆಲೆ – ಕಡಮೆಯಾಗಿರುವುದು, ಸಸ್ತಾ ಆಗಿರುವುದು.
  • (ಕೊಟ್ಟಿರುವ) ಹಣಕ್ಕೆ ತಕ್ಕ ಒಳ್ಳೆಯ ಗುಣವಿರುವಿಕೆ.

  • inexperience
    ನಾಮವಾಚಕ
    ಅನನುಭವ; ಅನುಭವರಾಹಿತ್ಯ; ಅನುಭವವಿಲ್ಲದಿರುವಿಕೆ.

    inexperienced
    ಗುಣವಾಚಕ
    ಅನುಭವವಿಲ್ಲದ; ಅನನುಭವಿ(ಯಾದ); ಅನುಭವರಹಿತ(ನಾದ).


    logo