logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inescutcheon
ನಾಮವಾಚಕ
(ವಂಶಲಾಂಛನ ವಿದ್ಯೆ) ವಂಶಲಾಂಛನ ಕೆತ್ತಿದ ಗುರಾಣಿಯೊಳಗೆ ಇಟ್ಟ ಸಣ್ಣ ಗುರಾಣಿ.

inessential
ಗುಣವಾಚಕ
  • ಅನಗತ್ಯವಾದ; ಅನಿವಾರ್ಯವಲ್ಲದ; ಅಗತ್ಯವಲ್ಲದ; ಆವಶ್ಯಕವಲ್ಲದ.
  • ಉಪೇಕ್ಷ್ಯ; ತಿರಸ್ಕರಣೀಯ; ಬೇಕೇಬೇಕು ಎನಿಸದ; ತೊರೆಯಬಹುದಾದ.

  • inessential
    ನಾಮವಾಚಕ
    ಅನಾವಶ್ಯಕ ವಸ್ತು; ಅನಗತ್ಯ ವಸ್ತು.

    inestimable
    ಗುಣವಾಚಕ
    ಅಮೂಲ್ಯ; ಅನರ್ಘ್ಯ; ಬೆಲೆ ಕಟ್ಟಲಾಗದ; ಬೆಲೆ ಕಟ್ಟಲಾಗದಷ್ಟು – ಮಹಿಮೆಯುಳ್ಳ, ಶ್ರೇಷ್ಠವಾದ, ಉತ್ಕೃಷ್ಟವಾದ.

    inestimably
    ಕ್ರಿಯಾವಿಶೇಷಣ
    ಅಮೂಲ್ಯವಾಗಿ; ಅನರ್ಘ್ಯವಾಗಿ; ಬೆಲೆ ಕಟ್ಟಲಾಗದಂತೆ; ಬೆಲೆ ಕಟ್ಟಲಾಗದಷ್ಟು – ಮಹಿಮೆಯುಳ್ಳದ್ದಾಗಿ, ಶ್ರೇಷ್ಠವಾಗಿ, ಉತ್ಕೃಷ್ಟವಾಗಿ.

    inevitability
    ನಾಮವಾಚಕ
  • ಅಪರಿಹಾರ್ಯತೆ; ಅನಿವಾರ್ಯತೆ.
  • ಅವಶ್ಯಂಭಾವಿತ್ವ; ಆಗಿಯೇ ಆಗುವಿಕೆ; ತಪ್ಪಿಸಿಕೊಳ್ಳಲಾಗದಂಥ ಲಕ್ಷಣ.
  • (ಪಾತ್ರಚಿತ್ರಣ ಮೊದಲಾದವುಗಳ ವಿಷಯದಲ್ಲಿ) ಸತ್ಯಸಹಜತೆ; ವಾಸ್ತವಿಕತೆ.

  • inevitable
    ಗುಣವಾಚಕ
  • ತಪ್ಪಿಸಿಕೊಳ್ಳಲಾಗದ; ಅನಿವಾರ್ಯ; ಅಪರಿಹಾರ್ಯ.
  • ಖಂಡಿತ – ಆಗುವ, ನಡೆಯುವ, ಸಂಭವಿಸುವ, ಘಟಿಸುವ, ಅವಶ್ಯಂಭಾವಿ.
  • (ಆಡುಮಾತು) ಸುಪರಿಚಿತ; ಬೇಸರ ಹಿಡಿಸುವಷ್ಟು ಯಾ ಚಿಟ್ಟು ಹಿಡಿಸುವಷ್ಟು ಪಳಕೆಯಾದ: the tourist with his inevitable camera ಸುಪರಿಚಿತ ಕ್ಯಾಮರಾ ಹಿಡಿದ ಪ್ರವಾಸಿಗ.
  • (ಪಾತ್ರಗಳ ಸ್ವಭಾವ ಚಿತ್ರಣ, ಕಥಾವಸ್ತು ವಿಕಸನ, ಮೊದಲಾದವುಗಳ ವಿಷಯದಲ್ಲಿ) ಸತ್ಯ ಸಹಜವಾದ; ಸ್ವಾಭಾವಿಕವಾದ; ವಾಸ್ತವಿಕವಾದ; ಸಹಜತೆಯಿಂದ ಯಾ ನೈಜತೆಯಿಂದ ಮನವೊಪ್ಪುವ, ಸರ್ವಸಮ್ಮತವಾದ; ಬೇರೆ ರೀತಿಯ ವರ್ಣನೆಗೆ ಯಾ ನಿರ್ವಾಹಕ್ಕೆ ಅವಕಾಶವೇ ಇಲ್ಲದಷ್ಟು ಸಹಜವಾದ.

  • inevitableness
    ನಾಮವಾಚಕ
    = inevitability.

    inevitably
    ಕ್ರಿಯಾವಿಶೇಷಣ
    ತಪ್ಪಿಸಿಕೊಳ್ಳಲಾಗದಂತೆ; ಅನಿವಾರ್ಯವಾಗಿ.

    inexact
    ಗುಣವಾಚಕ
    ನಿಖರವಲ್ಲದ; ಕರಾರುವಾಕ್ಕಲ್ಲದ; ಅನಿಷ್ಕೃಷ್ಟ.


    logo