logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oscillate
ಅಕರ್ಮಕ ಕ್ರಿಯಾಪದ
  • (ವಿರಳವಾಗಿ ಸಕರ್ಮಕ ಕ್ರಿಯಾಪದ) ಲೋಲಕದಂತೆ ತೂಗು; ಜೋತಾಡು; ಓಲಾಡು; ತೂಗಾಡು; ಎರಡು ಬಿಂದುಗಳ ನಡುವೆ ಹಿಂದಕ್ಕೂ ಮುಂದಕ್ಕೂ ಚಲಿಸು, ಆಂದೋಲನ ಮಾಡು.
  • ಡೋಲಾಯಮಾನನಾಗಿರು; ಅನಿಶ್ಚಿತನಾಗಿರು; (ತೀರ ವಿರುದ್ಧವಾದ ಪಕ್ಷಗಳ ಅಭಿಪ್ರಾಯ, ಕಾರ್ಯ, ಮೊದಲಾದವುಗಳ ನಡುವೆ) ತೂಗಾಡು.
  • (ವಿದ್ಯುತ್ಪ್ರವಾಹದ ವಿಷಯದಲ್ಲಿ) ಆಂದೋಲಿಸು; ಆಂದೋಲನ ಮಾಡು:
    1. ವಿದ್ಯುತ್ಕಿಂಡಿ, ತೆರಪು, ಮೊದಲಾದ ಕಡೆ ಅಧಿಕ ಆವರ್ತನೆಯಲ್ಲಿ ದಿಕ್ಕು ಬದಲಾಯಿಸು.
    2. (ರೇಡಿಯೋ ಗ್ರಾಹಕದ ವಿಷಯದಲ್ಲಿ) ದೋಷಯುಕ್ತ ಕ್ರಿಯೆಯಿಂದಾಗಿ ವಿದ್ಯುತ್ಕಾಂತ ಅಲೆಗಳನ್ನು ಪ್ರೇರಿಸು.
  • (ಭೌತವಿಜ್ಞಾನ) ನಿಯತಕ್ರಮದಲ್ಲಿ ಚಲಿಸು.

  • oscillation
    ನಾಮವಾಚಕ
    ಆಂದೋಲನ; ತೂಗಾಟ; ಆಂದೋಲನ ಮಾಡುವಿಕೆ.

    oscillator
    ನಾಮವಾಚಕ
    ಆಂದೋಲಕ; ವಿದ್ಯುದಾಂದೋಲನವನ್ನು ಉತ್ಪತ್ತಿ ಮಾಡುವ ಉಪಕರಣ.

    oscillatory
    ಗುಣವಾಚಕ
    ಆಂದೋಲನ ಮಾಡುವ; ಡೋಲಾಯಮಾನ.

    oscillo-
    ಸಮಾಸ ಪೂರ್ವಪದ
    (ಮುಖ್ಯವಾಗಿ ವಿದ್ಯುತ್ತಿನ) ಆಂದೋಲನ- ಎಂಬ ಅರ್ಥದಲ್ಲಿ ಬಳಸುವ ಸಮಾಸ ಪೂರ್ವಪದ

    oscillogram
    ನಾಮವಾಚಕ
    ದೋಲಲೇಖ; ದೋಲಲೇಖಿಯಿಂದ ಪಡೆದ ದಾಖಲೆ.

    oscillograph
    ನಾಮವಾಚಕ
    ದೋಲಲೇಖಿ; ಆಂದೋಲನಗಳನ್ನು ದಾಖಲಿಸುವ ಸಾಧನ.

    oscillographic
    ಗುಣವಾಚಕ
    ದೋಲಲೇಖಿಯ ಯಾ ಅದಕ್ಕೆ ಸಂಬಂಧಿಸಿದ.

    oscillography
    ನಾಮವಾಚಕ
    ದೋಲಲೇಖನ; ಆಂದೋಲನಗಳನ್ನು ದಾಖಲಿಸುವಿಕೆ.

    oscilloscope
    ನಾಮವಾಚಕ
    ದೋಲದರ್ಶಕ, ವ್ಯತ್ಯಾಸವಾಗುತ್ತಿರುವ ವಿದ್ಯುತ್‍ ಪ್ರಮಾಣವನ್ನು ಕ್ಯಾಥೋಡ್‍ ಕಿರಣ ನಳಿಗೆಯೊಂದರ ತೆರೆಯ ಮೇಲೆ ಅಲೆಗಳಾಗಿ ತೋರಿಸುವ ಸಾಧನ.


    logo