logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inerrant
ಗುಣವಾಚಕ
= inerrable.

inert
ಗುಣವಾಚಕ
  • ಜಡ; ನಿಷ್ಕ್ರಿಯ; ನಿಶ್ಚೇಷ್ಟ; ಅಕ್ರಿಯ; ಕ್ರಿಯೆ, ಚಲನೆ, ನಿರೋಧ, ಮೊದಲಾದ ಗುಣಗಳನ್ನು ಸಹಜವಾಗಿ ಪಡೆದಿಲ್ಲದ.
  • (ರಸಾಯನವಿಜ್ಞಾನ) ಅಪಟು; ರಾಸಾಯನಿಕಪಟುತ್ವವಿಲ್ಲದ; ರಾಸಾಯನಿಕವಾಗಿ ಪಟುವಲ್ಲದ.
  • ಚಟುವಟಿಕೆಯಿಲ್ಲದ; ಅತಿ ನಿಧಾನವಾದ; ಚುರುಕಿಲ್ಲದ; ಜಡ; ಮಂದ; ಛಾನಸದ; ಅಲಸ.

  • inert gas
    ನಾಮವಾಚಕ
    = noble gas.

    inertia
    ನಾಮವಾಚಕ
  • (ಭೌತವಿಜ್ಞಾನ) ಜಡತ್ವ; ಹೊರಗಿನ ಬಲದ ಪ್ರಭಾವವಿಲ್ಲದಿರುವಾಗ ತಾನಿರುವ ನಿಶ್ಚಲ ಸ್ಥಿತಿಯನ್ನಾಗಲಿ ಸಮವೇಗದ ಸರಳರೇಖಾ ಚಲನೆಯನ್ನಾಗಲಿ ಬದಲಾಯಿಸದಿರುವ ಗುಣ.
  • = inertness.

  • inertia reel
    ನಾಮವಾಚಕ
    ಮಂದ ರೀಲು; ಮಂದರಾಟೆ; ವಾಹನದಲ್ಲಿ ಬಿಗಿದುಕೊಳ್ಳುವ ಆಸನದ ಬೆಲ್ಟು ತಾನಾಗಿಯೇ ಸುಲಭವಾಗಿ ಅಳ್ಳಕವಾಗುವಂತೆ ಮತ್ತು ಆಘಾತವಾದಾಗ ಬಿಗಿದುಕೊಳ್ಳುವಂತೆ ಮಾಡುವ ರಾಟೆ ವ್ಯವಸ್ಥೆ.

    inertia selling
    ನಾಮವಾಚಕ
    ಅಯಾಚಿತ ವಿಕ್ರಯ; ಕೋರಿಕೆ ರಹಿತ ಮಾರಾಟ; ಕೇಳದಿದ್ದರೂ ಮಾಲನ್ನು ಗಿರಾಕಿಗಳಿಗೆ, ಅವರು ನಿರಾಕರಿಸುವುದಿಲ್ಲವೆಂಬ ಭಾವನೆಯಿಂದ ಕಳಿಸುವುದು.

    inertial
    ಗುಣವಾಚಕ
    (ಭೌತವಿಜ್ಞಾನ) ಜಡತ್ವದ; ಜಡತ್ವದ ಸ್ವಭಾವದ ಯಾ ಜಡತ್ವಕ್ಕೆ ಸಂಬಂಧಿಸಿದ.

    inertly
    ಕ್ರಿಯಾವಿಶೇಷಣ
  • ನಿಷ್ಕ್ರಿಯವಾಗಿ; ಜಡವಾಗಿ; ಚಟುವಟಿಕೆಯಿಲ್ಲದೆ.
  • ಅತಿ ನಿಧಾನವಾಗಿ; ಚುರುಕಿಲ್ಲದೆ.

  • inertness
    ನಾಮವಾಚಕ
  • ನಿಷ್ಕ್ರಿಯತ್ವ; ಜಡತ್ವ; ಚಟುವಟಿಕೆಯಿಲ್ಲದಿರುವ ಲಕ್ಷಣ.
  • ಚುರುಕಿಲ್ಲದಿರುವಿಕೆ; ಜಡತೆ; ಛಾನಸತನ; ನಿಧಾನತೆ; ಮಾಂದ್ಯ.

  • inescapable
    ಗುಣವಾಚಕ
    ತಪ್ಪಿಸಿಕೊಳ್ಳಲಾಗದ; ಅನಿವಾರ್ಯ; ಅಪರಿಹಾರ್ಯ.


    logo