logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ortolan bunting
ನಾಮವಾಚಕ
= ortolan.

Orwellian
ಗುಣವಾಚಕ
ಆರ್ವೆಲೀಯ; ಇಂಗ್ಲಿಷ್‍ ಲೇಖಕ ಜಾರ್ಜ್‍ ಆರ್ವಲ್‍ (ಮರಣ 1950)ನ ಯಾ ಅವನ ಬರೆವಣಿಗೆಯ (ಮುಖ್ಯವಾಗಿ ಅವನ 1984 ಮತ್ತು Animal I arm ಎಂಬ ಕೃತಿಗಳಲ್ಲಿ ನಿರೂಪಿಸಿರುವ ಸರ್ಕಾರದ ಸರ್ವಾಧಿಕಾರಿತ್ವದ ಬೆಳವಣಿಗೆಗೆ ಸಂಬಂಧಿಸಿದ) ಲಕ್ಷಣದ.

oryx
ನಾಮವಾಚಕ
ಆರಿಕ್ಸ್‍ ಜಿಂಕೆ; ನೇರವಾದ ಕೊಂಬುಳ್ಳ, ಆಹ್ರಿಕದ ಜಿಂಕೆ ಕುಲ.

OS
ಸಂಕ್ಷಿಪ್ತ
  • old style.
  • ordinary seaman.
  • (United Kingdomನಲ್ಲಿ) Ordnance Survey.
  • outsize.
  • out of stock.

  • Os
    ಸಂಕೇತ
    (ರಸಾಯನವಿಜ್ಞಾನ) osmium.

    Osage orange
    ನಾಮವಾಚಕ
    ಓಸೇಜ್‍ ಕಿತ್ತಳೆ:
  • ಅಮೆರಿಕದ ಗಟ್ಟಿಯಾದ, ಮುಳ್ಳು ಮುಳ್ಳಾದ, ತಿನ್ನಲಾಗದ, ಸುಕ್ಕಾದ ಕಿತ್ತಳೆ ಹಣ್ಣಿನಂತಹ ಹಣ್ಣುಗಳನ್ನು ಬಿಡುವ ಮರ.
  • ಈ ಮರದ, ಬಾಳಿಕೆ ಬರುವ, ಕಿತ್ತಳೆ ಬಣ್ಣದ ದಾರು.

  • osazone
    ನಾಮವಾಚಕ
    (ರಸಾಯನವಿಜ್ಞಾನ) ಓಸಸೋನ್‍; ಮಾನೊಸ್ಯಾಕರೈಡ್‍ ವರ್ಗದ ಸಕ್ಕರೆಯೊಡನೆ ಹೀನೈಲ್‍ ಹೈಡ್ರಸಿನ್‍ ವರ್ತಿಸಿದಾಗ, ಉತ್ಪತ್ತಿಯಾಗುವ ನಿರ್ದಿಷ್ಟ ಮಾನೋಸ್ಯಾಕರೈಡ್‍ಗೆ ವಿಶಿಷ್ಟವಾದುದಾಗಿದ್ದು ಅದನ್ನು ಗುರುತಿಸುವಲ್ಲಿ ನೆರವಾಗುವ ಹರಳು ರೂಪದ ಅದ್ರಾವ್ಯ ಸಂಯುಕ್ತ.

    Oscan
    ಗುಣವಾಚಕ
    ಆಸ್ಕನ್‍ ಭಾಷೆಯ; ಇಟಲಿಯ ಕ್ಯಾಂಪೇನಿಯ ಪ್ರದೇಶದಲ್ಲಿ ಪ್ರಾಚೀನ ಯುಗದ ಜನರು ಮಾತನಾಡುತ್ತಿದ್ದ, (ಈಗ ಶಾಸನಗಳಲ್ಲಿ ಮಾತ್ರ ಉಳಿದಿರುವ) ಲ್ಯಾಟಿನ್‍ಗೆ ಸಂಬಂಧಿಸಿದ ಭಾಷೆಯ ಯಾ ಭಾಷೆಯಲ್ಲಿನ.

    Oscan
    ನಾಮವಾಚಕ
    (ಇಟಲಿಯ ಕ್ಯಾಂಪೇನಿಯ ಪ್ರದೇಶದಲ್ಲಿ ಪ್ರಾಚೀನ ಯುಗದ ಜನರು ಆಡುತ್ತಿದ್ದ) ಆಸ್ಕನ್‍ ಭಾಷೆ.

    Oscar
    ನಾಮವಾಚಕ
    ಆಸ್ಕರ್‍ ಪ್ರಶಸ್ತಿ; ಅಮೆರಿಕದ ಸಂಯುಕ್ತ ಸಂಸ್ಥಾನಗಳ ಚಲನಚಿತ್ರ ಆಕ್ಯಾಡೆಮಿಯವರು ಅತ್ಯುತ್ತಮ ಅಭಿನಯ, ನಿರ್ದೇಶನ, ಮೊದಲಾದವುಗಳಿಗೆ ಪ್ರಶಸ್ತಿಯಾಗಿ ನೀಡುವ ಪ್ರತಿಮೆಗಳಲ್ಲೊಂದು.


    logo