logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zoolatry
ನಾಮವಾಚಕ
ಪ್ರಾಣಿಪೂಜೆ; ಪ್ರಾಣಿಗಳ ಆರಾಧನೆ.

zoological
ಗುಣವಾಚಕ
  • ಪ್ರಾಣಿವಿಜ್ಞಾನಕ್ಕೆ ಸಂಬಂಧಿಸಿದ.
  • ಪ್ರಾಣಿಗಳಿಗೆ ಸಂಬಂಧಿಸಿದ.

  • zoological garden
    ನಾಮವಾಚಕ
    ಮೃಗಾಲಯ; ಮೃಗೋದ್ಯಾನ; ಪ್ರದರ್ಶನ ಮತ್ತು ಅಧ್ಯಯನಕ್ಕಾಗಿ ಕಾಡುಮೃಗಗಳನ್ನು ಸಂಗ್ರಹಿಸಿಟ್ಟಿರುವ ಸಾರ್ವಜನಿಕ ಉದ್ಯಾನ ಯಾ ದೊಡ್ಡ ಆವರಣ.

    zoologically
    ಕ್ರಿಯಾವಿಶೇಷಣ
    ಪ್ರಾಣಿವಿಜ್ಞಾನದಂತೆ.

    zoologist
    ನಾಮವಾಚಕ
    ಪ್ರಾಣಿವಿಜ್ಞಾನಿ; ಪ್ರಾಣಿಶಾಸ್ತ್ರ ಪಂಡಿತ.

    zoology
    ನಾಮವಾಚಕ
    ಪ್ರಾಣಿ – ವಿಜ್ಞಾನ, ಶಾಸ್ತ್ರ; ಮುಖ್ಯವಾಗಿ ಪ್ರಾಣಿಗಳ ರಚನೆ, ದೈಹಿಕ ಕ್ರಿಯೆಗಳು, ವರ್ಗೀಕರಣ ಮತ್ತು ಪ್ರಸರಣ – ಇವುಗಳನ್ನು ಕುರಿತ ವೈಜ್ಞಾನಿಕ ಅಧ್ಯಯನ.

    zoom
    ಅಕರ್ಮಕ ಕ್ರಿಯಾಪದ
  • (ವಿಮಾನದ ವಿಷಯದಲ್ಲಿ) ಕಡಿದಾಗಿಯೂ ವೇಗವಾಗಿಯೂ ಏರು; ತಟಕ್ಕನೆ ಮೇಲಕ್ಕೇರು ( ಸಕರ್ಮಕ ಕ್ರಿಯಾಪದ ಸಹ).
  • (ಮುಖ್ಯವಾಗಿ ವಿಮಾನವು) ಗುಂಯ್‍ ಎಂದು ಶಬ್ದ ಮಾಡುತ್ತ ಮೇಲಕ್ಕೆ ಹಾರು.
  • (ಛಾಯಾಚಿತ್ರ ಗ್ರಾಹಕ ಯಾ ಯವದ ವಿಷಯದಲ್ಲಿ) (ಮುಖ್ಯವಾಗಿ ದೂರದ ದೃಶ್ಯ ಸಮೀಪದೃಶ್ಯವಾಗುವಂತೆ) ತಟ್ಟನೆ, ಸರಕ್ಕನೆ ಬದಲಾಯಿಸು; ಮುಖ್ಯವಾಗಿ ಸರಸರನೆ ಸದ್ದುಮಾಡುತ್ತಾ ಬೇಗಬೇಗನೆ ಚಲಿಸು.

  • zoom
    ನಾಮವಾಚಕ
  • ವಿಮಾನ (ಗುಂಯ್‍ ಎನ್ನುತ್ತಾ) ತಟಕ್ಕನೆ ಮೇಲಕ್ಕೇರುವುದು; ವಿಮಾನ ಕಡಿದಾಗಿ, ವೇಗವಾಗಿ ಏರುವುದು.
  • (ಛಾಯಾಚಿತ್ರಣ) ಸಮೀಪೀಕರಣ ಯಾ ದೂರೀಕರಣ; ಛಾಯಾಚಿತ್ರಗ್ರಾಹಕದ ಮಸೂರದ ನಾಭಿದೂರವನ್ನು ವ್ಯತ್ಯಾಸಮಾಡಿ ದೂರದೃಶ್ಯವನ್ನು ಹತ್ತಿರದೃಶ್ಯವನ್ನಾಗಿ ಯಾ ಹತ್ತಿರದ್ದನ್ನು ದೂರದ್ದನ್ನಾಗಿ ಕಾಣುವಂತೆ ಮಾಡುವ ಚಿತ್ರೀಕರಣ.

  • zoom lens
    ನಾಮವಾಚಕ
    (ಛಾಯಾಚಿತ್ರಗ್ರಾಹಕ ಮೊದಲಾದವು) ಸಮೀಪೀಕರಣ ಮಸೂರ; ಮಸೂರದ ನಾಭಿದೂರವನ್ನು ವ್ಯತ್ಯಾಸಮಾಡಿ ದೂರದೃಶ್ಯಗಳನ್ನು ಸಈಪದೃಶ್ಯ ವಾಗಿ, ಸಈಪದವನ್ನು ದೂರವಾಗಿ ಕಾಣುವಂತೆ ತಟಕ್ಕನೆ ಬದಲಾಯಿಸಬಲ್ಲ ಮಸೂರ.

    zoomancy
    ನಾಮವಾಚಕ
    ಪ್ರಾಣಿಶಕುನ; ಪ್ರಾಣಿಗಳ ದರ್ಶನ ಯಾ ನಡವಳಿಕೆಗಳಿಂದ ಭವಿಷ್ಯ ಹೇಳುವುದು.


    logo