logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

umpire
ನಾಮವಾಚಕ
  • ನಿರ್ಣಯಕಾರ; ನ್ಯಾಯನಿರ್ಣಾಯಕ; ವಾದಿಗಳಲ್ಲಿ ಭಿನ್ನಾಭಿಪ್ರಾಯ ಬಂದಾಗ ಮಧ್ಯಸ್ಥಿಕೆ ವಹಿಸಲು ಯಾ ನ್ಯಾಯ ದೊರಕಿಸಲು ಕರೆಯುವ ಮೂರನೆಯವನು.
  • ಮಧ್ಯಸ್ಥಗಾರ; ವ್ಯಾಜ್ಯವಿಮರ್ಶಕ; ವ್ಯಾಜ್ಯ ಬಂದಾಗ ನಿರ್ಣಯಿಸಲು ಆರಿಸಲಾಗುವವನು.
  • (ಕ್ರಿಕೆಟ್‍ ಮೊದಲಾದ ಆಟಗಳಲ್ಲಿ) ಅಂಪೈರು; ಆಟದ ತೀರ್ಪುಗಾರ; ಆಟಗಳ ನಿಯಮ ಪಾಲನೆ ಹಾಗೂ ವ್ಯಾಜ್ಯ ತೀರ್ಮಾನಕ್ಕೆ ನೇಮಕವಾದವನು.

  • umpire
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಆಟ ಮೊದಲಾದವುಗಳಲ್ಲಿ) ಅಂಪೈರ್‍ ಆಗು
  • (ವ್ಯಾಜ್ಯ ಮೊದಲಾದವುಗಳಲ್ಲಿ) ಮಧ್ಯಸ್ಥಗಾರನಾಗು; ಮಧ್ಯಸ್ಥಿಕೆ ನಡೆಸು.

  • umpireship
    ನಾಮವಾಚಕ
    = umpirage.

    umpteen
    ಗುಣವಾಚಕ
    (ಅಶಿಷ್ಟ)
  • ಹಲವರು; ಅನೇಕರು; ಬಹಳ; ವಿಪರೀತ: he was the umpteenth person to arrive ಅಲ್ಲಿಗೆ ಬಂದ ಅನೇಕರಲ್ಲಿ ಅವನೂ ಒಬ್ಬ.
  • ಅನೇಕ; ಬಹಳ.

  • umpteen
    ಸರ್ವನಾಮ
    ಅಸಂಖ್ಯಾತರು; ಅನಿರ್ದಿಷ್ಟ ಸಂಖ್ಯೆಯ ಹಲವರು.

    umpteenth
    ಗುಣವಾಚಕ
    ಹಲವರಲ್ಲಿನ; ಅನೇಕರ ನಡುವಣ: umpteenth person ಹಲವರಲ್ಲಿ ಒಬ್ಬ.

    umpty
    ಗುಣವಾಚಕ
    = 1umpteen.

    UN
    ಸಂಕ್ಷಿಪ್ತ
    United Nations.

    un-
    ಪೂರ್ವಪ್ರತ್ಯಯ
  • ಗುಣವಾಚಕಗಳು ಮತ್ತು ಕೃದಂತಗಳು ಹಾಗೂ ಅವುಗಳಿಂದ ನಿಷ್ಪನ್ನವಾದ ನಾಮಪದಗಳು ಮತ್ತು ಕ್ರಿಯಾವಿಶೇಷಣಗಳಿಗೆ ಸೇರಿ ಕೆಳಗಿನ ಅರ್ಥಗಳನ್ನು ಕೊಡುವ ಪೂರ್ವಪ್ರತ್ಯಯ
    1. ಅ–, ನಿ–, ನಿರ್‍– , ಅನ್‍–, –ಇಲ್ಲದ, –ಅಲ್ಲದ, –ಆಗಿರದ: unusable, uncalled-for, uneducated, unfailing, unofficially, unhappiness.
    2. ವಿರುದ್ಧ; ವ್ಯತಿರಿಕ್ತ; ವಿಲೋಮ; ಪ್ರತಿಲೋಮ: unselfish, unsociable, unscientific, unadvisable.
  • ಇಲ್ಲದ; ಕೊರತೆಯಿರುವ; ರಹಿತ; ಅಭಾವ: unrest, untruth.

  • un-
    ಪೂರ್ವಪ್ರತ್ಯಯ
    ಕ್ರಿಯಾಪದಗಳಿಗೆ, ಕೆಲವೊಮ್ಮೆ ಮಾತ್ರ ನಾಮಪದಗಳಿಗೆ, ಸೇರಿಸುವ, ಕೆಳಗೆ ಸೂಚಿಸಿರುವ ಅರ್ಥಗಳ ಕ್ರಿಯಾಪದಗಳನ್ನು ರೂಪಿಸಲು ಬಳಸುವ ಪೂರ್ವಪ್ರತ್ಯಯ.
  • ಯಾವುದೇ ಕ್ರಿಯೆ ಯಾ ಸ್ಥಿತಿಯನ್ನು ಪೂರ್ವಸ್ಥಿತಿಗೆ ಹಿಂದಿರುಗಿಸುವುದು ಯಾ ರದ್ದುಮಾಡುವುದು: undress, unbar, unbind, unlock, unsettle.
  • ತೆಗೆದುಹಾಕುವುದು ಯಾ ಬೇರ್ಪಡಿಸುವುದು: unmask, unfrock.
  • (-ಇಂದ) ಬಿಡಿಸುವುದು; ಬಿಡುಗಡೆಗೊಳಿಸುವುದು: unburden, uncage, uncase, unfold.
  • ಮುಂದೆ ಅಂತೆ ಇರದಾಗಿಸುವುದು, ಉದಾಹರಣೆಗೆ unman.


  • logo