(ದಕ್ಷಿಣ ಪೆಸಿಹಿಕ್ ಸಾಗರದಲ್ಲಿರುವ)ಟಾಹಿಟಿ ದ್ವೀಪವಾಸಿ; ಆ ದ್ವೀಪದ ದೇಶೀಯ.
ಟಾಹಿಟಿ ಭಾಷೆ.
Tahitian
ಗುಣವಾಚಕ
(ದಕ್ಷಿಣ ಪೆಸಿಹಿಕ್ ಸಾಗರದ) ಟಾಹಿಟಿ ದ್ವೀಪವಾಸಿಯ ಯಾ ಅವನಿಗೆ ಸಂಬಂಧಿಸಿದ.
ಟಾಹಿಟಿ ಭಾಷೆಯ, ಅದಕ್ಕೆ ಸಂಬಂಧಿಸಿದ.
ಟಾಹಿಟಿ ದ್ವೀಪದ, ಅದಕ್ಕೆ ಸಂಬಂಧಿಸಿದ.
tahr
ನಾಮವಾಚಕ
(ಹೆಮಿಟ್ರಗಸ್, ಮುಖ್ಯವಾಗಿ ಹೆಮಿಟ್ರಗಸ್ ಜೆಮ್ಲಹಿಕಸ್ ಕುಲದ ನೇಪಾಳದ ಯಾ ಹಿಮಾಲಯದ ಒಂದು) ಕಾಡುಜಿಂಕೆ; ಮೇಕೆ(ಯಂಥ) ಜಿಂಕೆ; ಅಜಹರಿಣ.
tahsil
ನಾಮವಾಚಕ
(ಭಾರತ) ತಹಸೀಲು; ತಾಲ್ಲೂಕು; ಆಡಳಿತದ ಒಂದು ವಿಭಾಗ.
tahsildar
ನಾಮವಾಚಕ
(ಭಾರತ) ತಹಸೀಲುದಾರ; ತಾಲ್ಲೂಕಿನ ಕಂದಾಯ ವಸೂಲಿ ಮೊದಲಾದವುಗಳ ಮುಖ್ಯ ಅಧಿಕಾರಿ.
Taig
ನಾಮವಾಚಕ
(ಅಶಿಷ್ಟ) (ಉತ್ತರ ಐರ್ಲೆಂಡಿನಲ್ಲಿ) ಪ್ರಾಟೆಸ್ಟಂಟರು ಕ್ಯಾಥೊಲಿಕರನ್ನು ಕರೆಯುವ ಹೆಸರು.
taiga
ನಾಮವಾಚಕ
(ಮುಖ್ಯವಾಗಿ ಸೈಬೀರಿಯಾದಲ್ಲಿನ) ಜೌಗು ಬಯಲು ಹಾಗೂ ಬೆಂಗಾಡು ಬಯಲುಗಳ ನಡುವಣ ಶಂಕುಮರಗಳ ನಿತ್ಯಹಸುರು ಕಾಡು.
tail
ನಾಮವಾಚಕ
ಪದಗುಚ್ಛ
ಬಾಲ; ಲಾಂಗೂಲ; ಪುಚ್ಛ; ತೋಕೆ.
ಬಾಲ; ಲಾಂಗೂಲ; ಪುಚ್ಛ:
ಆಕಾರದಲ್ಲಿ ಯಾ ಸ್ಥಾನದಲ್ಲಿ, ಯಾವುದೇ ವಸ್ತುವಿನ ಬಾಲದಂಥ ಭಾಗ, ಉದ್ದನೆಯ ಹಿಂಭಾಗದ ಚಾಚು; ಮುಖ್ಯವಾಗಿ ತುದಿಯಲ್ಲಿ ಕೆಳಕ್ಕೆ ಯಾ ಹೊರಕ್ಕೆ ಚಾಚಿಕೊಂಡಿರುವ ಯಾವುದೇ ವಸ್ತು: tail of the eye ಕಣ್ಣಿನ ಹೊರಮೂಲೆ; ಕಡೆಗಣ್ಣು. tail of a page ಪುಟದ ಅಡಿ, ಕೆಳಭಾಗ.
ಯಾವುದೇ ಒಂದರ (ಉದಾಹರಣೆಗೆ ಮೆರವಣಿಗೆಯ) ಹಿಂತುದಿ; ಅಂತ್ಯಭಾಗ; ಕೊನೆ(ಯ) ಭಾಗ.
ಜನರು, ವಾಹನಗಳು, ಮೊದಲಾದವುಗಳ ಉದ್ದಸಾಲು, ದೀರ್ಘಪಂಕ್ತಿ.
(ವಾಯುಫಲಕ, ಚುಕ್ಕಾಣಿ ಹಲಗೆ, ಮೊದಲಾದವುಗಳನ್ನೊಳಗೊಂಡ) ವಿಮಾನದ ಯಾ ರಾಕೆಟ್‍ನ ಹಿಂಭಾಗ.
ಮೋಟಾರು ವಾಹನದ ಹಿಂಭಾಗ, ಹಿಂತುದಿಯ ಭಾಗ.
ಧೂಮಕೇತುವಿನ ಬಾಲ; ಧೂಮಕೇತುವಿನ ಹಿಂಭಾಗದಲ್ಲಿರುವ ಹೊಳೆಯುವ ಕಣಗಳ ಬಾಲದಂಥ ರಾಶಿ.
(ಮುಖ್ಯವಾಗಿ ಒಂದು ಶ್ರೇಣಿ ಯಾ ಸರಣಿಯಲ್ಲಿನ) ಹಿಂತುದಿ; ಕಡೆಯ, ಅಂತ್ಯ–ಭಾಗ; ಕೆಳಮಟ್ಟದ ಯಾ ದುರ್ಬಲ ಭಾಗ.
(ಕ್ರಿಕೆಟ್) ಕೊನೆಯ ಬ್ಯಾಟುಗಾರರು; ಬ್ಯಾಟುಗಾರರ ತಂಡದಲ್ಲಿ ತೀರಾ ಕೊನೆಯಲ್ಲಿ ಆಡುವ ಸಾಮಾನ್ಯ, ದುರ್ಬಲ ಬ್ಯಾಟುಗಾರರು.