logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oblique oration
ನಾಮವಾಚಕ
(ಸಾಮಾನ್ಯವಾಗಿ ವರದಿಗಳಲ್ಲಿ ಪರೋಕ್ಷ ಕಥನದಲ್ಲಿ ಕಂಡುಬರುವ ಪುರುಷಾಂತರ, ಕಾಲಾಂತರ, ಮೊದಲಾದ ಬದಲಾವಣೆಗಳನ್ನೊಳಗೊಂಡ, ಒಬ್ಬನ ಭಾಷಣದ) ಪರೋಕ್ಷ–ಕಥನ, ವರದಿ.

oblique speech
ನಾಮವಾಚಕ
ಪರೋಕ್ಷ ಸಂಭಾಷಣೆ; ಒಬ್ಬನ ಸಂಭಾಷಣೆಯ ಪರೋಕ್ಷ ಕಥನ ಯಾ ವರದಿ.

obliquely
ಕ್ರಿಯಾವಿಶೇಷಣ
  • ಓರೆಯಾಗಿ; ನೇರವಾದ ಹಾದಿಯನ್ನು ಯಾ ದಿಕ್ಕನ್ನು ಬಿಟ್ಟು ಬೇರೆ ಹಾದಿಯಲ್ಲಿ ಯಾ ದಿಕ್ಕಿನಲ್ಲಿ ತಿರುಗಿ.
  • (ರೂಪಕವಾಗಿ) (ನೇರವಾದ ರೀತಿ ಬಿಟ್ಟು) ಪರೋಕ್ಷ ರೀತಿಯಿಂದ; ಸೂಚ್ಯವಾಗಿ; ವ್ಯಂಗ್ಯವಾಗಿ; ಅನ್ಯೋಕ್ತಿಯಲ್ಲಿ.

  • obliqueness
    ನಾಮವಾಚಕ
  • ಓರೆ(ಯಾಗಿರುವಿಕೆ); ಪ್ರವತೆ; ನೇರ ಹಾದಿ ಯಾ ದಿಕ್ಕನ್ನು ಬಿಟ್ಟು ಬೇರೆ ಹಾದಿ ಯಾ ದಿಕ್ಕಿನಲ್ಲಿ ತಿರುಗಿರುವಿಕೆ.
  • (ಕಥನದಲ್ಲಿ, ವರ್ಣನೆಯಲ್ಲಿ) ಪರೋಕ್ಷತೆ; ನೇರವಾಗಿಲ್ಲದಿರುವಿಕೆ; ಸುತ್ತು ಬಳಸು.

  • obliquity
    ನಾಮವಾಚಕ
  • ಸನ್ಮಾರ್ಗತ್ಯಾಗ; ಅಡ್ಡದಾರಿ ಹಿಡಿದಿರುವಿಕೆ; ವಕ್ರಮಾರ್ಗ ಹಿಡಿಯುವ ಪ್ರವೃತ್ತಿ; ಅಸನ್ಮಾರ್ಗ ಪ್ರವರ್ತನ; ಋಜುವಾದ ವಿಚಾರಮಾರ್ಗವನ್ನು ಯಾ ನೈತಿಕ ಸಾಧುತ್ವವನ್ನು ಬಿಟ್ಟು ಬೇರೆ ಮಾರ್ಗ ಹಿಡಿಯುವುದು.
  • ವಾಲಿಕೆ; ಬಾಗು; ಪ್ರವಣತೆ:
    1. ಸಮಾಂತರವಾಗಿ ಯಾ ಲಂಬವಾಗಿ ಇಲ್ಲದಿರುವಿಕೆ.
    2. ವಾಲಿಕೆಯ ಪ್ರಮಾಣ.

  • obliterate
    ಸಕರ್ಮಕ ಕ್ರಿಯಾಪದ
  • ಅಳಿಸಿಬಿಡು; ತೊಡೆದುಹಾಕು; ಒರಸಿಬಿಡು; ಉಜ್ಜಿಹಾಕು; ನಾಶಮಾಡು.
  • ನಿರ್ನಾಮಗೊಳಿಸು; ಕುರುಹಿಲ್ಲದಂತೆ ಮಾಡು; ಗುರುತುಳಿಯದಂತೆ ಮಾಡು.
  • (ಅಂಚೆಚೀಟಿ ಮೊದಲಾದವುಗಳ ಮೇಲೆ ಮಸಿ ಬಳಿದು, ಹೊಡೆದು ಹಾಕಿ) ಕೆಡಿಸು; ಮತ್ತೆ ಬಳಸದಂತೆ ಕೆಡಿಸಿ ಹಾಕು.

  • obliteration
    ನಾಮವಾಚಕ
  • ಅಳಿಸಿಬಿಡುವುದು; ತೊಡೆದುಹಾಕುವುದು; ಒರೆಸಿಬಿಡುವುದು; ಉಜ್ಜಿಹಾಕುವುದು; ನಾಶಮಾಡುವುದು.
  • ನಿರ್ನಾಮಗೊಳಿಸುವುದು; ಕುರುಹಿಲ್ಲದಂತೆ ಮಾಡುವುದು.

  • obliterative
    ಗುಣವಾಚಕ
  • ಅಳಿಸಿಬಿಡುವ; ತೊಡೆದುಹಾಕುವ; ನಾಶಮಾಡುವ.
  • ಕುರುಹಿಲ್ಲದಂತೆ ಮಾಡುವ.

  • obliterator
    ನಾಮವಾಚಕ
    ನಾಶಕ; ನಾಶಮಾಡುವಂಥದು, ಮುಖ್ಯವಾಗಿ ಅಂಚೆಚೀಟಿಗಳನ್ನು ರದ್ದು ಪಡಿಸುವ ಸಾಧನ.

    oblivion
    ನಾಮವಾಚಕ ಪದಗುಚ್ಛ
  • ಮರವೆ; ಮರೆವು; ವಿಸ್ಮೃತಿ, ಮರೆತಿರುವಿಕೆ ಯಾ ಮರೆಯಲ್ಪಟ್ಟಿರುವಿಕೆ.
  • ಅಸಡ್ಡೆ; ಕಡೆಗಣಿಕೆ; ಅಲಕ್ಷ್ಯ; ಉಪೇಕ್ಷಿತ ಸ್ಥಿತಿ.
  • ಕ್ಷಮಾದಾನ.


  • logo