logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Mafia
ನಾಮವಾಚಕ
ಮಾಹಿಯ:
  • ಮೂಲತಃ ಸಿಸಿಲಿಯಲ್ಲಿದ್ದ, ಈಗ ಇಟಲಿ ಮತ್ತು ಅಮೆರಿಕಗಳಲ್ಲೂ ಇರುವ, ವ್ಯವಸ್ಥಿತವಾದ ಅಂತರರಾಷ್ಟ್ರೀಯ ಅಪರಾಧಿಗಳ ತಂಡ.
  • (mafia) ರಹಸ್ಯ ಪ್ರಭಾವಿ ತಂಡ; ದುಷ್ಟ ಪ್ರಭಾವ ಬೀರುವುದೆಂದು ನಂಬಲಾಗಿರುವ ಗುಪ್ತ ತಂಡ.

  • Mafioso
    ನಾಮವಾಚಕ
    ಮಾಹಿಯ ತಂಡದ ಸದಸ್ಯ.

    mag
    ನಾಮವಾಚಕ
    (ಅಶಿಷ್ಟ) ಅರ್ಧ ಪೆನ್ನಿನಾಣ್ಯ.

    mag
    ನಾಮವಾಚಕ
    (ಆಡುಮಾತು) ನಿಯತಕಾಲಿಕ ಪತ್ರಿಕೆ.

    mag.
    ಸಂಕ್ಷಿಪ್ತ
  • magnesium.
  • magneto.
  • magnetic.

  • magazine
    ನಾಮವಾಚಕ ಪದಗುಚ್ಛ
    magazine gun ಮ್ಯಾಗಜೀನ್‍ ಬಂದೂಕು; ಒಳಗೆ ಜೋಡಿಸಲಾದ ಖಾನೆಯೊಳಗಿನಿಂದ ಕೋವಿಯ ನಳಿಕೆಯ ಹಿಂಭಾಗಕ್ಕೆ ಸರಿಯಾಗಿ ತೋಟಾ ತನಗೆ ತಾನೇ ಬಂದು ಕೂರುವಂತೆ ನಿಯೋಜಿಸಿರುವ ಕೋವಿ, ಬಂದೂಕು.
  • (ಸೈನಿಕ) ಉಗ್ರಾಣ; ಯುದ್ಧಕಾಲದಲ್ಲಿ ಸೈನ್ಯಕ್ಕೆ ಆಯುಧಗಳು, ಮದ್ದುಗುಂಡುಗಳು, ಆಹಾರ ಪದಾರ್ಥಗಳು, ಮೊದಲಾದವನ್ನು ಸಂಗ್ರಹಿಸಿಟ್ಟಿರುವ ಕೋಠಿ, ಉಗ್ರಾಣ.
  • ತೋಪುಖಾನೆ; ಂದೂಕು ಮದ್ದಿನ ಯಾ ಇತರ ಸ್ಫೋಟಕ ವಸ್ತುಗಳ ಉಗ್ರಾಣ.
  • ಸಂಕೀರ್ಣ ಪತ್ರಿಕೆ; ನಿಯತಕಾಲಿಕ; ಮ್ಯಾಗಜೀನ್‍; ಹಲವರ ಕಥೆಗಳು, ಲೇಖನಗಳನ್ನೊಳಗೊಂಡ (ಈಗ ಸಾಮಾನ್ಯವಾಗಿ ಸಚಿತ್ರವಾಗಿರುವ) ನಿಯತಕಾಲಿಕ ಬರಹಗಳ ಸಂಗ್ರಹ.
  • ಮ್ಯಾಗಜೀನ್‍:
    1. ಬಂದೂಕು ಮೊದಲಾದವುಗಳಿಗೆ ಸ್ವಯಂಚಾಲಿತವಾಗಿ ಒದಗಿಸುವ ತೋಟಾಗಳನ್ನು ಇಡಲು ಇರುವ ಕೋಶ, ಗೂಡು.
    2. ಕ್ಯಾಮರ, ಸ್ಲೈಡ್‍ ಪ್ರೊಜೆಕ್ಟರು, ಮೊದಲಾದವುಗಳಿಗೆ ಹಿಲಮು ಒದಗಿಸುವ ಇಂಥದೇ ಸಾಧನ.

  • Magdalen
    ನಾಮವಾಚಕ
  • ಸುಧಾರಿತ ವ್ಯಭಿಚಾರಿಣಿ; ಸಾಧ್ವಿಯಾದ ಜಾರಿಣಿ; ಸಾಧ್ವಿಯಾಗಿ ಪರಿವರ್ತನಗೊಂಡ ಜಾರಿಣಿ; ಸುಧಾರಿತ ಸೂಳೆ; ಗರತಿಯಾಗಿ ಪರಿವರ್ತಿತಳಾದ ಹಾದರಗಿತ್ತಿ.
  • ಸುಧಾರಿತ ವ್ಯಭಿಚಾರಿಣಿ ಗೃಹ; ಗರತಿಯರಾಗಿ ಪರಿವರ್ತಿತರಾದ ಹಾದರಗಿತ್ತಿಯರ ಪೋಷಣಾಲಯ.

  • Magdalenian
    ಗುಣವಾಚಕ
    (ಪ್ರಾಕ್ತನಶಾಸ್ತ್ರ) ಮ್ಯಾಗ್ಡಲೀನಿಯನ್‍; (ಹ್ರಾನ್ಸಿನ ಲ ಮ್ಯಾಡೆಲಿನ್‍ ಎಂಬಲ್ಲಿ ದೊರೆತ ಕೊಂಬಿನ ಮತ್ತು ಮೂಳೆಗಳ ಅವಶೇಷಗಳು ಸೂಚಿಸುವ) ಅರ್ವಾಚೀನ ಪುರಾತನ ಶಿಲಾಯುಗದ ಯಾ ಆ ಶಿಲಾಯುಗಕ್ಕೆ ಸಂಬಂಧಿಸಿದ.

    Magdalenian
    ನಾಮವಾಚಕ
    ಮ್ಯಾಗ್ಡಲೀನಿಯನ್‍ ಸಂಸ್ಕೃತಿ; ಅರ್ವಾಚೀನ ಪುರಾತನ ಶಿಲಾಯುಗದ ಸಂಸ್ಕೃತಿ.

    mage
    ನಾಮವಾಚಕ
  • (ಪ್ರಾಚೀನ ಪ್ರಯೋಗ) ಮಂತ್ರವಾದಿ.
  • ಪಂಡಿತ; ವಿದ್ವಾಂಸ.


  • logo