logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

damozel
ನಾಮವಾಚಕ
(ಪ್ರಾಚೀನ ಪ್ರಯೋಗ) damselನ ರೂಪಾಂತರ.

damp
ನಾಮವಾಚಕ
  • ತೇವ; ತನು; ತಣ್ಪು; ಪಸೆ; ಆರ್ದತೆ.
  • ಗಣಿ ಮೊದಲಾದವುಗಳಲ್ಲಿ ಸೇರಿರುವ ಇಂಗಾಲಾಮ್ಲ.
  • ಮಂಕು; ಖಿನ್ನತೆ; ಮ್ಲಾನತೆ; ನಿರುತ್ಸಾಹ; ಉತ್ಸಾಹಭಂಗ; ವಿಷಣ್ಣತೆ; ಕಂಗೆಡುವಿಕೆ: cast (or strike) a damp over (or into) ನಿರುತ್ಸಾಹಗೊಳಿಸು; ತಣ್ಣೀರೆರಚು; ಉತ್ಸಾಹಭಂಗ ಮಾಡು;ಉತ್ಸಾಹಗೆಡಿಸು.
  • = choke-damp.
  • = firedamp.

  • damp
    ಗುಣವಾಚಕ
  • ತೇವವಿರುವ; ಒದ್ದೆಯಾದ; ಅರ್ದ: damp towel ಒದ್ದೆ ಟವಲ್ಲು.
  • ನಿರುತ್ಸಾಹದ; ಉತ್ಸಾಹಶೂನ್ಯ; ವಿಷಣ್ಣನಾದ.

  • damp
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    damp off (ಸಸ್ಯಗಳ ವಿಷಯದಲ್ಲಿ) ತೇವವಿರುವ ಪ್ರದೇಶಗಳಲ್ಲಿ ಶಿಲೀಂಧ್ರಗಳು ತಗಲಿ ಸತ್ತುಹೋಗು, ನಾಶವಾಗು.
  • ಆರಿಸು; ನಂದಿಸು; ಆಡಚು; ಮಂದಗೊಳಿಸು; ಉಸಿರಾಡದಂತೆ ಮಾಡು; ಗಾಳಿಯಾಡದಂತೆ ಮಾಡು: damp down a fire (ಬೂದಿ ಮೊದಲಾದವನ್ನು ಮುಚ್ಚಿ, ಗಾಳಿಯನ್ನು ನಿಯಂತ್ರಿಸಿ) ಬೆಂಕಿಯನ್ನು – ಅಡಚು, ಆರಿಸು, ಅಡಗಿಸು.
  • (ಭೌತವಿಜ್ಞಾನ) (ಶಬ್ದತರಂಗಗಳು ಮೊದಲಾದವುಗಳ) ಕಂಪನಗುಂದಿಸು; ಕಂಪಿಸುತ್ತಿರುವ ಕಾಯದ ಯಾ ಅಲೆಯ ಕಂಪನವಿಸ್ತಾರವನ್ನು ಕ್ರಮಕ್ರಮವಾಗಿ ಕಡಮೆ ಮಾಡು.
  • (ಸಂಗೀತ) (ತಂತಿಗಳ) ಸ್ಪಂದನವನ್ನು ತಡೆ, ನಿಲ್ಲಿಸು.
  • ಉತ್ಸಾಹಭಂಗ ಮಾಡು; ಆಸೆಗುಂದಿಸು; ತಣ್ಣೀರೆರಚು; ನಿರುತ್ಸಾಹಗೊಳಿಸು.
  • ತೇವಮಾಡು; ಒದ್ದೆಯಾಗಿಸು; ಪಸೆ ಬರಿಸು.

  • damp course
    ನಾಮವಾಚಕ
    ತೇವತಡೆಯ ವರಿಸೆ; ಆರ್ದತಾ ನಿರೋಧಕ; ಗೋಡೆಯಲ್ಲಿ ತೇವ ಮೇಲೇರದಂತೆ ನೆಲದ ಹತ್ತಿರದ ಗೋಡೆಗೆ ಹಾಕುವ ಶೈತ್ಯ ನಿರೋಧಕ ಹೆಲ್ಟ್‍ ಬಟ್ಟೆ, ಪದರ, ಮೊದಲಾದವು.

    damp-proof
    ಗುಣವಾಚಕ ಪದಗುಚ್ಛ
    ಶೈತ್ಯಾಭೇದ್ಯ; ತೇವ ತಡೆಯುವ; ಆರ್ದತಾ, ಶೈತ್ಯ – ನಿರೋಧಕ. damp-proof course = damp course.

    dampen
    ಕ್ರಿಯಾಪದ
    (ಅಮೆರಿಕನ್‍ ಪ್ರಯೋಗ) = 3damp.

    damper
    ನಾಮವಾಚಕ
  • ಉತ್ಸಾಹಭಂಜಕ; ನಿರುತ್ಸಾಹಕಾರಿ; ಉಮೇದು ಕೆಡಿಸುವ ವ್ಯಕ್ತಿ ಯಾ ವಿಷಯ.
  • (ಭೌತವಿಜ್ಞಾನ) ಮಿಡಿತ ತಡೆ; ಸ್ಪಂದನ ರೋಧಕ; ಕಂಪನರೋಧಕ; ಮಾಪಕಗಳ ತೋರು ಸೂಜಿಗಳ ಕಂಪನವನ್ನು; ತಡೆಯುವ ಸಾಧನ.
  • ಹರಿವು ತಡೆ; ಪ್ರವಾಹ ನಿರೋಧಕ; ಯಾವುದೇ ಗಳಿಗೆಯಲ್ಲಿ ಹರಿಯುವ ಅನಿಲದ ಪ್ರವಾಹವನ್ನು ಕಡಿಮೆ ಮಾಡುವ – ಕವಾಟ, ತಗಡು.
  • ಆರ್ದಕ; ಆರ್ದಕಾರಿ; ತೇವಕ; ಕಾಗದ, ಸ್ಟಾಂಪು, ಮೊದಲಾದವುಗಳಿಗೆ ನೀರು ಸವರುವ ಸಾಧನ.
  • ಕೆಂಡರೊಟ್ಟೆ; (ಆಸ್ಟ್ರೇಲಿಯ, ನ್ಯೂಸೀಲಂಡ್‍, ಮೊದಲಾದವಲ್ಲಿ) ಪೊದೆನಿವಾಸಿಗಳು ಮೊದಲಾದವರು ಬೆಂಬೂದಿಯಲ್ಲಿ ಸುಡುವ, ಹುದುಗದ ರೊಟ್ಟಿ ಯಾ ಬ್ರೆಡ್ಡು.
  • ಷಾಕ್‍ ಅಬ್ಸಾರ್ಬರು; ಆಘಾತ ಹೀರುಗ; ಮೋಟಾರು ವಾಹನ ಮೊದಲಾದವುಗಳು ರಸ್ತೆಯ ದೋಷಗಳಿಂದಾಗಿ ಎಗರುವುದನ್ನು ನಿರರ್ಥಕಗೊಳಿಸುವ ವ್ಯವಸ್ಥೆ.
  • (ಸಂಗೀತ) ನಾದರೋಧಕ; ಮಿಡಿತಡೆ; ಪಿಯಾನೋವಾದ್ಯದ ತಂತಿಗಳನ್ನು ಅದುಮುವುದರ ಮೂಲಕನಾದ ಹೊರಡದಂತೆ ತಡೆಯುವ ಮೆತ್ತೆ.

  • dampish
    ಗುಣವಾಚಕ
    ತೇವವಾದ; ಆರ್ದ(ವಾದ); ಒದ್ದೆಯಾದ.

    damply
    ಕ್ರಿಯಾವಿಶೇಷಣ
    ತೇವವಾಗಿ; ಒದ್ದೆಯಾಗಿ; ಆರ್ದವಾಗಿ.


    logo