logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cadency
ನಾಮವಾಚಕ
(ಮುಖ್ಯವಂಶದಿಂದ ಹೊರಟ) ಕಿರಿಯ ಶಾಖೆಯ ಸಂತತಿ.

cadential
ಗುಣವಾಚಕ
ಗಾಯನದ ಯಾ ವಾದನದ—ಮುಕ್ತಾಯದ ಯಾ ಮುಕ್ತಾಯಕ್ಕೆ ಸಂಬಂಧಿಸಿದ.

cadenza
ನಾಮವಾಚಕ
(ಸಂಗೀತ) ಮುಕ್ತಾಯದ ವೈಖರಿ; ಮುಕ್ತಾಯದಲ್ಲಿ ಮಾಡುವ ಗಾಯನದ ಯಾ ವಾದನದ—ವೈಖರಿ ಯಾ ವೈಖರಿಯ ಆಡಂಬರದ ಕೃತಿಭಾಗ.

cadet
ನಾಮವಾಚಕ
  • ಕಿರಿಯ ಮಗ; ಚಿಕ್ಕಮಗ.
  • ಕನಿಷ್ಠಪುತ್ರ; ಎಲ್ಲರಿಗಿಂತ ಕಿರಿಯ ಮಗ; ಕೊನೆಯ ಮಗ.
  • ಸೈನ್ಯ ಕಾಲೇಜು ವಿದ್ಯಾರ್ಥಿ; ನೌಕಾಸೇನೆ ಯಾ ಭೂಸೈನ್ಯ ಯಾ ವಾಯುಸೇನೆಯ ಕಾಲೇಜಿನ ವಿದ್ಯಾರ್ಥಿ.
  • ತರಪೇತಿ ತಂಡದ ಸದಸ್ಯ; ಪ್ರಾಥಮಿಕ ಸೈನ್ಯಶಿಕ್ಷಣ ಯಾ ಪೊಲೀಸ್‍ ತರಪೇತಿ ಪಡೆಯುವ ತಂಡದ ಸದಸ್ಯ.
  • (ನ್ಯೂಸೀಲಂಡ್‍) ಕುರಿಸಾಕಣೆಯನ್ನು ಕಲಿಯುವ ಹುಡುಗ, ಯುವಕ.

  • cadet-corps
    ನಾಮವಾಚಕ
    ಕೆಡೆಟ್‍ಪಡೆ; ಮರಿಯೋಧಪಡೆ; ಪ್ರಾಥಮಿಕ ಸೈನ್ಯಶಿಕ್ಷಣ ಪಡೆಯುತ್ತಿರುವ ಶಾಲಾಮಕ್ಕಳ ತಂಡ.

    cadetship
    ನಾಮವಾಚಕ
  • (ಸಮರವಿದ್ಯೆಯ) ಮರಿಯೋಧಗಿರಿ; ವಿದ್ಯಾರ್ಥಿದಶೆ.
  • (ಸಮರ ವಿದ್ಯೆಯ) ಕೆಡೆಟ್‍ ಸನ್ನದು; ವಿದ್ಯಾರ್ಥಿ ಸನ್ನದು.

  • cadge
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ತಿರುಪೆ ಎತ್ತು; ಭಿಕ್ಷೆ ಬೇಡು; ತಿರಿ; ಯಾಚಿಸು.
  • ತಿರುಪೆ ಎತ್ತಿ ಪಡೆ.
  • ಹೊಗಳಿ ಯಾ ಹಲ್ಲುಕಿರಿದು—ಗಿಟ್ಟಿಸು, ಪಡೆ.

  • cadger
    ನಾಮವಾಚಕ
  • ಹಮಾಲ; ಹೊರುವವ.
  • ಹೊತ್ತು ಮಾರುವವ; ಪೇರಿವ್ಯಾಪಾರಿ; ತಿರುಗುಮಾರಾಟಗಾರ.
  • ತಿರುಕ; ಭಿಕ್ಷುಕ; ಯಾಚಕ; ತಿರುಪೆ—ಎತ್ತುವವ, ಬೇಡುವವ.

  • cadi
    ನಾಮವಾಚಕ
    (ತುರ್ಕಿ, ಅರೇಬಿಯ, ಪರ್ಷಿಯ, ಮೊದಲಾದ ಮುಸ್ಲಿಮ್‍ ದೇಶಗಳಲ್ಲಿರುವ) ನ್ಯಾಯಾಧೀಶ; ಇಸ್ಲಾಂ ಧರ್ಮದ ನ್ಯಾಯಶಾಸ್ತ್ರದ ಪ್ರಕಾರ ನಿರ್ಣಯಗಳನ್ನು ಮಾಡುವವನು.

    cadjan
    ನಾಮವಾಚಕ
  • ತಾಳೆಯಗರಿ; ತೆಂಗಿನಗರಿ; (ದಕ್ಷಿಣ ಭಾರತದಲ್ಲಿ) ಛಾವಣಿಗಾಗಿ ಉಪಯೋಗಿಸುವ, ಹೆಣೆದ—ತೆಂಗಿನ ಯಾ ತಾಳೆಯ ಗರಿ.
  • (ಬರೆಯಲು ಬಳಸುವ) ತಾಳೆಗರಿ; ಓಲೆಗರಿ; ಹನೆಗರಿ.
  • ತಾಳೆಗ್ರಂಥ; ಓಲೆಪುಸ್ತಕ; ಓಲೆಗ್ರಂಥ.


  • logo