logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

back-stair(s)
ಗುಣವಾಚಕ
(ರೂಪಕವಾಗಿ) = 1back-door.

back-stairs
ನಾಮವಾಚಕ
  • (ಸೇವಕರು ಮೊದಲಾದವರು ಬಳಸುವ) ಮನೆಯ ಹಿಂಭಾಗದ (ಮಹಡಿ) ಮೆಟ್ಟಿಲು.
  • ಒಳಸಂಚು ನಡೆಸುವ – ಜಾಗ, ಸ್ಥಳ, ಎಡೆ, ವಿಧಾನ.

  • back-sword
    ನಾಮವಾಚಕ
    ಒಬ್ಬಾಯಿಕತ್ತಿ; ಒಂದೇ ಕಡೆ ಹರಿತಬಾಯುಳ್ಳ ಕತ್ತಿ.

    back-up
    ನಾಮವಾಚಕ
  • (ಯಾವುದೇ ರೂಪದ) ಸಹಾಯ; ನೆರವು; ಬೆಂಬಲ.
  • (ಮುಖ್ಯವಾಗಿ ನೀರು ಹರಿಯುವುದು ನಿಂತದ್ದರಿಂದ ಆದ) ಶೇಖರಣೆ; ಸಂಚಯ; ಸಂಗ್ರಹಣೆ.
  • ಉಳಿಸಿಟ್ಟದ್ದು; ಕಾಯ್ದಿಟ್ಟದ್ದು; ಮೀಸಲು: a back-up for emergency use ಆಪತ್ತಿನ ಬಳಕೆಗಾಗಿ ಉಳಿಸಿಟ್ಟದ್ದು ಯಾ (ಇಟ್ಟ) ಮೀಸಲು.
  • (ಅಮೆರಿಕನ್‍ ಪ್ರಯೋಗ) (ವಾಹನ ಮೊದಲಾದವುಗಳ) ಕ್ಯೂ; ಸಾಲು.

  • back-up light
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಹಿಂದೀಪ; ವಾಹನವು ಹಿಂಚಲಿಸುವಾಗ ಮಾತ್ರ ಹತ್ತಿಕೊಂಡು ಹಿಂಭಾಗದ ರಸ್ತೆಯನ್ನು ಬೆಳಗುವಂತೆ ಹೊಂದಿಸಿರುವ, ಮೋಟಾರು ವಾಹನದ ಹಿಂಭಾಗದಲ್ಲಿರುವ ದೀಪ.

    backache
    ನಾಮವಾಚಕ
    ಬೆನ್ನು ನೋವು; ಮುಖ್ಯವಾಗಿ ಬೆನ್ನಿನ ಕಡೆಯ ಸೊಂಟ ಪ್ರದೇಶದಲ್ಲಿ ಸ್ನಾಯುವಿನ ಯಾ ಅಸ್ಥಿರಜ್ಜುವಿನ ಎಳೆತದಿಂದ ಉಂಟಾಗುವ ನೋವು.

    backband
    ನಾಮವಾಚಕ
    ಬೆನ್ನುಪಟ್ಟಿ; ಜೊತ್ತಗೆ; ವಾಹನದ ಮೂಕಿಗಳನ್ನು ಹಿಡಿದುಕೊಂಡು ಕುದುರೆಯ ಕತ್ತಿನ ಮೇಲೆ ಹಾಯ್ದಿರುವ ಪಟ್ಟಿ.

    backbend
    ನಾಮವಾಚಕ
    (ವ್ಯಾಯಾಮದಲ್ಲಿ ನಿಂತ ಸ್ಥಿತಿಯಿಂದ ಕೈಗಳು ನೆಲವನ್ನು ಮುಟ್ಟುವಂತೆ) ಹಿಂಬಾಗುವುದು.

    backbite
    ಅಕರ್ಮಕ ಕ್ರಿಯಾಪದ
    (ವ್ಯಕ್ತಿಯ ಗೈರು ಹಾಜರಿಯಲ್ಲಿ) ಚಾಡಿ ಹೇಳು; ಹಿಂದೆ ದೂರು; ಹಿಂದಾಡು.

    backbiter
    ನಾಮವಾಚಕ
    ಚಾಡಿಕೋರ; ಪಿಸುಣ; ವ್ಯಕ್ತಿಯ ಹಿಂದೆ, ಗೈರುಹಾಜರಿಯಲ್ಲಿ ಆಡಿಕೊಳ್ಳುವವನು.


    logo