ಕಣ್ಣುಬಳಕೆಯ; ಕಣ್ಣುಗಳನ್ನು ಸರಿಯಾಗಿ ಯಾ ಮಾಮೂಲಾಗಿ ಬಳಸುವುದಕ್ಕೆ ಸಂಬಂಧಿಸಿದ.
orthoptics
ನಾಮವಾಚಕ
(ವೈದ್ಯಶಾಸ್ತ್ರ) ನೇತ್ರಪರೀಕ್ಷೆ ಯಾ ನೇತ್ರಚಿಕಿತ್ಸೆ; (ಮುಖ್ಯವಾಗಿ ಕಣ್ಣಿನ ಸ್ನಾಯುಗಳಿಗೆ ಸಂಬಂಧಿಸಿದಂತೆ) ಕಣ್ಣಿನ ವಿಷಮತೆ ಯಾ ಲೋಪದೋಷಗಳನ್ನು ಅಧ್ಯಯನ ಮಾಡುವುದು ಯಾ ಅದಕ್ಕೆ ಚಿಕಿತ್ಸೆ ಮಾಡುವುದು.
orthoptist
ನಾಮವಾಚಕ
ಕಣ್ಣುತಜ್ಞ; ನೇತ್ರತಜ್ಞ; ಕಣ್ಣಿನ ವಿಷಮತೆ ಯಾ ಲೋಪಗಳಿಗೆ ಚಿಕಿತ್ಸೆ ಮಾಡುವುದರಲ್ಲಿ ತಜ್ಞ.
orthorhombic
ಗುಣವಾಚಕ
ಸಮವಜ್ರಾಕೃತಿಯ; ಸಮವಜ್ರಾಕೃತಿ ಸ್ಫಟಿಕ ವರ್ಗದ.
orthorhombic system
ನಾಮವಾಚಕ
(ಸ್ಫಟಿಕ ವಿಜ್ಞಾನ) ಸಮವಜ್ರಾಕೃತಿ ವರ್ಗ; ಲಂಬವಜ್ರಾತಿ ವರ್ಗ; ಪರಸ್ಪರ ಸಮವಾಗಿಲ್ಲದ ಮೂರು ಅಕ್ಷಗಳು ಒಂದಕ್ಕೊಂದು ಲಂಬವಾಗಿರುವ ಸ್ಫಟಿಕವರ್ಗ.
orthosilicic acid
ನಾಮವಾಚಕ
(ರಸಾಯನವಿಜ್ಞಾನ) ಆರ್ತೋಸಿಲಿಸಿಕ್ ಆಮ್ಲ; ದ್ರಾವಣದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಹಾಗೂ ಲವಣ ಮತ್ತು ಎಸ್ಟರುಗಳ ರೂಪದಲ್ಲಿ ಗೊತ್ತಿರುವ ಒಂದು ದುರ್ಬಲ ಆಮ್ಲ, ${\rm H}_4{\rm SiO}_4$.
orthotone
ಗುಣವಾಚಕ
(ಪದದ ವಿಷಯದಲ್ಲಿ) (ಹಿಂದಿನ ಯಾ ಮುಂದಿನ ಪದದ ಉಚ್ಚಾರಣೆಯೊಂದಿಗೆ ಸೇರಿಹೋಗದ) ಸ್ವತಂತ್ರವಾದ ಒತ್ತುಳ್ಳ ಉಚ್ಚಾರಣೆಯಿಂದ ಕೂಡಿದ; ಸ್ವತಂತ್ರ ಸ್ವರಭಾರವುಳ್ಳ.
orthotone
ನಾಮವಾಚಕ
ಸ್ವತಂತ್ರ ಸ್ವರಭಾರವುಳ್ಳ ಪದ.
ortolan
ನಾಮವಾಚಕ
(ಪ್ರಾಣಿವಿಜ್ಞಾನ) ಆರ್ಟೊಲನ್ (ಹಕ್ಕಿ); ಸಣ್ಣ ಮೈಯ, ತಿನ್ನಲು ರುಚಿಯಾಗಿರುವುದೆಂದು ಭಾವಿಸಲಾಗಿರುವ, ಯೂರೋಪಿನ ತೋಟದ ಬಂಟಿಂಗ್ (ಹಕ್ಕಿ).