logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ineligible
ಗುಣವಾಚಕ
  • (ಆಯ್ಕೆಗೆ) ತಕ್ಕವನಲ್ಲದ; ಅರ್ಹನಲ್ಲದ; ತಕ್ಕದ್ದಲ್ಲದ; ಅರ್ಹವಲ್ಲದ.
  • ಅಯೋಗ್ಯ; ಅನಪೇಕ್ಷಣೀಯ.

  • ineligibly
    ಕ್ರಿಯಾವಿಶೇಷಣ
    ಅರ್ಹವಾಗಿಲ್ಲದೆ; ಅನರ್ಹವಾಗಿ; ಆಯ್ಕೆಗೆ ಅರ್ಹತೆ ಇರದೆ.

    ineluctable
    ಗುಣವಾಚಕ
  • ಹೋರಾಡಿ ಉಪಯೋಗವಿಲ್ಲದ.
  • ಅಪರಿಹಾರ್ಯ; ಅನಿರೋಧ್ಯ; ಅನಿವಾರ್ಯ; ತಪ್ಪಿಸಿಕೊಳ್ಳಲಾಗದ.

  • ineluctably
    ಕ್ರಿಯಾವಿಶೇಷಣ
  • ಹೋರಾಡಿ ಉಪಯೋಗವಿಲ್ಲದೆ.
  • ಅಪರಿಹಾರ್ಯವಾಗಿ; ಅನಿವಾರ್ಯವಾಗಿ.

  • inept
    ಗುಣವಾಚಕ
  • (ಉದ್ದೇಶಕ್ಕೆ ಸರಿಯಾಗಿ) ಹೊಂದದ; ಹೊಂದಿಸಲಾಗದ; ತಕ್ಕದ್ದಲ್ಲದ; ಅಸಂಗತ; ಅಸಮಂಜಸ; ಅನುಚಿತ; ಅನರ್ಹ ಸಮಯೋಚಿತವಲ್ಲದ; ಸಂದರ್ಭೋಚಿತವಲ್ಲದ.
  • ಅರ್ಥಶೂನ್ಯ; ಅವಿವೇಕದ; ದಡ್ಡತನದ; ಬುದ್ಧಿಯಿಲ್ಲದ.
  • ಅಕುಶಲ; ಒಡ್ಡೊಡ್ಡಾಗಿ ಮಾಡಿದ.

  • ineptitude
    ನಾಮವಾಚಕ
  • (ಉದ್ದೇಶಕ್ಕೆ ಸರಿಯಾಗಿ) ಹೊಂದದಿರುವಿಕೆ; ಹೊಂದಿಸಲಾರದಿರುವಿಕೆ; ತಕ್ಕದ್ದಲ್ಲದಾಗಿರುವಿಕೆ; ಅನುಚಿತತೆ; ಅನರ್ಹತೆ; ಅಸಮಂಜಸತೆ; ಅಸಾಂಗತ್ಯ; ಸಮಯೋಚಿತವಾಗಿಲ್ಲದಿರುವಿಕೆ; ಸಂದರ್ಭೋಚಿತವಾಗಿಲ್ಲದಿರುವಿಕೆ.
  • ಅರ್ಥಶೂನ್ಯತೆ; ಅವಿವೇಕದಿಂದ ಕೂಡಿರುವಿಕೆ; ದಡ್ಡತನವನ್ನು, ಬುದ್ಧಿಶೂನ್ಯತೆಯನ್ನು – ತೋರಿಸುವಂತಿರುವಿಕೆ.
  • ಅಕೌಶಲ.

  • ineptly
    ಕ್ರಿಯಾವಿಶೇಷಣ
  • (ಉದ್ದೇಶಕ್ಕೆ ಸರಿಯಾಗಿ) ಹೊಂದದೆ; ಹೊಂದಿಸಲಾಗದೆ; ಅನುಚಿತವಾಗಿ; ಸಮಯೋಚಿತವಲ್ಲದೆ; ಸಂದರ್ಭೋಚಿತವಲ್ಲದ ರೀತಿಯಲ್ಲಿ.
  • ಅರ್ಥಶೂನ್ಯವಾಗಿ; ದಡ್ಡತನವನ್ನು ಯಾ ಬುದ್ಧಿಶೂನ್ಯತೆಯನ್ನು ತೋರಿಸುವಂತೆ.
  • ಅಕುಶಲವಾಗಿ.

  • ineptness
    ನಾಮವಾಚಕ
    = ineptitude.

    inequable
    ಗುಣವಾಚಕ
  • ಒಂದೇ ರೂಪದಲ್ಲಿಲ್ಲದ; ಒಂದೇ ರೀತಿಯಲ್ಲದ; ಏಕ ರೂಪವಾಗಿಲ್ಲದ; ಒಂದೇ ಸಮವಲ್ಲದ; ಸಮನಾಗಿಲ್ಲದ; ಅಸಮವಾದ.
  • ಸರಿಯಾಗಿ ಹಂಚಿರದ; ಅಸಮ ವಿತರಣೆಯ.

  • inequality
    ನಾಮವಾಚಕ
  • (ಪರಿಮಾಣ, ಗುಣ, ದರ್ಜೆ, ಸ್ಥಿತಿಗತಿಗಳು, ಮೊದಲಾದವುಗಳಲ್ಲಿ) ಅಸಮತೆ; ವಿಷಮತೆ; ಹೆಚ್ಚುಕಡಿಮೆಯಾಗಿರುವುದು.
  • ವ್ಯತ್ಯಾಸವಾಗುವ – ಸ್ವಭಾವ, ಲಕ್ಷಣ.
  • (ಮೇಲ್ಮೈಯ ವಿಷಯದಲ್ಲಿ) ಅಸಮತೆ; ಸಮವಾಗಿಲ್ಲದಿರುವುದು; ಮಟ್ಟವಾಗಿಲ್ಲದಿರುವುದು; ಉಬ್ಬುತಗ್ಗುಗಳುಳ್ಳದ್ದಾಗಿರುವುದು.
  • (ಖಗೋಳ ವಿಜ್ಞಾನ) ಅಸಮತೆ; ಆಕಾಶಕಾಯವೊಂದರ ಚಲನೆಯಲ್ಲಿ ಆಗುವ ಕ್ರಮಭಂಗ ಯಾ ಹಾಗೆ ಉಂಟಾಗುವ ಕ್ರಮಭಂಗ ಪ್ರಮಾಣ.
  • (ಗಣಿತ) ಎರಡು ಉಕ್ತಿಗಳು ಸಮವಲ್ಲವೆಂದು ಸೂಚಿಸುವ ಸೂತ್ರ; ವಿಷಮತಾಸೂತ್ರ; ಅಸಮತಾಸೂತ್ರ.


  • logo