logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inefficiency
ನಾಮವಾಚಕ
  • ಅನರ್ಹತೆ; ತಕ್ಕ(ಷ್ಟು) ಯೋಗ್ಯತೆ, ಅರ್ಹತೆ – ಇಲ್ಲದಿರುವಿಕೆ.
  • ಅಸಮರ್ಥತೆ; ಅದಕ್ಷತೆ; ಪೂರ್ಣ ಸಾಮರ್ಥ್ಯ, ದಕ್ಷತೆ – ಇಲ್ಲದಿರುವುದು.
  • ಪರಿಣಾಮಕಾರಿಯಾಗಿಲ್ಲದಿರುವಿಕೆ.

  • inefficient
    ಗುಣವಾಚಕ
  • ನಿಷ್ಫಲ; ವ್ಯರ್ಥ; ಪರಿಣಾಮಕಾರಿಯಲ್ಲದ; ಫಲಕಾರಿಯಲ್ಲದ.
  • (ವ್ಯಕ್ತಿಯ ವಿಷಯದಲ್ಲಿ) ಅನರ್ಹ; ಯೋಗ್ಯತೆಯಿಲ್ಲದ; ತಕ್ಕ ಅರ್ಹತೆಯಿಲ್ಲದ.
  • ಅಸಮರ್ಥ; ಅದಕ್ಷ; ಪೂರ್ಣ ಸಾಮರ್ಥ್ಯವಿಲ್ಲದ; ಸಾಕಷ್ಟು ದಕ್ಷತೆಯಿಲ್ಲದ.

  • inefficiently
    ಕ್ರಿಯಾವಿಶೇಷಣ
  • ಅನರ್ಹವಾಗಿ; ತಕ್ಕ(ಷು) ಅರ್ಹತೆ, ಯೋಗ್ಯತೆ ಇಲ್ಲದೆ.
  • ಅಸಮರ್ಥನಾಗಿ; ಅದಕ್ಷವಾಗಿ; ಪೂರ್ಣ ಸಾಮರ್ಥ್ಯ, ದಕ್ಷತೆ ಇಲ್ಲದೆ.
  • ಕಾರ್ಯಕಾರಿಯಾಗಿರದೆ; ಪರಿಣಾಮಕಾರಿಯಾಗಿರದೆ; ನಿಷ್ಫಲವಾಗಿ; ವ್ಯರ್ಥವಾಗಿ.

  • inelastic
    ಗುಣವಾಚಕ
  • ಸ್ಥಿತಿಸ್ಥಾಪಕವಲ್ಲದ; ಪ್ರತ್ಯಾಸ್ಥವಲ್ಲದ; ಹಿಗ್ಗಿಸುವಿಕೆ, ಕುಗ್ಗಿಸುವಿಕೆ, ಮೊದಲಾದವುಗಳಿಂದ ಬಿಡುಗಡೆಯಾದೊಡನೆಯೇ ಸಹಜ ಗಾತ್ರ, ಆಕಾರ, ಮೊದಲಾದವನ್ನು ಪುನಃ ಹೊಂದದ.
  • ಸಗ್ಗದ; ಮಣಿಯದ; ಅನಮ್ಯ; ಸರಾಗವಾಗಿ ಬಗ್ಗದ.

  • inelastically
    ಕ್ರಿಯಾವಿಶೇಷಣ
    ಸ್ಥಿತಿಸ್ಥಾಪಕವಲ್ಲದಂತೆ.

    inelasticity
    ನಾಮವಾಚಕ
  • ಅಪ್ರತ್ಯಾಸ್ಥತೆ; ಸ್ಥಿತಿಸ್ಥಾಪಕತ್ವಾಭಾವ; ಸ್ಥಿತಿ ಸ್ಥಾಪಕತ್ವವಿಲ್ಲದಿರುವುದು.
  • ಅನಮ್ಯತೆ; ಸಗ್ಗದ ಯಾ ಮಣಿಯದ ಸ್ವಭಾವ; ಸರಾಗವಾಗಿ ಬಗ್ಗದ ಲಕ್ಷಣ; ಸುಲಭವಾಗಿ ಹೊಂದಿಕೊಳ್ಳುವ ಗುಣವಿಲ್ಲದಿರುವುದು.

  • inelegance
    ನಾಮವಾಚಕ
  • ಲಾವಣ್ಯವಿಲ್ಲದಿರುವಿಕೆ; ಅಂದಚಂದವಿಲ್ಲದಿರುವಿಕೆ; ಸುಂದರವಾಗಿಲ್ಲದಿರುವಿಕೆ; ಸೊಬಗಿಲ್ಲದಿರುವುದು.
  • ಒಪ್ಪಓರಣವಿಲ್ಲದಿರುವಿಕೆ; ಪರಿಷ್ಕಾರವಿಲ್ಲದಿರುವಿಕೆ.
  • (ಶೈಲಿಯ ವಿಷಯದಲ್ಲಿ) ನಯವಿಲ್ಲದಿರುವಿಕೆ; ಒರಟುತನ; ನಾಜೂಕಿಲ್ಲದಿರುವಿಕೆ.

  • inelegant
    ಗುಣವಾಚಕ
  • ಲಾವಣ್ಯವಿಲ್ಲದ; ಸುಂದರವಾಗಿರದ; ಅಂದಚಂದವಿಲ್ಲದ; ಸೊಬಗಿಲ್ಲದ.
  • ಒಪ್ಪಓರಣವಿಲ್ಲದ; ನಯನಾಜೂಕು ಇಲ್ಲದ; ಪರಿಷ್ಕಾರವಿಲ್ಲದ.
  • (ಶೈಲಿಯ ವಿಷಯದಲ್ಲಿ) ನಯವಿಲ್ಲದ; ಅಪರಿಷ್ಕೃತ; ಲಾಲಿತ್ಯವಿಲ್ಲದ; ಒರಟು.

  • inelegantly
    ಕ್ರಿಯಾವಿಶೇಷಣ
  • ಅಂದಚೆಂದವಿಲ್ಲದೆ; ಸೊಬಗು ಸೊಗಸಿಲ್ಲದೆ.
  • ಒಪ್ಪಓರಣವಿಲ್ಲದೆ; ನಯನಾಜೂಕಿಲ್ಲದೆ.
  • (ಶೈಲಿಯ ವಿಷಯದಲ್ಲಿ) ನಯವಿಲ್ಲದೆ; ಲಾಲಿತ್ಯವಿಲ್ಲದೆ.

  • ineligibility
    ನಾಮವಾಚಕ
    ಅನರ್ಹತೆ; ಆಯ್ಕೆಗೆ ಅರ್ಹತೆ ಯಾ ಯೋಗ್ಯತೆ ಇಲ್ಲದಿರುವುದು.


    logo