ಸುದಂತ ಯೋಜಕ; ಸುದಂತಯೋಜನ ತಜ್ಞ; ಸುದಂತ ಯೋಜನ ವಿದ್ಯೆಯನ್ನು ಅಭ್ಯಾಸ ಮಾಡಿದವ.
orthodox
ಗುಣವಾಚಕ
ಪದಗುಚ್ಛ
the Orthodox Church (= the Greek Church = Eastern Church) ಕಾನ್‍ಸ್ಟ್ಯಾಂಟಿನೋಪಲ್ಲಿನ ಚರ್ಚು; ಕಾನ್‍ಸ್ಟ್ಯಾಂಟಿನೋಪಲ್ಲಿನ ಚರ್ಚಿನ ಪ್ರಧಾನ ಪಾದ್ರಿಯನ್ನು ಕ್ಯಾಥೊಲಿಕ್ ಮತದ ಪ್ರಧಾನ ಅಧಿಕಾರಿಯೆಂದೂ ರಷ್ಯಾ, ರುಮೇನಿಯಾ, ಮೊದಲಾದ ದೇಶಗಳು ಈ ಚರ್ಚಿಗೆ ಅಧೀನವೆಂದು ಮಾನ್ಯ ಮಾಡಿರುವ ಪೂರ್ವ ರೋಮನ್ ಸಾಮ್ರಾಜ್ಯದ ಚರ್ಚು.
ಸಾಂಪ್ರದಾಯಿಕ:
(ಮುಖ್ಯವಾಗಿ ಧಾರ್ಮಿಕ ತತ್ತ್ವ, ನೀತಿ, ಮೊದಲಾದ ವಿಷಯಗಳಲ್ಲಿ) ಸರಿಯಾದ ಯಾ ವಾಡಿಕೆಯಲ್ಲಿರುವ ಅಭಿಪ್ರಾಯಗಳನ್ನು ಹೊಂದಿರುವ.
ಸ್ವತಂತ್ರಚಿಂತನೆಯದಲ್ಲದ; ಸ್ವಂತದ್ದಲ್ಲದ; ಹೊಸದಲ್ಲದ.
ಧರ್ಮವಿರುದ್ಧ ಯಾ ಶಾಸ್ತ್ರ ವಿರುದ್ಧವಾಗಿಲ್ಲದ; ಯಥಾಶಾಸ್ತ್ರೀಯ; ಶಾಸ್ತ್ರಾನುಸಾರಿಯಾದ.
(ಧಾರ್ಮಿಕ ಸಿದ್ಧಾಂತ, ನೈತಿಕ ಮಾನದಂಡ, ಮೊದಲಾದವುಗಳ ವಿಷಯದಲ್ಲಿ) ಸಾಂಪ್ರದಾಯಿಕ; ಶಾಸ್ತ್ರೀಯ; ಸರಿ ಅಥವಾ ಸತ್ಯ ಎಂದು ಸಾಮಾನ್ಯವಾಗಿ ಒಪ್ಪಿರುವ, ಅಂಗೀಕರಿಸಿರುವ; ಶಾಸ್ತ್ರೀಯವಾಗಿ, ಅಧಿಕೃತವಾಗಿ–ಸ್ಥಾಪಿತವಾದ, ಅಂಗೀಕೃತವಾದ.
(Orthodox) (ಯೆಹೂದ್ಯ ಧರ್ಮದ ವಿಷಯದಲ್ಲಿ) ಪರಂಪರಾಗತ ಸಿದ್ಧಾಂತ ಮತ್ತು ಆಚರಣೆಗಳನ್ನು ಕಡುನಿಷ್ಠೆಯಿಂದ ಪಾಲಿಸುವ; ಕಟ್ಟಾ ಸಂಪ್ರದಾಯಬದ್ಧ; ಕಡುಸಂಪ್ರದಾಯ ನಿಷ್ಠ.
orthodoxly
ಕ್ರಿಯಾವಿಶೇಷಣ
ಸಾಂಪ್ರದಾಯಿಕವಾಗಿ; ಸಂಪ್ರದಾಯಬದ್ಧವಾಗಿ.
orthodoxy
ನಾಮವಾಚಕ
ಸಾಂಪ್ರದಾಯಿಕತೆ; ಸಂಪ್ರದಾಯ ಬದ್ಧತೆ.
ಯೆಹೂದ್ಯ ಧರ್ಮದ ಸಂಪ್ರದಾಯ ನಿಷ್ಠತೆ, ಸಂಪ್ರದಾಯಗಳನ್ನು ಪಾಲಿಸುವುದು.
ಸಂಪ್ರದಾಯಶರಣ ಯೆಹೂದ್ಯರ ವರ್ಗ.
(ಮುಖ್ಯವಾಗಿ ಧರ್ಮ) ಪ್ರಮಾಣಬದ್ಧವಾದ ಯಾ ಸಾಮಾನ್ಯವಾಗಿ ಒಪ್ಪಲಾದ ಸಿದ್ಧಾಂತ, ತತ್ತ್ವ, ಮೊದಲಾದವು.
orthoepic
ಗುಣವಾಚಕ
ಶುದ್ಧೋಚ್ಚಾರದ; ಸರಿಯಾದ ಉಚ್ಚಾರಣೆಯ, ಅದಕ್ಕೆ ಸಂಬಂಧಿಸಿದ.
orthoepist
ನಾಮವಾಚಕ
ಶುದ್ಧೋಚ್ಚಾರಿ; ಶುದ್ಧೋಚಾರ ವಿದ್ಯೆಯನ್ನು ಅಭ್ಯಾಸ ಮಾಡಿದವ.
orthoepy
ನಾಮವಾಚಕ
ಶುದ್ಧೋಚ್ಚಾರ; ಯಾವುದೇ ಭಾಷೆಗೆ ಸಂಬಂಧಿಸಿದಂತೆ ಸರಿಯಾದ ಉಚ್ಚಾರ.
ಶುದ್ಧೋಚ್ಚಾರ ವಿದ್ಯೆ; ಶುದ್ಧೋಚ್ಚಾರದ ಅಧ್ಯಯನ.
orthoformic acid
ನಾಮವಾಚಕ
(ರಸಾಯನವಿಜ್ಞಾನ) ಆರ್ತೋಹಾರ್ಮಿಕ್ ಆಮ್ಲ; ಎಸ್ಟರುಗಳ ರೂಪದಲ್ಲಿ ಮಾತ್ರ ಗೊತ್ತಿರುವ ಒಂದು ಆಮ್ಲ, ${\rm HC} ({\rm OH})_3$.
orthogenesis
ನಾಮವಾಚಕ
ನಿಯತ ವಿಕಸನ; ಪೂರ್ವ ನಿರ್ದಿಷ್ಟ ವಿಕಸನ; ಜೀವಿಗಳ ವಿಕಸನವು ನೈಸರ್ಗಿಕ ಆಯ್ಕೆಯೇ ಮೊದಲಾದ ಯಾವುದೇ ಬಾಹ್ಯ ಪ್ರಭಾವಕ್ಕೆ ಒಳಪಡದೆ ಯಾ ಆಕಸ್ಮಿಕವಾಗಿ ಸಂಭವಿಸದೆ, ಸ್ವತಂತ್ರವಾಗಿ ಮೊದಲೇ ನಿಶ್ಚಿತವಾಗಿರುವ ದಿಕ್ಕಿನಲ್ಲಿ ಸಾಗುವುದೆಂಬ ಸಿದ್ಧಾಂತ.