logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inedibility
ನಾಮವಾಚಕ
ಅಖಾದ್ಯತೆ; ಅಭಕ್ಷ್ಯತೆ; ತಿನ್ನಲು ತಕ್ಕದ್ದಲ್ಲದಿರುವಿಕೆ; ತಿನ್ನಲು ಅನರ್ಹವಾಗಿರುವುದು.

inedible
ಗುಣವಾಚಕ
ಅಖಾದ್ಯ; ಅಭಕ್ಷ್ಯ; ತಿನ್ನಲು ತಕ್ಕದ್ದಲ್ಲದ; ತಿನ್ನಲನರ್ಹವಾದ; ತಿನ್ನಲು ಯೋಗ್ಯವಲ್ಲದ.

inedited
ಗುಣವಾಚಕ
  • ಅಪ್ರಕಟಿತ; ಅಪ್ರಕಾಶಿತ; ಪ್ರಕಟವಾಗಿರದ; ಪ್ರಕಾಶಿತವಾಗಿರದ.
  • ಅಪರಿಷ್ಕೃತ; ಅಸಂಪಾದಿತ; ಸಂಪಾದಕೀಯ ಪರಿಷ್ಕರಣವಿಲ್ಲದೆ ಪ್ರಕಟಿತವಾದ, ಪ್ರಕಾಶಿತವಾದ.

  • ineducability
    ನಾಮವಾಚಕ
    ಅಶಿಕ್ಷಣೀಯತೆ; ಮುಖ್ಯವಾಗಿ ಬುದ್ಧಿಮಾಂದ್ಯದಿಂದ ಶಿಕ್ಷಣ ನೀಡಲು ಸಾಧ್ಯವಿಲ್ಲದಿರುವಿಕೆ.

    ineducable
    ಗುಣವಾಚಕ
    ಅಶಿಕ್ಷಣೀಯ; ಮುಖ್ಯವಾಗಿ ಬುದ್ಧಿಮಾಂದ್ಯದಿಂದಾಗಿ ಶಿಕ್ಷಣ ನೀಡಲು, ಕಲಿಸಲು ಸಾಧ್ಯವಿಲ್ಲದಿರುವ.

    ineffable
    ಗುಣವಾಚಕ
  • ಮಾತಿಗೆ ಮೀರಿದ; ನುಡಿಗೆ ಸಿಲುಕದ; ಅನಿರ್ವಚನೀಯ; ವರ್ಣನಾತೀತ; ಅವರ್ಣನೀಯ.
  • ನುಡಿಯ ಕೂಡದ; ಹೇಳಬಾರದ; ಅವಾಚ್ಯ.

  • ineffably
    ಕ್ರಿಯಾವಿಶೇಷಣ
  • ಮಾತಿಗೆ ಮೀರಿ; ನುಡಿಗೆ ಸಿಲುಕದೆ; ಅನಿರ್ವಚನೀಯವಾಗಿ; ವರ್ಣನಾತೀತವಾಗಿ; ಅವರ್ಣನೀಯವಾಗಿ.
  • ನುಡಿಯಕೂಡದಂತೆ; ಅವಾಚ್ಯವಾಗಿ.

  • ineffaceability
    ನಾಮವಾಚಕ
    ಅನುಪಮೃಜ್ಯತೆ; ಅಳಿಸಲಾಗದ ಲಕ್ಷಣ, ಗುಣ; ತೊಡೆದು ಹಾಕಲಾಗದಿರುವುದು.

    ineffaceable
    ಗುಣವಾಚಕ
    ಅಳಿಸಲಾಗದ; ಅನುಪಮೃಜ್ಯ; ತೊಡೆದು ಹಾಕಲಾಗದ.

    ineffaceably
    ಕ್ರಿಯಾವಿಶೇಷಣ
    ಅಳಿಸಲಾಗದಂತೆ; ತೊಡೆದುಹಾಕದ ರೀತಿಯಲ್ಲಿ; ಅನುಪಮೃಜ್ಯವಾಗಿ.


    logo