logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

orthocentre
ನಾಮವಾಚಕ
= orthocenter.

orthocephalic
ಗುಣವಾಚಕ
ಮಧ್ಯ(ಮ) ಶಿರಸ್ಸಿನ; ತಲೆ ಬುರುಡೆಯ ಎತ್ತರ ಮಧ್ಯಮವಾಗಿರುವ; ಬುರುಡೆಯ ಹಿಂಭಾಗದಿಂದ ಮುಂಭಾಗದವರೆಗಿನ ಉದ್ದವು ಬುರುಡೆಯ ಎತ್ತರದ ಶೇಕಡಾ 75ಕ್ಕೂ ಕಡಮೆ ಉಳ್ಳ.

orthocephalous
ಗುಣವಾಚಕ
= orthocephalic.

orthochromatic
ಗುಣವಾಚಕ
(ಛಾಯಾಚಿತ್ರದ ವಿಷಯದಲ್ಲಿ) ಯಥಾರ್ಥವರ್ಣದ; ಬೆಳಕು ನೆರಳುಗಳ ಛಾಯೆಗಳು ನಿಜವಸ್ತುವಿನ ಬಣ್ಣಗಳ ಸಾಂದ್ರತೆಗೆ ಅನುಗುಣವಾಗಿರುವ; ಬಣ್ಣಗಳಿಗೆ ತಕ್ಕ ಸಾಂದ್ರತೆಯುಳ್ಳ ಕಪ್ಪುಬಿಳುಪಿನ.

orthoclase
ನಾಮವಾಚಕ
ಆರ್ತೋಕ್ಲೇಸ್‍: ${\rm KALSi}_3{\rm O}_8$ ಸಂಯೋಜನೆಯುಳ್ಳ, ಆದರೆ ಕೆಲವು ವೇಳೆ ಸ್ವಲ್ಪ ಭಾಗ ಪೊಟ್ಯಾಸಿಯಮ್‍ ಬದಲು ಸೋಡಿಯಮ್‍ ಉಳ್ಳ, ಮಾನೊಕ್ಲಿನಿಕ್‍ ಆಕೃತಿಯ ಹರಳುಗಳ ಒಂದು ಖನಿಜ.

orthocousin
ನಾಮವಾಚಕ
(ಸೋದರ ಸಂಬಂಧದ) ಅಣ್ಣ, ತಮ್ಮ, ಅಕ್ಕ, ತಂಗಿ; (ಚಿಕ್ಕಪ್ಪ ದೊಡ್ಡಪ್ಪಂದಿರ ಯಾ ಚಿಕ್ಕಮ್ಮ ದೊಡ್ಡಮ್ಮಂದಿರ) ಮಗ ಯಾ ಮಗಳು.

orthocresol
ನಾಮವಾಚಕ
(ರಸಾಯನವಿಜ್ಞಾನ) ಆತ್ರೋಕ್ರೀಸಾಲ್‍; ಆರ್ತೊಹೈಡ್ರಾಕ್ಸಿಟಾಲ್ವೀನ್‍; ಬೆನ್ಸೀನಿನಲ್ಲಿ ${\rm CH}_3$ ಮತ್ತು OHಗಳು ಅಕ್ಕಪಕ್ಕದ ಕಾರ್ಬನ್‍ ಪರಮಾಣುಗಳ ಮೇಲಿರುವ ಸಂಯುಕ್ತ, ${\rm CH}_3 {\rm C}_2{\rm H}_4{\rm OH}$.

orthodiagram
ನಾಮವಾಚಕ
ಆರ್ತೋಡಯಾಗ್ರಮ್‍; ಯಥಾರ್ಥ ನಕ್ಷೆ; ಯಥಾರ್ಥ ರೇಖಾಕೃತಿ; ಹೃದಯವೇ ಮುಂತಾದ ಯಾವುದೇ ಅಂಗದ ಹೊರ ಅಂಚಿನ ಮೇಲೆ ಚಲಿಸುವಂತೆ ಎಕ್ಸ್‍ ಕಿರಣಗಳನ್ನು ಬಿಟ್ಟು ಆಚೆಕಡೆಯಲ್ಲಿ ತಯಾರಿಸಿಕೊಂಡ ಯಥಾರ್ಥ ಗಾತ್ರದ ಮತ್ತು ಯಥಾರ್ಥ ಆಕೃತಿಯ ಚಿತ್ರ.

orthodontia
ನಾಮವಾಚಕ
ಸುದಂತ ಯೋಜನೆ; ಹಲ್ಲು ಮತ್ತು ದವಡೆಗಳ ದೋಷಗಳನ್ನು ಸರಿಪಡಿಸುವ ದಂತವೈದ್ಯ ಶಾಖೆ.

orthodontic
ಗುಣವಾಚಕ
ಸುದಂತ ಯೋಜಕ; ಸುದಂತಯೋಜನೆಯ ಯಾ ಅದಕ್ಕೆ ಸಂಬಂಧಿಸಿದ.


logo