(ಸಾಮೂಹಿಕವಾಗಿ) ವ್ಯಾಪಾರ ಮತ್ತು ತಯಾರಿಕೆ: incentives to industry ಕೈಗಾರಿಕೆಗೆ ಉತ್ತೇಜನಗಳು.
(ಆಡುಮಾತು) ನಿರ್ದಿಷ್ಟ ವಿಷಯದ ಬಗ್ಗೆ ಶ್ರಮಪಟ್ಟು ಅಧ್ಯಯನ ಮಾಡುವುದು: Shakespeare industry ಷೇಕ್ಸ್‍ಪಿಯರ್ ಅಧ್ಯಯನ.
indwell
ಕ್ರಿಯಾಪದ
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ಸಾಮಾನ್ಯವಾಗಿ ರೂಪಕವಾಗಿ) (ಆತ್ಮ, ತತ್ತ್ವ, ಮೊದಲಾದವು) ಒಳಗೆ ಇರು; ನಿಹಿತವಾಗಿರು; ಅಂತಸ್ಥವಾಗಿರು; ನೆಲಸಿರು; ವಾಸವಾಗಿರು. (ಯಾವುದರಲ್ಲೇ) ಶಾಶ್ವತವಾಗಿ ನೆಲಸಿರು; ಚಿರವಾಸ ಮಾಡು; ಸದಾ ಇರು.
indweller
ನಾಮವಾಚಕ
(ಸಾಮಾನ್ಯವಾಗಿ ಆತ್ಮ, ತತ್ತ್ವ ಮೊದಲಾದವುಗಳ ವಿಷಯದಲ್ಲಿ) ನಿವಾಸಿ; ಒಳಗಿರುವದು; ಅಂತಸ್ಥವಾಗಿರುವದು.
inebriate
ಗುಣವಾಚಕ
ಕುಡಿದ; ಕುಡಿದು ಮತ್ತೇರಿದ; ಅತಿ ಕುಡಿದಿರುವ; ಪಾನಮತ್ತನಾದ.
inebriate
ನಾಮವಾಚಕ
ಕುಡಿದು ಮತ್ತೇರಿದವನು; ಪಾನಮತ್ತ.
(ಮುಖ್ಯವಾಗಿ) ಶುದ್ಧ ಕುಡುಕ; ಅತಿಯಾಗಿ ಮದ್ಯಪಾನ ಮಾಡುವವನು; ಮುಖ್ಯವಾಗಿ ಕುಡಿತದ ಚಾಳಿಯವನು.