logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

orris
ನಾಮವಾಚಕ
  • ಆರಿಸ್‍; ಪದ್ಮ ಪುಷ್ಕರ; ಪುಷ್ಕರ ಮೂಲ; ದೊಡ್ಡ ಬಿಳಿಯ ಹೂ ಬಿಡುವ ಐರಿಸ್‍ ಕುಲದ ಗಿಡ.
  • (ಸುಗಂಧ ದ್ರವ್ಯಗಳಲ್ಲಿ ಬಳಸುವ) ಪುಷ್ಕರ ಮೂಲ(ದ ಬೇರು).

  • orris
    ನಾಮವಾಚಕ
    ಚಿನ್ನದ ಯಾ ಬೆಳ್ಳಿಯ ಜರಿ ಯಾ ಕಸೂತಿ.

    orris oil
    ನಾಮವಾಚಕ
    ಆರಿಸ್‍ (ಮೂಲ) ತೈಲ; ಆರಿಸ್‍ ಗಿಡದ ಬೇರಿನಿಂದ ತೆಗೆದ, ತುಪ್ಪದಂಥ ಚಂಚಲ ತೈಲ.

    orris-powder
    ನಾಮವಾಚಕ
    ಆರಿಸ್‍ ಪುಡಿ; ಆರಿಸ್‍ ಬೇರಿನ ಪುಡಿ, ಚೂರ್ಣ.

    orrisroot
    ನಾಮವಾಚಕ
    = 1orris\((2)\).

    ortanique
    ನಾಮವಾಚಕ
    ಕಿತ್ತಳೆ ಮತ್ತು ಟ್ಯಾಂಜರೀನ್‍ ಕಿತ್ತಳೆ ತಳಿಗಳನ್ನು ಬೆರೆಸಿ ಬೆಳೆಸಿದ, ಒಂದು ಮಿಶ್ರತಳಿ ಕಿತ್ತಳೆ.

    ortho-
    ಸಮಾಸ ಪೂರ್ವಪದ
  • ನೇರವಾದ; ನೆಟ್ಟನೆಯ; ಶೃಂಗೀಯ(ವಾದ): orthograde.
  • ಕರಾರುವಾಕ್ಕಾದ: orthodiagram.
  • ಸರಿಯಾದ: orthodontia.
  • (ಆಮ್ಲದ ವಿಷಯದಲ್ಲಿ) ಹೈಡ್ರಾಕ್ಸಿಲ್‍ ಪುಂಜಗಳು ಗರಿಷ್ಠ ಸಂಖ್ಯೆಯಲ್ಲಿರುವ: orthosilicic acid.
  • (ಬೆನ್ಸೀನ್‍ ಜನ್ಯ ಸಂಯುಕ್ತಗಳ ವಿಷಯದಲ್ಲಿ) ಆದಿಷ್ಟ ಪರಮಾಣು ಯಾ ಪರಮಾಣು ಪುಂಜಗಳು ಅಕ್ಕಪಕ್ಕದಲ್ಲಿರುವ: orthotoluene.
  • ದೀರ್ಘಚತುರಸ್ರಾಕಾರದ.
  • ಲಂಬಕೋನದಲ್ಲಿರುವ.

  • ortho-hydrogen
    ನಾಮವಾಚಕ
    (ರಸಾಯನವಿಜ್ಞಾನ) ಆರ್ತೋಹೈಡ್ರೊಜನ್‍; ಅಣುವನ್ನು ರೂಪಿಸಿರುವ ಎರಡು ಹೈಡ್ರೊಜನ್‍ ಪರಮಾಣು ಬೀಜಗಳ ಭ್ರಮಣವೂ ಒಂದೇ ದಿಕ್ಕಿನಲ್ಲಿರುವಂತಹ ಹೈಡ್ರೊಜನ್‍ ಅಣು.

    orthocarbonic acid
    ನಾಮವಾಚಕ
    (ರಸಾಯನವಿಜ್ಞಾನ) ಆರ್ತೋಕಾರ್ಬಾನಿಕ್‍ ಆಮ್ಲ; ಎಸ್ಟರುಗಳ ರೂಪದಲ್ಲಿ ಮಾತ್ರ ಗೊತ್ತಿರುವ, ಸ್ವತಂತ್ರ ಅಸ್ತಿತ್ವವಿಲ್ಲದ ಕಾರ್ಬಾನಿಕ್‍ ಆಮ್ಲ.

    orthocenter
    ನಾಮವಾಚಕ
    (ಜ್ಯಾಮಿತಿ) ಲಂಬಕೇಂದ್ರ; ಆರ್ತೋಕೇಂದ್ರ; ಲಂಬ ಸಂಪಾತ ಬಿಂದು.
  • (ತ್ರಿಕೋನದ ವಿಷಯದಲ್ಲಿ) ಪ್ರತಿಯೊಂದು ಶೃಂಗದಿಂದಲೂ ಅದರ ಎದುರು ಭುಜಕ್ಕೆ ಎಳೆದ ಲಂಬರೇಖೆಗಳು ಒಂದನ್ನೊಂದು ಸಂಧಿಸುವ ಬಿಂದು.
  • ಬೇರಾವುದೇ ಬಹುಭುಜದ ಒಂದೊಂದು ಮೂಲೆಯಿಂದಲೂ ಅದರದರ ಎದುರು ಭುಜಕ್ಕೆ ಲಂಬವನ್ನೆಳೆಯುವುದು ಸಾಧ್ಯವಿದ್ದು, ಆ ಲಂಬ ರೇಖೆಗಳು ಒಂದೆಡೆ ಸಂಧಿಸುವುದಾದರೆ, ಹಾಗೆ ಸಂಧಿಸುವ ಬಿಂದು.


  • logo