logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

industrial psychology
ನಾಮವಾಚಕ
ಔದ್ಯೋಗಿಕ ಮನೋವಿಜ್ಞಾನ; ಕೆಲಸಗಾರರ ಆಯ್ಕೆ, ತರಬೇತಿ ಕಾರ್ಯಕ್ರಮ, ಮೊದಲಾದವುಗಳಲ್ಲಿ ಮನೋವೈಜ್ಞಾನಿಕ ಸೂತ್ರಗಳ ಅನ್ವಯ.

industrial relations
ನಾಮವಾಚಕ
(ಬಹುವಚನ) ಔದ್ಯೋಗಿಕ ಸಂಬಂಧಗಳು; ಕೈಗಾರಿಕೆ ಸಂಬಂಧಗಳು:
  • ತನ್ನ ಕೆಲಸಗಾರರು, ಕಾರ್ಮಿಕರು ಮತ್ತು ಸಾರ್ವಜನಿಕರೊಡನೆ ಕೈಗಾರಿಕಾ ಸಂಸ್ಥೆಯೊಂದರ ವ್ಯವಹಾರಗಳು ಮತ್ತು ಸಂಬಂಧಗಳು.
  • ಮುಖ್ಯವಾಗಿ ಕೈಗಾರಿಕಾ ಸಂಸ್ಥೆಯ ಒಳ್ಳೆಯ ಹೆಸರಿಗಾಗಿ, ಅಂತಹ ಸಂಬಂಧಗಳ ನಿರ್ವಹಣೆ.

  • Industrial Revolution
    ನಾಮವಾಚಕ
    ಔದ್ಯೋಗಿಕ ಕ್ರಾಂತಿ; ಕೈಗಾರಿಕಾ ಕ್ರಾಂತಿ; ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಮತ್ತು ಹತ್ತೊಂಬತ್ತನೆಯ ಶತಮಾನದ ಮೊದಲಲ್ಲಿ ಉತ್ಪನ್ನಗಳ ಪ್ರಕ್ರಿಯೆಯನ್ನು ಯಾಂತ್ರೀಕರಿಸುವ ಮೂಲಕ ಬ್ರಿಟನ್ನಿನ ಕೈಗಾರಿಕಾ ಕ್ಷೇತ್ರದಲ್ಲಿ ಆದ ಹಠಾತ್‍ ಬೆಳವಣಿಗೆ ಮತ್ತು ತತ್ಫಲವಾಗಿ ಒದಗಿದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳು.

    industrial school
    ನಾಮವಾಚಕ
    ವೃತ್ತಿಶಿಕ್ಷಣ ಶಾಲೆ:
  • ಯಾವುದೇ ಬಗೆಯ ಕಸಬುದಾರಿಕೆ ಕಲಿಸುವ ಶಾಲೆ.
  • ನಿರಾಶ್ರಿತ ಬಾಲಕರಿಗೆ ಸಾಮಾನ್ಯ ವಿಷಯಗಳ ಜತೆಗೆ ಒಂದು ಕಸಬನ್ನು ಕಲಿಸುವ ಪಾಠಶಾಲೆ.

  • Industrial Workers of the World
    ನಾಮವಾಚಕ
    (ಬಹುವಚನ) ವಿಶ್ವಕಾರ್ಮಿಕರು; ಉತ್ಪನ್ನಗಳ ಸಾಧನಗಳು ಮತ್ತು ವಿತರಣೆಯನ್ನು ಕಾರ್ಮಿಕರಿಗೆ ವಹಿಸಿಕೊಡಬೇಕೆನ್ನುವುದನ್ನು ಹಾಗೂ ಅಂತರರಾಷ್ಟ್ರೀಯ ಸಮಾಜವಾದವನ್ನು ಪ್ರತಿಪಾದಿಸಲು 1905ರಲ್ಲಿ ಷಿಕಾಗೋದಲ್ಲಿ ಸ್ಥಾಪಿತವಾಗಿ 1920ರ ತರುವಾಯ ಅವನತಿ ಹೊಂದಿದ ಒಂದು ಕೈಗಾರಿಕಾ ಕಾರ್ಮಿಕರ ಸಂಘ.

    industrialism
    ನಾಮವಾಚಕ
    ಕೈಗಾರಿಕಾ ಪದ್ಧತಿ; ಔದ್ಯೋಗಿಕ ಪದ್ಧತಿ; ಕೈಗಾರಿಕಾ ವ್ಯವಸ್ಥೆ; ಪ್ರಧಾನವಾಗಿ ದೊಡ್ಡ ಕೈಗಾರಿಕೆಗಳನ್ನು ಅವಲಂಬಿಸಿರುವ ಸಾಮಾಜಿಕ ಯಾ ಆರ್ಥಿಕ ವ್ಯವಸ್ಥೆ.

    industrialist
    ನಾಮವಾಚಕ
    ಕೈಗಾರಿಕೋದ್ಯಮಿ; ಉದ್ಯೋಗಪತಿ; ಕೈಗಾರಿಕೆ ನಡೆಸುವವನು.

    industrialization
    ನಾಮವಾಚಕ
    ಕೈಗಾರಿಕೀಕರಣ; ಔದ್ಯೋಗೀಕರಣ; ಯಾವುದಾದರೂ ದೇಶ ಯಾ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸುವುದು.

    industrialize
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಔದ್ಯೋಗೀಕರಿಸು; ಕೈಗಾರಿಕೀಕರಿಸು; ಯಾವುದಾದರೂ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳನ್ನು ಹೂಡು, ಪ್ರಾರಂಭಿಸು. ಕೈಗಾರಿಕೀಕರಣಕ್ಕೊಳಗಾಗು; ಔದ್ಯೋಗೀಕೃತವಾಗು.

    industrially
    ಕ್ರಿಯಾವಿಶೇಷಣ
    ಕೈಗಾರಿಕೆಗಳಲ್ಲಿ; ಔದ್ಯೋಗೀಕರಣದಲ್ಲಿ.


    logo