ಕ್ರೈಸ್ತ ಪಾದ್ರಿಯ ಉಡುಪಿನ (ಹಲವೊಮ್ಮೆ ಜರತಾರಿ ಹೆಣೆದ) ಪಟ್ಟಿಗಳು ಮತ್ತು ಅಂಚುಗಳು.
orpiment
ನಾಮವಾಚಕ
ಪದಗುಚ್ಛ
ಹರಿದಳ; ಹರಿತಾಳ; ಅರದಾಳ; ಆರ್ಸೆನಿಕ್ ಟ್ರೈಸಲೆಡ್ ಸಂಯೋಜನೆಯುಳ್ಳ ಖನಿಜ; ಹಳದಿಯ ವರ್ಣದ್ರವ್ಯವಾಗಿ ಇಲ್ಲವೆ ಚಿತ್ರಕಾರ ಮೊದಲಾದ ಕಲಾವಿದರು ವರ್ಣದ್ರವ್ಯವಾಗಿ ಬಳಸುವ, ಆರ್ಸೆನಿಕ್ ಮತ್ತು ಗಂಧಕಗಳ ಸಂಯುಕ್ತವಾದ ಒಂದು ಖನಿಜ. red orpiment = realgar.
orpin
ನಾಮವಾಚಕ
= orpine.
orpine
ನಾಮವಾಚಕ
ಆರ್ಪಿನ್; ರಸಭರಿತವೂ ತಿರುಳುಳ್ಳದ್ದೂ ಆದ ಎಲೆಗಳಿಂದ ಕೂಡಿದ, ಧೂಮ್ರವರ್ಣದ ಹೂ ಬಿಡುವ, ಸೀಡಮ್ ಟೆಲಿಹಿಯಮ್ ಕುಲದ ಗಿಡ.
Orpington
ನಾಮವಾಚಕ
ಒಂದು ಬಗೆಯ ದೊಡ್ಡ ಕೋಳಿ ಜಾತಿ.
orra
ಗುಣವಾಚಕ
(ಸ್ಕಾಟ್ಲೆಂಡ್)
ಸಾಂದರ್ಭಿಕ; ವಿರಳ; ಈಗೊಮ್ಮೆ ಆಗೊಮ್ಮೆ ಸಂಭವಿಸುವ: an orra job here and there ಅಲ್ಲೊಂದು ಇಲ್ಲೊಂದು ವಿರಳವಾದ ಕೆಲಸ.
ಹೊಂದಾಣಿಕೆಯಿಲ್ಲದ; ವಿಲಕ್ಷಣವಾದ; ವಿಚಿತ್ರವಾದ.
ಬಿಡುವಾದ; ಗೊತ್ತಾದ ಕೆಲಸವಿಲ್ಲದ: your orra hours ನಿನ್ನ ಬಿಡುವಿನ ಹೊತ್ತು.
orrery
ನಾಮವಾಚಕ
ಆರರಿ; ಸೌರವ್ಯೂಹದ ಗಡಿಯಾರದ ಮಾದರಿ; ಸೌರವ್ಯೂಹದಲ್ಲಿ ವಿವಿಧ ಕಾಯಗಳ ಪರಸ್ಪರ ದೂರವನ್ನೂ ಅವುಗಳ ಚಲನೆಯನ್ನೂ ತೋರಿಸಲು ನಿರ್ಮಿಸಿದ, ಗಡಿಯಾರದಂಥ ಮಾದರಿ.