ಕೈಗಾರಿಕಾ; ಕೈಗಾರಿಕೆಗಳಿಗೆ ಮಾತ್ರ ರೂಪಿಸಿದ ಯಾ ಸೂಕ್ತವಾದ: industrial alcohol ಕೈಗಾರಿಕಾ ಆಲ್ಕೊಹಾಲು.
ಕೈಗಾರಿಕಾಭಿವೃದ್ಧಿ ಪಡೆದ: industrial nations ಕೈಗಾರಿಕಾ ರಾಷ್ಟ್ರಗಳು.
industrial
ನಾಮವಾಚಕ
ಕೈಗಾರಿಕಾ ಕಂಪನಿ; ಕೈಗಾರಿಕೆಯಲ್ಲಿ ತೊಡಗಿರುವ ಕಾರ್ಖಾನೆ.
ಕೈಗಾರಿಕಾ ಕಾರ್ಮಿಕ; ಯಾವುದೇ ಕೈಗಾರಿಕೆಯಲ್ಲಿ ಕೆಲಸಮಾಡುವವನು.
(ಬಹುವಚನದಲ್ಲಿ) ಕೈಗಾರಿಕಾ ಕಂಪೆನಿಗಳ ಷೇರುಗಳು.
ಕೈಗಾರಿಕೋತ್ಪನ್ನ.
industrial action
ನಾಮವಾಚಕ
(ಬ್ರಿಟಿಷ್ ಪ್ರಯೋಗ) ಕೈಗಾರಿಕಾ ಚಳುವಳಿ; ಪ್ರತಿಭಟನೆ ಸೂಚಿಸಲು ಕಾರ್ಮಿಕರು ಮಾಡುವ ಮುಷ್ಕರ, ಕಾರ್ಯವಿಳಂಬ ಮತ್ತು ನಿಷ್ಠುರವಾಗಿ ನಿಯಮಾನುಸಾರ ಮಾಡುವ ಕೆಲಸ.
industrial alcohol
ನಾಮವಾಚಕ
ಕೈಗಾರಿಕಾ ಆಲ್ಕೊಹಾಲು; ಕೈಗಾರಿಕೆಗಳ ಉಪಯೋಗಕ್ಕೆಂದು ತಯಾರಿಸಿದ ಈಥೈಲ್ ಆಲ್ಕೊಹಾಲು.
industrial arts
ನಾಮವಾಚಕ
(ಬಹುವಚನ) ಔದ್ಯೋಗಿಕ ಕಲೆಗಳು; ಕೈಗಾರಿಕೆ ತಂತ್ರಗಳು, ಪ್ರೌಢ ಮತ್ತು ತಾಂತ್ರಿಕ ಶಾಲೆಗಳಲ್ಲಿ ಬೋಧಿಸುವ, ಯಂತ್ರಗಳನ್ನು ಮತ್ತು ಉಪಕರಣಗಳನ್ನು ಬಳಸುವ ವಿಧಾನಗಳು.
industrial design
ನಾಮವಾಚಕ
ಕೈಗಾರಿಕಾ ವಿನ್ಯಾಸ; ಕೈಗಾರಿಕೋತ್ಪನ್ನಗಳ ರೂಪವಿನ್ಯಾಸವನ್ನು ಕುರಿತ ಕಲೆ.
industrial disease
ನಾಮವಾಚಕ
ಔದ್ಯೋಗಿಕ ರೋಗ; ಕೈಗಾರಿಕಾ ರೋಗ; ಒಂದು ವಿಶಿಷ್ಟ ಉದ್ಯೋಗ ಯಾ ಕೈಗಾರಿಕೆಗೆ ಸಂಬಂಧಿಸಿದ ವಸ್ತುಸ್ಥಿತಿಯಿಂದಾಗಿ ಯಾ ಕೆಲಸದಲ್ಲಿನ ಅಪಾಯದಿಂದಾಗಿ ಸಂಭವಿಸುವ ರೋಗ.
industrial estate
ನಾಮವಾಚಕ
ಕೈಗಾರಿಕಾ ಪ್ರದೇಶ; ಕೈಗಾರಿಕೆಗಳನ್ನು ಸ್ಥಾಪಿಸಲು ಅಭಿವೃದ್ಧಿಪಡಿಸಿದ ಪ್ರದೇಶ.
industrial maintenance
ನಾಮವಾಚಕ
ನಿರುದ್ಯೋಗಿಗಳ ಪಾಲನೆ, ಪೋಷಣೆ; ಪ್ರತಿ ಕೈಗಾರಿಕೆಯೂ ತನ್ನ ನಿರುದ್ಯೋಗಿಗಳ ಜೀವನೋಪಾಯಕ್ಕೆ ತಾನೇ ಒದಗಿಸಬೇಕಾದ ಪದ್ಧತಿ.
industrial park
ನಾಮವಾಚಕ
ಕೈಗಾರಿಕಾ ಪಾರ್ಕು; ಒಂದು ವ್ಯವಸ್ಥಿತ, ನಿಯೋಜಿತ ರೀತಿಯಲ್ಲಿ ಅಭಿವೃದ್ಧಿಗೊಳಿಸಿ, ಸಾರಿಗೆ ಸಂಪರ್ಕ ಮೊದಲಾದ ಅನುಕೂಲತೆಗಳನ್ನು ಒದಗಿಸಿ, ವಿವಿಧ ಕೈಗಾರಿಕಾ ಸಂಸ್ಥೆಗಳಿಗೆ ಗುತ್ತಿಗೆ ಯಾ ಮಾರಾಟದ ವ್ಯವಸ್ಥೆಯ ಮೇಲೆ ವಹಿಸಿಕೊಡುವ ಪ್ರದೇಶ.