logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indulgenced
ಗುಣವಾಚಕ
(ರೋಮನ್‍ ಕ್ಯಾಥೊಲಿಕ್‍ಚರಿತ್ರೆ) (ದೇವರ ಪ್ರಾರ್ಥನೆಗಳು, ಭೌತವಸ್ತುಗಳು, ಮೊದಲಾದವುಗಳ ವಿಷಯದಲ್ಲಿ) ಶೇಷಪಾಪಕ್ಷಮೆಯ ಯಾ ಅದನ್ನು ಪಡೆದುಕೊಡುವ.

indulgent
ಗುಣವಾಚಕ
  • ತೃಪ್ತಿಪಡಿಸುವ; ತಣಿಸುವ; ಪ್ರಸನ್ನಗೊಳಿಸುವ; ಇಚ್ಛೆಪೂರೈಸುವ.
  • ಸದರ ತೋರಿಸುವ; ಸಲಿಗೆ ಕೊಡುವ; ತಪ್ಪುನೆಪ್ಪುಗಳನ್ನು ಉದಾರವಾಗಿ ಕ್ಷಮಿಸುವ: an indulgent parent ಸದರ ತೋರಿಸುವ ತಾಯಿ (ಯಾ ತಂದೆ).

  • indulgently
    ಕ್ರಿಯಾವಿಶೇಷಣ
  • ತೃಪ್ತಿಪಡಿಸುವಂತೆ; ಇಚ್ಛೆ ಪೂರೈಸಿ.
  • ಸದರದಿಂದ; ಉದಾರವಾಗಿ.

  • indult
    ನಾಮವಾಚಕ
    ಪೋಪನ ಅನುಮತಿ; ಚರ್ಚಿನ ಸಾಂಪ್ರದಾಯಿಕ ನ್ಯಾಯದಲ್ಲಿ ಅವಕಾಶವಿಲ್ಲದಕ್ಕೆ ಪೋಪ್‍ಗುರು ಕೊಡುವ ಅನುಮತಿ.

    induna
    ನಾಮವಾಚಕ
  • (ದಕ್ಷಿಣ ಆಹ್ರಿಕ) ಜೂಲೂ (ಜನಾಂಗದ ಒಬ್ಬ) ನಾಯಕ ಯಾ ಮುಖ್ಯಸ್ಥ.
  • ಅಧಿಕಾರಿ; ಅಧಿಕಾರಸ್ಥ; ಅಧಿಕಾರದಲ್ಲಿರುವ ವ್ಯಕ್ತಿ.

  • indurate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಗಡುಸುಗೊಳಿಸು; ಗಟ್ಟಿಯಾಗಿಸು; ಗಟ್ಟಿಮಾಡು; ಕಠಿನೀಕರಿಸು.
  • ಜಡ್ಡುಗಟ್ಟಿಸು; ಕಲ್ಲೆದೆಗೊಳಿಸು.
  • ಬೇರೂರಿಸು; ರೂಢಮೂಲಗೊಳಿಸು: to indurate custom through practice ಸಂಪ್ರದಾಯವನ್ನು ಸತತ ಆಚರಣೆಯ ಮೂಲಕ ಬೇರೂರಿಸು.

  • induration
    ನಾಮವಾಚಕ
  • ಗಟ್ಟಿಯಾಗಿಸುವಿಕೆ; ಗಡುಸಾಗುವಿಕೆ ಯಾ ಗಟ್ಟಿಯಾಗುವಿಕೆ; ಕಠಿನೀಕರಣ ಯಾ ಕಠಿನೀಭವನ.
  • (ಭೂವಿಜ್ಞಾನ) ಸಂಚಯನ; ಸಂಚಿತಶಿಲೆಗಳಾಗಲು ಮಣ್ಣು ಒಟ್ಟಿಲಾಗುವುದು.
  • (ಭೂವಿಜ್ಞಾನ) ಕಠಿನೀಕರಣ; ಗಡುಸಾಗುವಿಕೆ; ಶಾಖ ಮತ್ತು ಒತ್ತಡಗಳಿಂದ ಶಿಲೆಗಳು ಗಡುಸಾಗುವುದು.
  • (ವೈದ್ಯಶಾಸ್ತ್ರ) (ಉರಿಯೂತ, ರಕ್ತಾಧಿಕ್ಯ, ಮೊದಲಾದ ಕಾರಣಗಳಿಂದ ದೇಹದ ಯಾವುದೇ ಭಾಗ) ಜಡ್ಡುಗಟ್ಟುವುದು.
  • (ವೈದ್ಯಶಾಸ್ತ್ರ) ಜಡ್ಡುಗಟ್ಟಿದ ಭಾಗ ಯಾ ಅಂಗ.
  • ಕಲ್ಲೆದೆಯಾಗುವಿಕೆ; ಕಠೋರ ಹೃದಯಿಯಾಗುವುದು.
  • ಮೊಂಡುತನ; (ಮನಸ್ಸು, ಭಾವನೆ, ಮೊದಲಾದವು) ಜಡ್ಡುಹಿಡಿದ ಸ್ಥಿತಿ.

  • indurative
    ಗುಣವಾಚಕ
    ಗಟ್ಟಿಯಾಗಿಸುವ ಯಾ ಗಡುಸಾಗುವ; ಕಠಿನವಾಗುವ ಯಾ ಕಠಿನವಾಗಿಸುವ.

    indusial
    ಗುಣವಾಚಕ
    ಲಾರ್ವಾ ಕೋಶದ.

    indusium
    ನಾಮವಾಚಕ
    ಇಂಡ್ಯೂಸಿಯಮ್‍:
  • ಜರೀ ಗಿಡದ ಕಾಯಿಗೊಂಚಲನ್ನು ಆವರಿಸಿರುವ ಪೊರೆ.
  • ಕೆಲವು ಗಿಡಗಳ ಶಲಾಕೆಗಳನ್ನು ಆವರಿಸಿಕೊಂಡಿರುವ ಕೂದಲ ತಂಡ.
  • ಲಾರ್ವಾದ ಕೋಶ.


  • logo