logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

induction
ನಾಮವಾಚಕ
  • ನೇಮಕ; ವಿಧಿವತ್ತಾಗಿ ಚರ್ಚಿನ ದತ್ತಿಯ ಅನುಭವಕ್ಕೆ ನೇಮಿಸುವುದು.
  • ಸ್ಥಾಪನೆ; ಪ್ರತಿಷ್ಠಾಪನೆ.
  • ಪ್ರವೇಶ.
  • (ಪ್ರಾಚೀನ ಪ್ರಯೋಗ) ನಾಂದಿ; ಪೀಠಿಕೆ; ಉಪೋದ್ಘಾತ; ಮುನ್ನುಡಿ.
  • (ಮುಖ್ಯವಾಗಿ ವೈದ್ಯಶಾಸ್ತ್ರ) ಕೃತಕ ವಿಧಾನದಿಂದ (ಮುಖ್ಯವಾಗಿ ಹೆರಿಗೆ) ಮಾಡಿಸುವುದು.
  • ದೃಷ್ಟಾಂತ ಕೊಡುವುದು; ಸಾಮಾನ್ಯ ಪ್ರತಿಪಾದನೆಯನ್ನು ಸಮರ್ಥಿಸಲು ನಿದರ್ಶನಗಳನ್ನು ಮಂಡಿಸುವುದು, ಒದಗಿಸುವುದು.
  • (ತರ್ಕಶಾಸ್ತ್ರ) ಅನುಗಮನ; ಕೆಲವು ನಿರ್ದಿಷ್ಟ ಉದಾಹರಣೆಗಳಿಂದ ಸಾಮಾನ್ಯಸೂತ್ರ ಕಲ್ಪಿಸುವುದು, ಕಟ್ಟುವುದು.
  • (ಭೌತವಿಜ್ಞಾನ) ಚೋದನೆ:
    1. ವಿದ್ಯುತ್ತು ಅಥವಾ ಕಾಂತತೆಯ ಸಾಈಪ್ಯದಿಂದ (ಸಂಪರ್ಕದಿಂದಲ್ಲ) ವಿದ್ಯುತ್‍ ಯಾ ಕಾಂತಸ್ಥಿತಿಯನ್ನು ಉತ್ಪತ್ತಿಮಾಡುವುದು.
    2. (ಭೌತವಿಜ್ಞಾನ) ಕಾಂತಕ್ಷೇತ್ರವನ್ನು ಬದಲಾಯಿಸಿ ವಾಹಕದಲ್ಲಿ ವಿದ್ಯುತ್ತನ್ನು ಉತ್ಪಾದಿಸುವುದು.
  • ಚೂಷಣೆ; ಅಂತರ್ದಹನಯಂತ್ರದ ಸಿಲಿಂಡರುಗಳಿಗೆ ಇಂಧನ ಮಿಶ್ರಣವನ್ನು ಎಳೆಯುವುದು, ಸೆಳೆಯುವುದು.
  • (ಅಮೆರಿಕನ್‍ ಪ್ರಯೋಗ) ಸೈನಿಕ ಸೇವೆಗೆ ಸೇರಿಸಿಕೊಳ್ಳುವುದು, ದಾಖಲಾತಿ.

  • induction heating
    ನಾಮವಾಚಕ
    ಚೋದನ ತಾಪನ; ಚೋದಿತ ವಿದ್ಯುತ್ಪ್ರವಾಹದಿಂದ ಕಾಯಿಸುವುದು.

    induction-coil
    ನಾಮವಾಚಕ
    (ವಿದ್ಯುದ್ವಿಜ್ಞಾನ) ಚೋದನಸುರುಳಿ; ನೇರ ವಿದ್ಯುತ್ಪ್ರವಾಹವನ್ನು ಹರಿಸಿ ಅದರ ನೆರವಿನಿಂದ ವಿಚ್ಛಿನ್ನವಾದ ಅಧಿಕ ವೋಲ್ಟೇಜನ್ನು ಪಡೆಯಬಹುದಾದ ಉಪಕರಣ.

    inductive
    ಗುಣವಾಚಕ
  • (ತರ್ಕಶಾಸ್ತ್ರ ಮೊದಲಾದವು) ಅನುಗಮನದ (ಆಧಾರವುಳ್ಳ).
  • (ಭೌತವಿಜ್ಞಾನ) ಚೋದನೀಯ; (ವಿದ್ಯುತ್‍ ಯಾ ಕಾಂತ) ಚೋದನೆಯ.

  • inductively
    ಕ್ರಿಯಾವಿಶೇಷಣ
  • (ತರ್ಕಶಾಸ್ತ್ರ ಮೊದಲಾದವು) ಅನುಗಮನದ ಆಧಾರದ ಮೇಲೆ.
  • (ಭೌತವಿಜ್ಞಾನ) (ವಿದ್ಯುತ್‍ ಯಾ ಕಾಂತ) ಚೋದನೆಯಿಂದ.

  • inductiveness
    ನಾಮವಾಚಕ
  • ಅನುಗಮನತ್ವ.
  • (ಭೌತವಿಜ್ಞಾನ) (ವಿದ್ಯುತ್‍ ಯಾ ಕಾಂತ) ಚೋದನೀಯತೆ.

  • inductor
    ನಾಮವಾಚಕ
  • (ಪಾದ್ರಿಗೆ ದತ್ತಿಯನ್ನು) ವಿಧಿವತ್ತಾಗಿ ವಹಿಸುವವನು ಯಾ ಆ ಅಧಿಕಾರಕ್ಕೆ ನೇಮಕಮಾಡುವವನು.
  • (ಭೌತವಿಜ್ಞಾನ) ಚೋದನಕಾರಿ; ವಿದ್ಯುತ್‍ ಚೋದನೆ ಉಪಕರಣದ ಯಾವುದೇ ಭಾಗ.

  • indue
    ಸಕರ್ಮಕ ಕ್ರಿಯಾಪದ
    = endue.

    indulge
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಒಬ್ಬನನ್ನು, ತನ್ನನ್ನು, ಇಷ್ಟ, ವಿಷಯ, ಮೊದಲಾದವುಗಳಲ್ಲಿ) ತೃಪ್ತಿಪಡಿಸು; ತುಷ್ಟಿಗೊಳಿಸು; ತಣಿಸು; ಪ್ರಸನ್ನಗೊಳಿಸು; ಇಚ್ಛಾಪೂರ್ತಿ ಮಾಡು, ಮಾಡಿಕೊ; ಚಪಲ ತೀರಿಸಿಕೊ: indulge one’s appetite for sweets ಸಿಹಿ ತಿನ್ನುವ ಆಸೆ ತಣಿಸಿಕೊ. indulge a child ಮಗುವಿನ ಆಸೆಗಳನ್ನು ಪೂರೈಸು.
  • (ಯಾವುದನ್ನೇ) ಕೊಟ್ಟು ನೆರವಾಗು; ಉಪಕಾರ ಮಾಡು: indulged them with money ಅವರಿಗೆ ಹಣ ಕೊಟ್ಟು ಉಪಕಾರ ಮಾಡಿದ.
  • (ಬಯಕೆ ಮೊದಲಾದವನ್ನು) ಸ್ವೇಚ್ಛೆಯಾಗಿ – ಬಿಡು, ಹರಿಯಗೊಡು: to indulge my own fancy ನನ್ನ ಕಲ್ಪನಾಲಹರಿಯನ್ನು ಹರಿಯಗೊಡಲೆಂದು.

  • indulgence
    ನಾಮವಾಚಕ ಪದಗುಚ್ಛ
    Declaration of Indulgence (ಮುಖ್ಯವಾಗಿ 1672ರಲ್ಲಿ ಇಂಗ್ಲೆಂಡಿನ ಎರಡನೆಯ ಚಾರ್ಲ್ಸ್‍ ದೊರೆಯೂ, 1687ರಲ್ಲಿ ಎರಡನೆಯ ಜೇಮ್ಸನೂ ಘೋಷಿಸಿದ) ಮತಸ್ವಾತಂತ್ರ್ಯ – ಘೋಷಣೆ, ಪ್ರಕಟಣೆ.
  • ತೃಪ್ತಿಪಡಿಸುವಿಕೆ; ತಣಿಸುವಿಕೆ; ಇಚ್ಛೆ ಪೂರೈಕೆ; ಇಚ್ಛಾಪೂರ್ತಿ – ಮಾಡುವುದು, ಮಾಡಿಕೊಳ್ಳುವುದು.
  • (ಇನ್ನೊಬ್ಬರ ವಿಷಯದಲ್ಲಿ) ಸಹನೆ; ತಾಳ್ಮೆ; ಸಮಾಧಾನ: let your indulgence set me free ತಾಳ್ಮೆಯಿಂದ ತಾವು ನನ್ನನ್ನು ಬಿಡುಗಡೆ ಮಾಡಿ.
  • ಲೋಲುಪತೆ; ಸ್ವೇಚ್ಛಾತೃಪ್ತಿ; ತನ್ನ ಆಸೆಪಾಸೆಗಳನ್ನು ಪೂರೈಸಿಕೊಳ್ಳುವುದರಲ್ಲೇ ಮುಳುಗಿರುವುದು.
  • ಅನುಗ್ರಹಿಸಿದ – ಸವಲತ್ತು, ಹಕ್ಕು, ವಿಶೇಷಾಧಿಕಾರ, ಮೊದಲಾದವು.
  • (ರೋಮನ್‍ ಕ್ಯಾಥೊಲಿಕ್‍) ಶೇಷಪಾಪಕ್ಷಮೆ; ವಿಧಿವತ್ತಾಗಿ ಪಾಪಪರಿಹಾರ ಸಂಸ್ಕಾರವಾದ ಮೇಲೆ ಇಹದಲ್ಲಿ ಇನ್ನೂ ಅನುಭವಿಸಬೇಕಾಗಿರುವ ಶಿಕ್ಷೆಯನ್ನು ಕ್ಷಮಿಸುವುದು.


  • logo