logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ornitho-
ಸಮಾಸ ಪೂರ್ವಪದ
ಪಕ್ಷಿ ಎಂಬ ಅರ್ಥದ ಸಮಾಸ ಪೂರ್ವಪದ : ornithoid.

ornithoid
ಗುಣವಾಚಕ
ಪಕ್ಷಿಸದೃಶ; (ಕೆಲವು ಸರೀಸೃಪಗಳ ವಿಷಯದಲ್ಲಿ) ರಚನೆಯಲ್ಲಿ ಪಕ್ಷಿಗಳಿಗೆ ಹತ್ತಿರ ಹತ್ತಿರ ಬರುವ, ಸದೃಶವಾಗಿರುವ, ಹೋಲುವ.

ornithological
ಗುಣವಾಚಕ
ಪಕ್ಷಿ ವಿಜ್ಞಾನದ.

ornithologically
ಕ್ರಿಯಾವಿಶೇಷಣ
ಪಕ್ಷಿ ವಿಜ್ಞಾನರೀತ್ಯಾ.

ornithologist
ನಾಮವಾಚಕ
ಪಕ್ಷಿ ವಿಜ್ಞಾನಿ.

ornithology
ನಾಮವಾಚಕ
ಪಕ್ಷಿ ವಿಜ್ಞಾನ; ಪಕ್ಷಿಗಳ ಸ್ವರೂಪ, ಜೀವನ, ಮೊದಲಾದವುಗಳನ್ನು ಕುರಿತ ವೈಜ್ಞಾನಿಕ ಅಧ್ಯಯನ.

ornithomancy
ನಾಮವಾಚಕ
(ಪಕ್ಷಿಗಳ ಹಾರಾಟವನ್ನೂ ಅವುಗಳ ಕೂಗನ್ನೂ ಗಮನಿಸಿ ಅದರ ನೆರವಿನಿಂದ ಹೇಳುವ) ಪಕ್ಷಿ ಭವಿಷ್ಯ; ಹಕ್ಕಿ ಶಕುನ.

ornithorhynchus
ನಾಮವಾಚಕ
(ಆಸ್ಟ್ರೇಲಿಯ) ಅಚ್ಚ ಕಂದು ಬಣ್ಣದ ತುಪ್ಪುಳು ದೊವಲು, ಜಾಲಪಾದ, ಬಾತಿನಂತೆ ಕೊಕ್ಕಿನ ಮೂತಿಗಳುಳ್ಳ, ಮೊಟ್ಟೆಗಳನ್ನಿಡುವ, ಕಡಲ ತೀರದಲ್ಲಿ ವಾಸಿಸುವ ಒಂದು ಸಸ್ತನಿ.

ornithoscopy
ನಾಮವಾಚಕ
(ಮುಖ್ಯವಾಗಿ ಹಕ್ಕಿ ಶಕುನಿಗರು ಮಾಡುವ) ಪಕ್ಷಿ ವೀಕ್ಷಣೆ.

oro-
ಸಮಾಸ ಪೂರ್ವಪದ
ಪರ್ವತ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.


logo