logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indri
ನಾಮವಾಚಕ
ಇಂಡ್ರಿ; ಮಡಗಾಸ್ಕರ್‍ ದ್ವೀಪದಲ್ಲಿ ದೊರಕುವ, ಲೀಮರ್‍ ಎಂಬ ಒಂದು ಬಗೆಯ ಸಸ್ತನಿಗಳಲ್ಲಿ ಅತ್ಯಂತ ದೊಡ್ಡ ಪ್ರಾಣಿ.

indubitable
ಗುಣವಾಚಕ
ಅಸಂದಿಗ್ಧ; ನಿಸ್ಸಂದೇಹವಾದ; ನಿಸ್ಸಂಶಯವಾದ; ಸಂದೇಹಪಡಲಾಗದ.

indubitably
ಕ್ರಿಯಾವಿಶೇಷಣ
ನಿಸ್ಸಂದೇಹವಾಗಿ; ನಿಸ್ಸಂಶಯವಾಗಿ; ಸಂದೇಹಪಡಲಾಗದಂತೆ.

induce
ಸಕರ್ಮಕ ಕ್ರಿಯಾಪದ
  • ಪ್ರೇರಿಸು; ಒಲಿಸು; ಒಪ್ಪಿಸು; ಮನವೊಲಿಸು: nothing shall induce me to do ಅದನ್ನು ಮಾಡಲು ನನ್ನನ್ನು ಯಾವುದೂ ಒಲಿಸಲಾರದು; ಅದನ್ನು ಮಾಡಲು ಎಂದೆಂದಿಗೂ ನಾನು ಒಪ್ಪೆನು.
  • ಉಂಟುಮಾಡು; ಹುಟ್ಟಿಸು; ಆಗಿಸು; ಆಗಮಾಡು.
  • (ವಿದ್ಯುದ್ವಿಜ್ಞಾನ) ಚೋದಿಸು; ಚೋದನೆಯಿಂದ ವಿದ್ಯುತ್‍ಪ್ರವಾಹವನ್ನು ಉಂಟುಮಾಡು.
  • (ತರ್ಕಶಾಸ್ತ್ರ) ಅನುಗಮನದಿಂದ ಪಡೆ.
  • (ಭೌತವಿಜ್ಞಾನ) ಘರ್ಷಣೆಯಿಂದ, ಹೊಡೆಯುವುದರಿಂದ (ರೇಡಿಯೋ ವಿಕಿರಣವನ್ನು) ಉಂಟುಮಾಡು.
  • (ಮುಖ್ಯವಾಗಿ ವೈದ್ಯಶಾಸ್ತ್ರ) (ಹೆರಿಗೆಯನ್ನು) ಕೃತಕವಾಗಿ (ಅಂದರೆ ಔಷಧೋಪಚಾರ ಮಾಡಿ) ಮಾಡಿಸು: induce labour ಕೃತಕ ಪ್ರಯತ್ನದಿಂದ ಹೆರಿಗೆ ಮಾಡಿಸು.

  • inducement
    ನಾಮವಾಚಕ
  • ಪ್ರೇರಣೆ; ಅನುನಯ; ಮನವೊಲಿಕೆ; ಪುಸಲಾವಣೆ.
  • ಆಕರ್ಷಣೆ; ಪ್ರಲೋಭನೆ; ವ್ಯಕ್ತಿಯನ್ನು ಒಲಿಸಿಕೊಳ್ಳಲು ನೀಡುವ ವಸ್ತು, ಬೀರುವ ಪ್ರಭಾವ, ಮೊದಲಾದವು.

  • inducible
    ಗುಣವಾಚಕ
  • ಉಂಟುಮಾಡಬಹುದಾದ; ಆಗಿಸಬಹುದಾದ.
  • ಪ್ರೇರಿಸಬಹುದಾದ; ಮನವೊಲಿಸಬಹುದಾದ.

  • induct
    ಸಕರ್ಮಕ ಕ್ರಿಯಾಪದ
  • (ಚರ್ಚಿನ ದತ್ತಿಯ) ಸ್ವಾಧೀನಕ್ಕೆ, ಅನುಭವಕ್ಕೆ ವಿಧಿವತ್ತಾಗಿ ನೇಮಿಸು.
  • (ಯಾವುದೇ) ಅಧಿಕಾರಕ್ಕೆ ನೇಮಿಸು.
  • (ಪೀಠ, ಕೋಣೆ, ಮೊದಲಾದವುಗಳಲ್ಲಿ) ಕುಳ್ಳಿರಿಸು; ಸ್ಥಾಪಿಸು; ಪ್ರತಿಷ್ಠಾಪಿಸು.
  • (ಯಾವುದೇ ವಿಶೇಷ ಜ್ಞಾನ ಯಾ ಅನುಭವವನ್ನು ಕೋರುವ ವೃತ್ತಿ, ವರ್ಗ, ಮೊದಲಾದವಕ್ಕೆ) ಸೇರಿಸು; ಪ್ರವೇಶಮಾಡಿಸು; ಪ್ರವೇಶ ದೊರಕಿಸು: teachers should be properly inducted into the profession ಬೋಧಕರನ್ನು ಶಿಕ್ಷಣವೃತ್ತಿಗೆ ಶಾಸ್ತ್ರೀಯವಾಗಿ ಸೇರಿಸಬೇಕು. induct novices into the mysteries of the cult ವಟುಗಳನ್ನು ಪಂಥದ ರಹಸ್ಯಗಳಿಗೆ ಪ್ರವೇಶ ಮಾಡಿಸು.
  • (ಅಮೆರಿಕನ್‍ ಪ್ರಯೋಗ) (ವ್ಯಕ್ತಿಯನ್ನು) ಸೈನಿಕ ವೃತ್ತಿಗೆ – ಸೇರಿಸು, ದಾಖಲು ಮಾಡು, ಕರೆ.

  • inductance
    ನಾಮವಾಚಕ
    (ವಿದ್ಯುದ್ವಿಜ್ಞಾನ) ಚೋದಕತೆ; ತನ್ನಲ್ಲಿ ಅಥವಾ ಪಕ್ಕದಲ್ಲಿರುವ ಇನ್ನೊಂದು ವಿದ್ಯುನ್ಮಂಡಲದಲ್ಲಿ ವಿದ್ಯುತ್ಪ್ರವಾಹ ಬದಲಾಯಿಸಿದುದರ ಪರಿಣಾಮವಾಗಿ ವಿದ್ಯುಚ್ಚಾಲಕ ಬಲವನ್ನು ಉತ್ಪತ್ತಿಮಾಡುವ (ವಿದ್ಯುನ್ಮಂಡಲದ) ಗುಣ.

    inductee
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಸೈನಿಕ ಸೇವೆಗೆ ಸೇರಿಸಿಕೊಂಡವ, ದಾಖಲಾದವ.

    inductile
    ಗುಣವಾಚಕ
    (ಲೋಹಗಳ ವಿಷಯದಲ್ಲಿ) ಅತನ್ಯ; ತಂತಿಯಾಗಿ ಎಳೆಯಲಾಗದ.


    logo