ಲ್ಯಾಟಿನ್ ಭಾಷೆಗೆ ಸಂಬಂಧವಿರುವ, ಪ್ರಾಚೀನ ಅಂಬ್ರಿಯನ್ ಭಾಷೆ.
ಪ್ರಾಚೀನ ಅಂಬ್ರಿಯನ್ ಪ್ರಾಂತದ ನಿವಾಸಿ.
Umbrian school
ನಾಮವಾಚಕ
ಅಂಬ್ರಿಯನ್ ಪಂಥ; ರ್ಯಾಹೆಲ್, ಪೆರುಗಿನೊ ಅವರನ್ನೊಳಗೊಂಡ, ರೆನೆಸಾನ್ಸ್ ಯುಗದ ಇಟ್ಯಾಲಿಯನ್ ಚಿತ್ರಕಲೆಯ ಒಂದು ಪಂಥ.
umbriferous
ಗುಣವಾಚಕ
(ಔಪಚಾರಿಕ) ನೆರಳು ಕೊಡುವ.
umiak
ನಾಮವಾಚಕ
ಚರ್ಮ ಮತ್ತು ಮರದ ಹಲಗೆಗಳಿಂದ ಮಾಡಿದ, ಹೆಂಗಸರು ಹುಟ್ಟುಹಾಕಿ ನಡೆಸುವ, ಒಂದು ರೀತಿಯ ಎಸ್ಕಿಮೋಗಳ ತೆರೆದ ದೋಣಿ.
umlaut
ನಾಮವಾಚಕ
ಸ್ವರ ರೂಪಾಂತರ; ಸ್ವರವ್ಯತ್ಯಯ; ಸ್ವರದಲ್ಲಿ ಉಂಟಾಗುವ ವ್ಯತ್ಯಾಸ (ಉದಾಹರಣೆಗೆ ಜರ್ಮನ್ Mann, M$\ddot{\rm a}$nner; ಇಂಗ್ಲಿಷ್ man, men).
(ಮುಖ್ಯವಾಗಿ ಜರ್ಮ್ಯಾನಿಕ್ ಭಾಷೆಗಳಲ್ಲಿ) ಇದನ್ನು ಸೂಚಿಸಲು ಸ್ವರಾಕ್ಷರದ ಮೇಲೆ ಹಾಕುವ ಎರಡು ಚುಕ್ಕೆ$\ddot{\phantom{ a}}$ ಗಳ ಚಿಹ್ನೆ; ಸ್ವರವಿಸಂಧಿ ಚಿಹ್ನೆ, ಉದಾಹರಣೆಗೆ M$\ddot{\rm a}$nner.
umlaut
ಸಕರ್ಮಕ ಕ್ರಿಯಾಪದ
ಸ್ವರರೂಪಾಂತರ ಮಾಡು; ಸ್ವರವ್ಯತ್ಯಯ ಮಾಡು; ಒಂದು ರಚನೆ ಯಾ ಧ್ವನಿಯನ್ನು ಸ್ವರರೂಪಾಂತರದಿಂದ ಬದಲಿಸು, ವ್ಯತ್ಯಾಸಮಾಡು.
umpirage
ನಾಮವಾಚಕ
ಅಂಪೈರ್‍ಗಿರಿ; ಮಧ್ಯಸ್ಥಿಕೆ; ಅಂಪೈರ್ ಯಾ ಮಧ್ಯಸ್ಥಗಾರನ ಅಧಿಕಾರ ಯಾ ಕೆಲಸ.