logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tafia
ನಾಮವಾಚಕ
(ವೆಸ್ಟ್‍ ಇಂಡೀಸ್‍) ಕಾಕಂಬಿ ಮೊದಲಾದವುಗಳಿಂದ ತಯಾರಿಸಿದ ‘ರಮ್‍’ (ಮದ್ಯ).

tag
ನಾಮವಾಚಕ
  • (ಬಊಟಿನ) ಒಳತೂರಿಸಲು ಅನುಕೂಲವಾಗುವ ಲಾಡಿ ತುದಿಯ ಲೋಹದ ಯಾ ಪ್ಲಾಸ್ಟಿಕ್ಕಿನ ಮುಳ್ಳು, ಮೊನೆಕಟ್ಟು.
  • ಬಊಟಿನ ಎಳೆ ಕುಣಿಕೆ; ಬಊಟು ಧರಿಸುವಾಗ ಅದನ್ನು ಮೇಲಕ್ಕೆ ಎಳೆಯಲು ಅದರ ಬೆನ್ನ ತುದಿಯಲ್ಲಿರುವ ಕುಣಿಕೆ.
  • ವಿಳಾಸಪಟ್ಟಿ; ಒಂದು ವಸ್ತುವಿನ ಮೇಲೆ ಕಟ್ಟಲಾದ ವಿಳಾಸ, ಬೆಲೆ, ಮೊದಲಾದವುಗಳಿರುವ ಪಟ್ಟಿ.
  • (ಅಮೆರಿಕನ್‍ ಪ್ರಯೋಗ) ಮೋಟಾರು ವಾಹನದ ಪರವಾನಗಿ ಫಲಕ.
  • (ಯಾವುದಾದರೂ ವಸ್ತುವಿನ) ಜೂಲು ತುದಿ ಯಾ ಜೂಲು ಅಂಚು.
  • ಕುರಿಯ ಮೈಮೇಲಿನ ಉಣ್ಣೆಯ ಬೊಂತೆಗಂಟು.
  • ಅನುಬಂಧ; ಸೇರಿಸಿದುದು.
  • (ರಂಗಭೂಮಿ) ಭರತವಾಕ್ಯ; ಪ್ರೇಕ್ಷಕರನ್ನು ಉದ್ದೇಶಿಸಿದ ಮುಕ್ತಾಯ ಭಾಷಣ.
  • ಸವಕಲಾದ ಪದಗುಚ್ಫ; ಚರ್ವಿತಚರ್ವಣ; ಹಳಸಲಾದ–ಉಲ್ಲೇಖನ, ಉದಾಹರಣೆ.
    1. ಹಾಡಿನ ಪಲ್ಲವಿ.
    2. ಅನುಬಂಧ; ಕೃತಿಯ ಮುಕ್ತಾಯದಲ್ಲಿ ಸೇರಿಸಿದ ಗೀತಭಾಗ.
  • (ಪ್ರಾಣಿಯ) ಬಾಲ ಯಾ ಬಾಲದ ತುದಿ.

  • tag
    ಸಕರ್ಮಕ ಕ್ರಿಯಾಪದ ಪದಗುಚ್ಛ
    tag along ಸುಮ್ಮನೆ ಜೊತೆಯಲ್ಲಿ ಹೋಗು ಯಾ ಜೊತೆಯಲ್ಲಿರು.
  • ಬಊಟಿನ ಲಾಡಿಗೆ ಲೋಹದ ಮೊನೆ ಹಾಕು.
  • (ಸಾಹಿತ್ಯ ಕೃತಿಗೆ) ಅನುಬಂಧ ಯಾ ಅನುಬಂಧಗಳನ್ನು ಸೇರಿಸು.
  • ಒಂದು ಲೇಖನ ಭಾಗವನ್ನು ಇನ್ನೊಂದಕ್ಕೆ ಸೇರಿಸು.
  • ಒಂದು ವಸ್ತುವನ್ನು ಇನ್ನೊಂದಕ್ಕೆ ಲಗತ್ತಿಸು ಯಾ ಸೇರಿಸು.
    1. (ಪದ್ಯಗಳಿಗೆ) ಪ್ರಾಸ–ಒದಗಿಸು, ಹೊಂದಿಸು.
    2. ಪ್ರಾಸಗಳನ್ನು ಒಟ್ಟಿಗೆ ಹೆಣೆ.
  • (ಕುರಿಯ) ತುಪ್ಪಬೊಂತೆ ಹಾಗೂ ಗಂಟುಗಳನ್ನು ಕತ್ತರಿಸಿಹಾಕು.
  • (ಆಡುಮಾತು) ಬಾಲದಂತೆ ಹಿಂಬಾಲಿಸು; ಹಿಂದೆಯೇ ಹೋಗು: I tagged him to an old house ನಾನು ಅವನನ್ನು ಒಂದು ಹಳೆಯ ಮನೆಗೆ ಹಿಂಬಾಲಿಸಿದೆ ( ಅಕರ್ಮಕ ಕ್ರಿಯಾಪದ ಸಹ).
  • ಜೊತೆಯಲ್ಲೇ ಹೋಗು.
  • (ವಸ್ತುಗಳಿಗೆ) ವಿಳಾಸ ಪಟ್ಟಿ ಯಾ ಪಟ್ಟಿಗಳನ್ನು ಒದಗಿಸು, ಹಚ್ಚು ಯಾ ಕಟ್ಟು.
  • (ಕಂಪ್ಯೂಟರ್‍) (ಒಂದು ದತ್ತಾಂಶದ ಬಾಬನ್ನು) ಮುಂದೆ ಮತ್ತೆ ಪಡೆಯಲು ಅದರ ಮಾದರಿಯಿಂದ ಗುರುತಿಸು.
  • = $^2$label(3).

  • tag
    ನಾಮವಾಚಕ
  • (ಮಕ್ಕಳ) ಜೂಟಾಟ; ಚೂಟಾಟ; ಹಿಡಿಯುವ ಯಾ ಮುಟ್ಟುವ ಆಟ.
  • (ಬೇಸ್‍ಬಾಲ್‍ ಆಟ) ಓಟಗಾರನನ್ನು ಮುಟ್ಟುವುದು.

  • tag
    ಸಕರ್ಮಕ ಕ್ರಿಯಾಪದ
  • (ಜೂಟಾಟದಲ್ಲಿ) ಒಬ್ಬರನ್ನೊಬ್ಬರು ಮುಟ್ಟು.
  • (ಬೇಸ್‍ಬಾಲ್‍) ಚೆಂಡನ್ನು ಕೈಯಲ್ಲಿ ಹಿಡಿದು ಯಾ ಚೆಂಡಿರುವ ಕೈಯಿಂದ ಓಟಗಾರನನ್ನು ಮುಟ್ಟಿ ‘ಔಟ್‍’ ಮಾಡಿಸು.

  • tag end
    ನಾಮವಾಚಕ
    (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಅಂತ್ಯಾವಶೇಷ; ಕೊನೆಯುಳಿಕೆ; ಕೊನೆಯಲ್ಲಿ ಉಳಿದದ್ದು, ಮಿಕ್ಕಿದ್ದು.

    tag-day
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = $^1$flag-day.

    Tagalog
    ನಾಮವಾಚಕ
  • ಹಿಲಿಪೀನ್ಸ್‍ ದ್ವೀಪಗಳ ಪ್ರಮುಖ ಜನಾಂಗದವನು.
  • ಹಿಲಿಪೀನ್‍ ದ್ವೀಪ ನಿವಾಸಿಗಳ ಭಾಷೆ.

  • Tagalog
    ಗುಣವಾಚಕ
    ಟಗಾಲಾಗ್‍ ಜನಾಂಗದ ಯಾ ಭಾಷೆಯ ಯಾ ಅವಕ್ಕೆ ಸಂಬಂಧಿಸಿದ.

    tagetes
    ನಾಮವಾಚಕ
    ಟಜೀಟೀಸ್‍ ಎಂಬ ಕುಲದ, ಮುಖ್ಯವಾಗಿ ಉಜ್ಜ್ವಲ ಹಳದಿ ಯಾ ಕಿತ್ತಳೆ ಬಣ್ಣದ ಹೂಗಳಿರುವ, ಚೆಂಡುಮಲ್ಲಿಗೆ ಬಳಗದ ಗಿಡಗಳಲ್ಲಿ ಒಂದು.


    logo