logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Mae West
ನಾಮವಾಚಕ
(ಅಶಿಷ್ಟ) ರಕ್ಷಾಕವಚ; ಉಬ್ಬು ಅಂಗಿ; ವಿಮಾನ ಚಾಲಕನ (ಪ್ರಾಣ) ರಕ್ಷಣಾ ಕವಚ, ನೀರಿನಲ್ಲಿ ಮುಳುಗದಂತೆ ರಕ್ಷಿಸುವ, ಗಾಳಿ ಊದಿ ಉಬ್ಬಿಸಹುದಾದ ಅಂಗಿ.

Maecenas
ನಾಮವಾಚಕ
  • (ಕ್ರಿಸ್ತಶಕ 1ನೇ ಶತಮಾನದ) ಹೊರೆಸ್‍ ಮತ್ತು ವರ್ಜಿಲ್‍ ಎಂಬ ಲ್ಯಾಟಿನ್‍ ಕವಿಗಳ ಆಶ್ರಯದಾತ.
  • ಕಲಾ ಪೋಷಕ; ಸಾಹಿತ್ಯ ಪೋಷಕ; ಸಾಹಿತ್ಯ, ಕಲೆ, ಮೊದಲಾದವುಗಳಿಗೆ ಉದಾರ ಆಶ್ರಯ ಕೊಡುವವನು.

  • maelstrom
    ನಾಮವಾಚಕ
  • (ನಾರ್ವೆಯ ಪಶ್ಚಿಮ ಕರಾವಳಿಯಲ್ಲಿನ) ಸಮುದ್ರದ ಸುಳಿ, ಜಲಾವರ್ತ.
  • ಮಹಾಜಲಾವರ್ತ; ದೊಡ್ಡ ನೀರುಸುಳಿ.
  • (ರೂಪಕವಾಗಿ) ಅವ್ಯವಸ್ಥೆ; ಅಸ್ತವ್ಯಸ್ತತೆ; ಕ್ಷೋಭೆ; ಪ್ರಕ್ಷುಬ್ಧ ಪರಿಸ್ಥಿತಿ: the maelstrom of traffic ವಾಹನ ಸಂಚಾರದ ಅಸ್ತವ್ಯಸ್ತತೆ.

  • maenad
    ನಾಮವಾಚಕ
  • (ಪ್ರಾಚೀನ ಗ್ರೀಕರ) ಬ್ಯಾಕಸ್‍ ದೇವತೆಯ ಉಪಾಸಕ, ಉಪಾಸಕಿ (= Bacchante).
  • ಉನ್ಮಾದ ಹತ್ತಿದ ಯಾ ಆವೇಶದಿಂದ ಕೂಡಿದ ಹೆಂಗಸು; ಆವಿಷ್ಟ ಹೆಂಗಸು.

  • maenadic
    ಗುಣವಾಚಕ
  • ಬ್ಯಾಕಸ್‍ ದೇವತೆಯ ಉಪಾಸಕನ, ಉಪಾಸಕಿಯ.
  • ಆವೇಶದ ಯಾ ಉನ್ಮಾದ ಹತ್ತಿದ ಹೆಂಗಸಿನ.

  • maestoso
    ಗುಣವಾಚಕ
    (ಸಂಗೀತ) ಘನಗಂಭೀರವಾಗಿ ಹಾಡಬೇಕಾದ ಯಾ ನುಡಿಸಬೇಕಾದ.

    maestoso
    ಕ್ರಿಯಾವಿಶೇಷಣ
    (ಸಂಗೀತ) ಘನಗಾಂಭೀರ್ಯದಿಂದ; ಗಂಭೀರವಾಗಿ; ಗಂಭೀರ ರೀತಿಯಲ್ಲಿ.

    maestoso
    ನಾಮವಾಚಕ
    (ಸಂಗೀತ) ಗಂಭೀರಕೃತಿ; ಘನಗಾಂಭೀರ್ಯದಿಂದ ವಾದನ ಮಾಡಬೇಕಾದ, ಹಾಡಬೇಕಾದ ಸಂಗೀತ ಕೃತಿ.

    maestro
    ನಾಮವಾಚಕ
  • ಶ್ರೇಷ್ಠ ಗಾಯಕ, ಗವಾಯಿ, ಬುವಾ.
  • ಶ್ರೇಷ್ಠ ಸಂಗೀತಬೋಧಕ.
  • ಶ್ರೇಷ್ಠ – ವಾಗ್ಗೇಯಕಾರ, ರಚನಕಾರ.
  • ಉತ್ಕೃಷ್ಟ ಸಂಗೀತ ನಿರ್ದೇಶಕ.
  • ಶ್ರೇಷ್ಠ ಸಂಗೀತಗಾರ ಮೊದಲಾದವರ ವಿಷಯದಲ್ಲಿಬಳಸುವ ಗೌರವದ ಒಕ್ಕಣೆ.
  • ಕಲಾಭಿಜ್ಞ; ಕಲಾಪರಿಣತ; ಕಲೆಯಲ್ಲಿ ಪಾರಂಗತನಾದವನು: the maestros of poetry ಕಾವ್ಯ ಪರಿಣತರು.

  • maffick
    ಅಕರ್ಮಕ ಕ್ರಿಯಾಪದ
    ಹಿಗ್ಗಿ ಸಂಭ್ರಮಪಡು; ಸಂಭ್ರಮದಿಂದ ನಲಿದಾಡು; ಕೋಲಾಹಲಕರವಾದ ರೀತಿಯಲ್ಲಿ ಸಂಭ್ರಮಗೊಳ್ಳು.


    logo