logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laconically
ಕ್ರಿಯಾವಿಶೇಷಣ
  • ಸಂಕ್ಷೇಪವಾಗಿ; ಸಂಗ್ರಹವಾಗಿ.
  • ಅಡಕ ಮಾತಿನಲ್ಲಿ; ಸಂಕ್ಷಿಪ್ತ ಶೈಲಿಯಲ್ಲಿ; ಕೆಲವೇ ಶಬ್ದಗಳಲ್ಲಿ.

  • laconicism
    ನಾಮವಾಚಕ
  • ಸೂತ್ರೋಕ್ತಿ; ಸೂಕ್ತಿ; ಸಂಕ್ಷಿಪ್ತ ಹೇಳಿಕೆ.
  • ಅಡಕಮಾತು; ಸೂತ್ರಶೈಲಿ’ ಸೂತ್ರಪ್ರಾಯವಾದ ಮಾತು.

  • laconism
    ನಾಮವಾಚಕ
    = laconicism.

    lacquer
    ನಾಮವಾಚಕ
    ಲ್ಯಾಕರ್‍:
  • ವಾರ್ನೀಸು; ಮೆರುಗು; (ಮದ್ಯಸಾರದಲ್ಲಿ ಅರಗನ್ನು ಕರಗಿಸಿ ಮಾಡಿದ ಯಾ ಸಂಶ್ಲೇಷಿತ ಪದಾರ್ಥಗಳಿಂದ ಮಾಡಿದ. ಹಿತ್ತಾಳೆ, ಮರ, ಮೊದಲಾದವುಗಳನ್ನು ರಕ್ಷಿಸಲು ಅವಕ್ಕೆ ಬಳಿಯುವ) ಒಂದು ಬಗೆಯ ಬಣ್ಣದ ದ್ರವ.
  • ತಲೆಗೂದಲನ್ನು ಒಂದು ಶೈಲಿಯಲ್ಲಿಡಲು ಅದಕ್ಕೆ ತುಂತುರಿಸುವ ಒಂದು ರಾಸಾಯನಿಕ ವಸ್ತು.
  • ಲ್ಯಾಕರ್‍ ಮರದ ಜೀವರಸ.
  • ಮೆರುಗೆಣ್ಣೆ; ಸಾಮಾನುಗಳಿಗೆ ಮೆರುಗು ಕೊಡಲು ಬಳಸುವ, ಜಪಾನಿನ ಒಂದು ಬಗೆಯ ಮರದಿಂದ ದೊರಕುವ ರಾಳ.
  • ಮೆರುಗು ಸಾಮಾನು; ಮೆರುಗೆಣ್ಣೆ ಬಳಿದ ಸಾಮಾನು.

  • lacquer
    ಅಕರ್ಮಕ ಕ್ರಿಯಾಪದ
    ವಾರ್ನೀಸು ಬಳಿ; ಮೆರುಗೆಣ್ಣೆ – ಬಳಿ, ಹಚ್ಚು, ಲೇಪಿಸು.

    lacquer-tree
    ನಾಮವಾಚಕ
    ಲ್ಯಾಕರ್‍ ಮರ; ಮರಗಳಿಗೆ ಮೆರುಗು ಕೊಡಲು ಬಳಸುವ ಸಸ್ಯರಸವನ್ನು ಹೊಂದಿರುವ, ಪೂರ್ವ ಏಷ್ಯದ ಒಂದು ಮರ.

    lacquey
    ನಾಮವಾಚಕ
    1lackeyನ ರೂಪಾಂತರ.

    lacquey
    ಕ್ರಿಯಾಪದ
    2lackeyನ ರೂಪಾಂತರ.

    lacrimal
    ಗುಣವಾಚಕ
    1lachrymalನ ರೂಪಾಂತರ.

    lacrimal
    ನಾಮವಾಚಕ
    2lachrymalನ ರೂಪಾಂತರ.


    logo