ಮನೆಯೊಳಗಿನ; ಒಳಾಂಗಣ: indoor games ಒಳಾಂಗಣ ಕ್ರೀಡೆಗಳು; ಮನೆಯೊಳಗಿನ ಆಟಗಳು.
(ಚರಿತ್ರೆ) ನಿರ್ಗತಿಕ ಗೃಹದ; ಅನಾಥಾಲಯದ; ನಿರ್ಗತಿಕರಿಗಾಗಿ ಸ್ಥಾಪಿಸಿದ ಕೆಲಸದ ಮನೆಯ: indoor relief ಅನಾಥಾಲಯದ ಸಹಾಯ; ನಿರ್ಗತಿಕರ ಸಲುವಾಗಿ ಸ್ಥಾಪಿಸಿದ ಕೆಲಸದ ಮನೆ (workhouse) ಯಲ್ಲಿ ನೀಡುವ ಸಹಾಯ, ಪರಿಹಾರ.
indoors
ಕ್ರಿಯಾವಿಶೇಷಣ
ಮನೆಯೊಳಗೆ; ಮನೆಯೊಳಕ್ಕೆ; ಕಟ್ಟಡದೊಳಗೆ; ಕಟ್ಟಡದೊಳಕ್ಕೆ; ಒಳಾಂಗಣದಲ್ಲಿ; ಗೃಹಾಂತಕ್ಕೆ; ಒಳಕ್ಕೆ; ಒಳಗೆ: ran indoors ಮನೆಯೊಳಕ್ಕೆ ಓಡಿದ. went indoors as soon as it began to rain ಮಳೆ ಬೀಳಲು ಪ್ರಾರಂಭವಾಗುತ್ತಲೇ ಅವನು ಮನೆಯೊಳಕ್ಕೆ ಹೋದ. stay indoors ಒಳಗೇ ಇರು; ಮನೆ ಬಿಟ್ಟು (ಹೊರಕ್ಕೆ) ಹೋಗಬೇಡ.
indorse
ಸಕರ್ಮಕ ಕ್ರಿಯಾಪದ
= endorse.
indorsee
ನಾಮವಾಚಕ
ವರ್ಗದಾರ; ವರ್ಗಾಯಿಸಿಕೊಂಡವ; ಪತ್ರ, ಹುಂಡಿ, ಮೊದಲಾದವನ್ನು ಯಾರ ಹೆಸರಿಗೆ ವರ್ಗಾಯಿಸಿದೆಯೋ ಅವನು.