logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

orle
ನಾಮವಾಚಕ
(ವಂಶಲಾಂಛನ ವಿದ್ಯೆ) ಗುರಾಣಿ ಫಲಕದ ಅಂಚಿನಲ್ಲಿರುವ ಕಿರು ಪಟ್ಟಿ ಯಾ ಅಂಚು.

Orleans
ನಾಮವಾಚಕ
  • ಒಣ(ಗಿದ) ದ್ರಾಕ್ಷಿ; ದ್ವೀಪದ್ರಾಕ್ಷಿ.
  • ಹತ್ತಿಯ ಹಾಸು(ಎಳೆ) ಮತ್ತು ಉಣ್ಣೆಯ ಹೊಕ್ಕುಗಳಿಂದ ನೆಯ್ದ ಬಟ್ಟೆ; ಆರ್ಲಿಯನ್ಸ್‍ ಬಟ್ಟೆ.

  • Orlon
    ನಾಮವಾಚಕ
    ಆರ್ಲಾನ್‍; ಬಟ್ಟೆಬರೆಗಳಿಗೆ ಬಳಸುವ ಕೃತಕ ನೂಲು ಯಾ ಹೆಣಿಗೆ ಬಟ್ಟೆ.

    orlop
    ನಾಮವಾಚಕ
    (ಮೂರು ಅಥವಾ ಅದಕ್ಕೂ ಹೆಚ್ಚಿನ ದಕ್ಕಗಳಿರುವ ಹಡಗಿನ) ಅತ್ಯಂತ ಕೆಳದಕ್ಕ; ತಳದಕ್ಕೆ.

    ormer
    ನಾಮವಾಚಕ
    ಆರ್ಮರ್‍; ಮಟ್ಟಸವಾದ ಚಿಪ್ಪಿದ್ದು, ಅದರ ಹೊರ ಅಂಚಿನಲ್ಲಿ ದೊಡ್ಡದಾಗುತ್ತ ಹೋಗುವ ತೂತುಗಳ ಸಾಲುಳ್ಳ, ಹೇಲಿಆಟಿಸ್‍ ಟ್ಯುಬರ್‍ಕ್ಯುಲಾಟ ಕುಲದ, ತಿನ್ನಬಹುದಾದ ಒಂದು ಮೃದ್ವಂಗಿ.

    ormolu
    ನಾಮವಾಚಕ
  • (ಪೀಠೋಪಕರಣಗಳನ್ನು ಅಲಂಕರಿಸಲು ಬಳಸುವ) ಗಿಲೀಟು ಮಾಡಿದ ಕಂಚು.
  • ತಾಮ್ರ, ಸತು, ತವರಗಳಿಂದ ಮಾಡಿದ, ಹೊಂಬಣ್ಣದ ಮಿಶ್ರಲೋಹ.
  • ಈ ಲೋಹಗಳಿಂದ ಮಾಡಿದ ಇಲ್ಲವೆ ಅಲಂಕರಿಸಿದ ವಸ್ತುಗಳು.
  • (ರೂಪಕವಾಗಿ) ಥಳುಕಿನ ವಸ್ತು, ಪದಾರ್ಥ; ಕೆಲಸಕ್ಕೆ ಬಾರದ ಗಿಲೀಟು ಪದಾರ್ಥ.

  • ornament
    ನಾಮವಾಚಕ ಪದಗುಚ್ಛ
  • (ಚರ್ಚು) (ಸಾಮಾನ್ಯವಾಗಿ ಬಹುವಚನದಲ್ಲಿ) ಪೂಜಾ ಸಾಧನಗಳು; ಪೂಜೋಪಕರಣಗಳು (ಉದಾಹರಣೆಗೆ ಬಲಿಪೀಠ, ಬಟ್ಟಲು, ಪಾತ್ರೆಗಳು, ಪವಿತ್ರ ಗ್ರಂಥಗಳು, ಮೊದಲಾದವು).
  • (ಸಂಗೀತ) (ಬಹುವಚನದಲ್ಲಿ) ಅಲಂಕಾರ (ಸ್ವರ)ಗಳು; ಗಾಯನದ ಯಾ ವಾದನದ ಸೊಬಗನ್ನು ಹೆಚ್ಚಿಸಲು ಗಾಯಕನು ಯಾ ವಾದಕನು ರಚಿಸುವ, ಚಮತ್ಕಾರದಿಂದ ಕೂಡಿದ, ಸ್ವರ ಯೋಜನೆಗಳು.
  • (ಏಕವಚನದಲ್ಲಿ ಮಾತ್ರ) ಅಲಂಕಾರ; ಸಿಂಗಾರ: a tower rich in ornament ಅಲಂಕಾರಗಳಿಂದ ಶ್ರೀಮಂತವಾಗಿರುವ ಗೋಪುರ; ಅಲಂಕಾರ ಸಿರಿಯುಳ್ಳ ಗೋಪುರ.
  • ಆಭರಣ; ಒಡವೆ; ಅಲಂಕಾರಕ್ಕಾಗಿ ಬಳಸುವ ವಸ್ತು, ಮುಖ್ಯವಾಗಿ ಥಳುಕು ಪಳುಕಿನ ಒಡವೆ ಮೊದಲಾದವು: her only ornament was a brooch ಅವಳ ಏಕೈಕ ಒಡವೆಯೆಂದರೆ ಬ್ರೋಚು.
  • ಭೂಷಣ; ಭೂಷಣಪ್ರಾಯ ವ್ಯಕ್ತಿ ಯಾ ಅಲಂಕಾರಪ್ರಾಯ ಗುಣ; ಅಂದಗೊಳಿಸುವ, ಗೌರವ ಮೊದಲಾದವನ್ನು ತರುವ–ಗುಣ ಯಾ ವ್ಯಕ್ತಿ: an ornament to her profession ಅವಳ ವೃತ್ತಿಗೆ ಒಂದು ಭೂಷಣ.

  • ornament
    ಸಕರ್ಮಕ ಕ್ರಿಯಾಪದ
    ಅಲಂಕರಿಸು; ಸಿಂಗರಿಸು; ಅಂದಗೊಳಿಸು.

    ornamental
    ಗುಣವಾಚಕ
  • ಅಲಂಕಾರದ; ಅಲಂಕಾರಕ್ಕಾಗಿ ಬೆಳೆಸುವ: ornamental plants ಅಲಂಕಾರಕ್ಕಾಗಿ ಬೆಳೆಸಿದ ಗಿಡಗಳು.
  • ಆಲಂಕಾರಿಕ; ಅಲಂಕಾರವಾಗಿರುವ; ಅಲಂಕಾರಪ್ರಾಯವಾದ.
  • ಅಲಂಕಾರದ; ಅಲಂಕಾರಕ್ಕೆ ಸಂಬಂಧಿಸಿದ.

  • ornamental
    ನಾಮವಾಚಕ
  • ಅಲಂಕಾರ(ವೆನಿಸಿರುವ ವಸ್ತು).
  • ಅಲಂಕಾರ ಸಸ್ಯ.


  • logo