logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indocility
ನಾಮವಾಚಕ
ಅಶಿಕ್ಷಣೀಯತೆ; ಅವಿನಯ; ಅವಿಧೇಯತೆ.

indoctrinate
ಸಕರ್ಮಕ ಕ್ರಿಯಾಪದ
  • ಕಲಿಸು; ಬೋಧಿಸು; ಉಪದೇಶಿಸು; ಹೇಳಿಕೊಡು; ಶಿಕ್ಷಣಕೊಡು.
  • (ಯಾವುದಾದರೂ ಏಕಪಕ್ಷೀಯವಾದ ಯಾ ಪಕ್ಷಪಾತವುಳ್ಳ) ಸಿದ್ಧಾಂತ, ವಾದ, ಅಭಿಪ್ರಾಯ, ಮೊದಲಾದವನ್ನು – ತಲೆಗೆ ತುಂಬು, ತುರುಕು.

  • indoctrination
    ನಾಮವಾಚಕ
  • ಕಲಿಕೆ; ಬೋಧನೆ; ಶಿಕ್ಷಣ; ಉಪದೇಶ.
  • ಸಿದ್ಧಾಂತಾವೇಶನ; ಏಕಪಕ್ಷೀಯವಾದ ಯಾ ಪಕ್ಷಪಾತವುಳ್ಳ ತತ್ತ್ವ, ವಾದ, ಅಭಿಪ್ರಾಯ, ಮೊದಲಾದವನ್ನು ತಲೆಗೆ ತುರುಕುವುದು.

  • indole
    ನಾಮವಾಚಕ
    (ರಸಾಯನವಿಜ್ಞಾನ) ಇಂಡೋಲ್‍; ಮಲ್ಲಿಗೆ ಎಣ್ಣೆ ಮತ್ತು ಪುನಗಿನಲ್ಲಿರುವ, ಅಧಿಕ ಪ್ರಮಾಣದಲ್ಲಿರುವಾಗ ದುರ್ವಾಸನೆಯಿಂದ ಕೂಡಿರುವ, ಬೆನಿ’ನ್‍ ಮತ್ತು ಪಿರೋಲ್‍ (Pyrrole) ಚಕ್ರಗಳ ಮಿಲನದಿಂದಾದ ಕಾರ್ಬನಿಕ ಸಂಯುಕ್ತ, ${\rm C}_8{\rm H}_7{\rm N}$.

    indolence
    ನಾಮವಾಚಕ
  • ಸೋಮಾರಿತನ; ಅಲಸತೆ; ಪಾಲುಮಾರಿಗೆ; ಮೈಗಳ್ಳತನ.
  • (ವೈದ್ಯಶಾಸ್ತ್ರ) ವೇದನಾರಾಹಿತ್ಯ; ನೋವು ಕೊಡದಿರುವಿಕೆ.

  • indolent
    ಗುಣವಾಚಕ
  • ಸೋಮಾರಿಯಾದ; ಅಲಸತೆಯ; ಪಾಲುಮಾರಿಕೆಯ; ಮೈಗಳ್ಳತನದ.
  • (ವೈದ್ಯಶಾಸ್ತ್ರ) ನೋವು ಕೊಡದ; ವೇದನಾರಹಿತ: indolent tumour ನೋವು ಕೊಡದ ಗಂತಿ.

  • indolently
    ಕ್ರಿಯಾವಿಶೇಷಣ
    ಸೋಮಾರಿಯಾಗಿ; ಸೋಮಾರಿತನದಿಂದ; ಅಲಸತೆಯಿಂದ; ಪಾಲುಮಾರಿಕೆಯಿಂದ; ಮೈಗಳ್ಳನಾಗಿ; ಮೈಗಳ್ಳತನದಿಂದ.

    Indologist
    ನಾಮವಾಚಕ
    ಭಾರತಜ್ಞ; ಭಾರತದ ಇತಿಹಾಸ, ಸಾಹಿತ್ಯ, ಮೊದಲಾದವನ್ನು ಅಧ್ಯಯನ ಮಾಡುವವ ಯಾ ಮಾಡಿರುವವ.

    Indology
    ನಾಮವಾಚಕ
    ಭಾರತಾಧ್ಯಯನ; ಭಾರತಶಾಸ್ತ್ರ; ಭಾರತದ ಇತಿಹಾಸ, ಸಾಹಿತ್ಯ, ಮೊದಲಾದವುಗಳ ಅಧ್ಯಯನ.

    indomitable
    ಗುಣವಾಚಕ
  • ಬಗ್ಗದ; ಸಗ್ಗದ; ಅದಮ್ಯ; ದುರ್ದಮನೀಯ.
  • ಪಟ್ಟು ಹಿಡಿಯುವ; ಹಠದ.


  • logo