logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

originate
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಜನ್ಮ ಕೊಡು; ಉತ್ಪತ್ತಿ ಮಾಡು; ಸೃಷ್ಟಿಸು.
  • ಶುರು ಮಾಡಿಸು; ಮೊದಲು ಮಾಡಿಸು; ಆರಂಭಿಸುವಂತೆ ಮಾಡು; ಪ್ರಾರಂಭ ಮಾಡಿಸು.

  • origination
    ನಾಮವಾಚಕ
  • ಜನ್ಮಕೊಡುವುದು; ಸೃಷ್ಟಿಸುವುದು.
  • ಪ್ರಾರಂಭಿಸುವುದು.
  • ಹುಟ್ಟುವುದು; ಉದ್ಭವ; ಜನನ; ಜನ್ಮ ಹೊಂದುವುದು; ಉದ್ಭವಿಸುವುದು.
  • ಪ್ರಾರಂಭ; ಶುರು; ಆರಂಭವಾಗುವುದು; ಉಪಕ್ರಮವಾಗುವುದು.

  • originative
    ಗುಣವಾಚಕ
    ಸೃಷ್ಟಿಶೀಲ; (ಯಾವುದಕ್ಕೇ) ಜನ್ಮ ಕೊಡುವ ಸಾಮರ್ಥ್ಯವುಳ್ಳ.

    originator
    ನಾಮವಾಚಕ
  • ಜನಕ; ಜನ್ಮ ಕೊಟ್ಟವನು; ಸೃಷ್ಟಿಸಿದವನು.
  • ಪ್ರಾರಂಭಿಸಿದವನು; ಪ್ರವರ್ತಕ.

  • orinasal
    ಗುಣವಾಚಕ
    (ಮುಖ್ಯವಾಗಿ ನಾಸಿಕವಾಗಿ ಉಚ್ಚರಿಸುವ ಹ್ರೆಂಚ್‍ ಸ್ವರಗಳ ವಿಷಯದಲ್ಲಿ) ಬಾಯಿ ಮೂಗುಗಳ; ಬಾಯಿ ಮೂಗುಗಳಿಂದ ಉಚ್ಚರಿಸುವ; ಮುಖನಾಸಿಕ.

    orinasal
    ನಾಮವಾಚಕ
    (ಮುಖ್ಯವಾಗಿ ಹ್ರೆಂಚ್‍ ಸ್ವರಗಳ ವಿಷಯದಲ್ಲಿ) ಮುಖನಾಸಿಕ ಸ್ವರ.

    oriole
    ನಾಮವಾಚಕ ಪದಗುಚ್ಛ
    ಓರಿಯೋಲ್‍ ಹಕ್ಕಿ; ಸೀತೆ ಹಕ್ಕಿ: golden oriole ಹೊಂಬಣ್ಣದ ಓರಿಯೋಲ್‍.
  • ಬೇಸಗೆಯಲ್ಲಿ ಬ್ರಿಟಿಷ್‍ ದ್ವೀಪಗಳಿಗೆ ಬರುವ, ಕಪ್ಪು ಮತ್ತು ಹಳದಿ ಗರಿಗಳುಳ್ಳ ಹಕ್ಕಿ.
  • ಇದೇ ಬುಡಕಟ್ಟಿನ ಪ್ರಾಚೀನ ಕಾಲದ ಬಗೆಬಗೆಯ ಹಕ್ಕಿಜಾತಿ.
  • ಇದೇ ಬಗೆಯ ಬಣ್ಣಗಳುಳ್ಳ ಅಮೆರಿಕದ ವಿವಿಧ ಪಕ್ಷಿ (ಜಾತಿ).

  • Orion
    ನಾಮವಾಚಕ ಪದಗುಚ್ಛ
    (ಖಗೋಳ ವಿಜ್ಞಾನ) ಮಹಾವ್ಯಾಧ; ಓರಿಯನ್‍; ನಡುಪಟ್ಟಿ ಮತ್ತು ಕತ್ತಿಗಳನ್ನುಳ್ಳ ಬೇಟೆಗಾರನ ಆಕೃತಿಗೆ ಹೋಲಿಸಲಾದ, ರಾಶಿ ಚಕ್ರಕ್ಕೆ ಸ್ವಲ್ಪ ದಕ್ಷಿಣದಲ್ಲಿರುವ, ಮೃಗಶಿರ ನಕ್ಷತ್ರವನ್ನೊಳಗೊಂಡ ಉಜ್ವಲ ತಾರಾಪುಂಜ.
  • Orion’s belt ಓರಿಯನ್‍ ಡಾಬು, ಒಡ್ಯಾಣ, ನಡುಪಟ್ಟಿ; ಓರಿಯನ್‍ನಲ್ಲಿ (ನಡುಪಟ್ಟಿಯಂತೆ) ಅಡ್ಡಸಾಲಾಗಿರುವ ಮೂರು ಉಜ್ವಲ ತಾರೆಗಳು.
  • Orion’s hound ಸಿರಿಯಸ್‍ (ನಕ್ಷತ್ರ); ಲುಬ್ಧಕ; ಓರಿಯನ್‍ ನಕ್ಷತ್ರ ಪುಂಜದಲ್ಲಿನ ಅತ್ಯಂತ ಪ್ರಕಾಶಮಾನವಾದ ಒಂದು ನಕ್ಷತ್ರ.

  • orison
    ನಾಮವಾಚಕ
    (ಸಾಮಾನ್ಯವಾಗಿ ಬಹುವಚನದಲ್ಲಿ) (ಪ್ರಾಚೀನ ಪ್ರಯೋಗ) ಪ್ರಾರ್ಥನೆ.

    Oriya
    ನಾಮವಾಚಕ
  • ಭಾರತದ ಒರಿಸ್ಸಾದವನು.
  • (ಇಂಡೋಯೂರೋಪಿಯನ್‍ ಭಾಷಾ ವರ್ಗಕ್ಕೆ ಸೇರಿದ) ಒರಿಯ ಭಾಷೆ.


  • logo