logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

individualize
ಸಕರ್ಮಕ ಕ್ರಿಯಾಪದ
  • ವ್ಯಕ್ತೀಕರಿಸು; ವ್ಯಕ್ತಿಲಕ್ಷಣ ಕೊಡು; ವಿಶಿಷ್ಟವಾಗಿಸು; ವಿಶಿಷ್ಟವೆನ್ನಿಸು.
  • ನಿರ್ದಿಷ್ಟವಾಗಿ ಹೇಳು; (ವ್ಯಕ್ತಿಲಕ್ಷಣ) ಗುರುತಿಸಿ ಹೇಳು; ಬೇರೆ ಬೇರೆಯಾಗಿ ಹೇಳು; ಪೃಥಕ್ಕಾಗಿ ನಿರ್ದೇಶಿಸು.

  • individually
    ಕ್ರಿಯಾವಿಶೇಷಣ
  • ವ್ಯಕ್ತಿಭಾವದಲ್ಲಿ; ವೈಯಕ್ತಿಕವಾಗಿ.
  • ವಿಶಿಷ್ಟ ರೀತಿಯಲ್ಲಿ; ವೈಶಿಷ್ಟ್ಯದಿಂದ ಕೂಡಿ.
  • ವ್ಯಕ್ತಿಶಃ; ವ್ಯಷ್ಟಿಯಾಗಿ; ಒಬ್ಬೊಬ್ಬರಾಗಿ; ಒಂದೊಂದಾಗಿ; ಪ್ರತ್ಯೇಕ ಪ್ರತ್ಯೇಕವಾಗಿ; ಒಟ್ಟಾಗಿಲ್ಲದೆ.

  • individuate
    ಸಕರ್ಮಕ ಕ್ರಿಯಾಪದ
    = individualize.

    individuation
    ನಾಮವಾಚಕ ಪದಗುಚ್ಛ
    principle of individuation ವ್ಯಕ್ತೀಕರಣ ತತ್ತ್ವ; ವ್ಯಕ್ತಿ ರೂಪಗೊಳ್ಳುವ ರೀತಿಯಲ್ಲಿ ಕುರಿತ ತತ್ತ್ವ.
  • ವ್ಯಕ್ತೀಕರಣ; ವ್ಯಕ್ತಿರೂಪ ಕೊಡುವಿಕೆ.
  • (ವ್ಯಕ್ತಿಯಾಗಿ) ಪ್ರತ್ಯೇಕ ಅಸ್ತಿತ್ವ ಯಾ ಸ್ಥಿತಿ.
  • ವ್ಯಕ್ತಿತ್ವ; ವೈಯಕ್ತಿಕತೆ; ವ್ಯಕ್ತಿ – ವೈಲಕ್ಷಣ್ಯ, ವೈಶಿಷ್ಟ್ಯ.
  • (ತತ್ತ್ವಶಾಸ್ತ್ರ) ವ್ಯಷ್ಟೀಭವನ; ಸಾಮಾನ್ಯದಿಂದ ವ್ಯಕ್ತಿಯ ಯಾ ಸಮಷ್ಟಿಯಿಂದ ವ್ಯಷ್ಟಿಯ ಬೆಳವಣಿಗೆ.

  • indivisibility
    ನಾಮವಾಚಕ
    ಅವಿಭಾಜ್ಯತೆ; ಅಭಾಜ್ಯತೆ.

    indivisible
    ಗುಣವಾಚಕ
    ಅವಿಭಾಜ್ಯ; ಅಭಾಜ್ಯ; ಅಖಂಡ; ಭಾಗಿಸಲಾಗದ; ಭಾಗಗಳಾಗಿ ಒಡೆಯಲಾಗದ: one nation indivisible ಅವಿಭಾಜ್ಯವಾದ ಒಂದೇ ರಾಷ್ಟ್ರ.

    indivisible
    ನಾಮವಾಚಕ
    ಅವಿಭಾಜ್ಯ, ಅಖಂಡ – ವಸ್ತು.

    indivisibly
    ಕ್ರಿಯಾವಿಶೇಷಣ
    ಅವಿಭಾಜ್ಯವಾಗಿ; ಅಭಾಜ್ಯವಾಗಿ; ಅಖಂಡವಾಗಿ; ಭಾಗಿಸಲಾಗದಂತೆ; ಭಾಗಗಳಾಗಿ ಒಡೆಯದ ರೀತಿಯಲ್ಲಿ.

    Indo-
    ಸಮಾಸ ಪೂರ್ವಪದ
    ಇಂಡೋ:
  • ಇಂಡಿಯದ, ಹಿಂದೂದೇಶದ, ಭಾರತೀಯ ಎಂಬ ಅರ್ಥದ ಶಬ್ದಗಳನ್ನು ರಚಿಸಲು ಬಳಸುವ ಸಮಾಸ ಪೂರ್ವಪದ.
  • ಇಂಡಿಯದ ಮತ್ತು ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.

  • Indo-Aryan
    ನಾಮವಾಚಕ
    ಇಂಡೋಆರ್ಯನ್‍; ಹಿಂದೂ ಆರ್ಯ:
  • ಇಂಡಿಕ್‍ ಯಾ ಹಿಂದೂ ಆರ್ಯ ವರ್ಗ.
  • ಇಂಡೋಯುರೋಪಿಯನ್‍ ಭಾಷೆಗಳನ್ನಾಡುವ ಜನರು.
  • ಇಂಡೋ ಯೂರೋಪಿಯನ್‍ ಭಾಷಾವರ್ಗ.


  • logo