logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indivertibly
ಕ್ರಿಯಾವಿಶೇಷಣ
ಬೇರೆ ಕಡೆಗೆ ಹಾಯಿಸಲಾಗದಂತೆ; ಅನ್ಯತ್ರ ತಿರುಗಿಸಲಾಗದಂತೆ.

individual
ಗುಣವಾಚಕ
  • ಒಂದು; ಒಬ್ಬ; ಏಕ.
  • ಒಂದು ಗೊತ್ತಾದ; ವಿಶೇಷವಾದ; ವಿಶಿಷ್ಟವಾದ; ಸಾಮಾನ್ಯವಾದದ್ದಲ್ಲದ.
  • ಪ್ರತ್ಯೇಕ ಲಕ್ಷಣವುಳ್ಳ; ವ್ಯಕ್ತಿವೈಲಕ್ಷಣ್ಯದ; ಸ್ವಲಕ್ಷಣದ.
  • ವೈಯಕ್ತಿಕ; ವ್ಯಕ್ತಿಸಹಜವಾದ.
  • ಏಕೋದ್ದಿಷ್ಟ; ಕೇವಲ ಒಬ್ಬನ ಉಪಯೋಗಕ್ಕೆ ಮಾತ್ರ ಇರುವ: individual portions ಒಬ್ಬನ ಪಾಲು, ಭಾಗ.

  • individual
    ನಾಮವಾಚಕ
  • ಒಂದು; ಒಬ್ಬ; ಒಂದು ವರ್ಗಕ್ಕೆ ಸೇರಿದ ವ್ಯಕ್ತಿ.
  • (ಸಮಾಜ, ಕುಟುಂಬ, ಮೊದಲಾದವಕ್ಕೆ ವ್ಯತಿರಿಕ್ತವಾಗಿ ಮನುಷ್ಯ ಮೊದಲಾದ) ವ್ಯಕ್ತಿ; ವ್ಯಷ್ಟಿ.
  • (ಆಡುಮಾತು) ಆಳು; ಆಸಾಮಿ; ಇಸಮು: an exceedingly unpleasant individual ತೀರ ಹೊಲಸು ಆಸಾಮಿ.

  • individualise
    ಸಕರ್ಮಕ ಕ್ರಿಯಾಪದ
    = individualize.

    individualism
    ನಾಮವಾಚಕ
  • ಅಹಂತೆ; ಅಹಂಕಾರ; ಅಹಂಭಾವ.
  • (ಸಮಾಜಶಾಸ್ತ್ರ) ವ್ಯಕ್ತಿವಾದ; ವ್ಯಕ್ತಿ ಸ್ವಾತಂತ್ರ್ಯತತ್ತ್ವ; ವ್ಯಕ್ತಿಗಳು ಸ್ವತಂತ್ರವಾಗಿ ತಮಗಿಷ್ಟ ಬಂದಂತೆ ನಡೆಯಲು ಸ್ವತಂತ್ರರು ಎಂಬ ತತ್ತ್ವ.
  • ಸ್ವತಂತ್ರಭಾವ; ಸ್ವತಂತ್ರವಾಗಿ ಹಾಗೂ ಸ್ವಾವಲಂಬಿಯಾಗಿ ಇರುವ ಅಭ್ಯಾಸ ಯಾ ತತ್ತ್ವ.

  • individualist
    ನಾಮವಾಚಕ
    ವ್ಯಕ್ತಿ (ಸ್ವಾತಂತ್ರ್ಯ)ವಾದಿ: rugged individualist (ಅಮೆರಿಕನ್‍ ಪ್ರಯೋಗ) ಕಟ್ಟಾ ವ್ಯಕ್ತಿವಾದಿ.

    individualist
    ಗುಣವಾಚಕ
    = individualistic.

    individualistic
    ಗುಣವಾಚಕ
  • ಅಹಂಭಾವದ.
  • ವ್ಯಕ್ತಿ (ಸ್ವಾತಂತ್ರ್ಯ) ವಾದಕ್ಕೆ ಸಂಬಂಧಿಸಿದ; ವ್ಯಕ್ತಿ ಸ್ವಾತಂತ್ರ್ಯವಾದವನ್ನು ಒಳಗೊಂಡ.
  • ವ್ಯಕ್ತಿ ಸ್ವಾತಂತ್ರ್ಯವಾದಿಯ.
  • ವೈಯಕ್ತಿಕ; ವ್ಯಕ್ತಿ ವೈಶಿಷ್ಟ್ಯದ; ವ್ಯಕ್ತಿ ವೈಲಕ್ಷಣ್ಯಗಳಿಂದ ಕೂಡಿದ: strongly individualistic tendencies ತೀರ ವೈಯಕ್ತಿಕ ಪ್ರವೃತ್ತಿಗಳು.

  • individuality
    ನಾಮವಾಚಕ
  • ಪ್ರತ್ಯೇಕ ಅಸ್ತಿತ್ವ.
  • ವ್ಯಕ್ತಿತ್ವ; ವೈಯಕ್ತಿಕತೆ; ಮುಖ್ಯವಾಗಿ ಎದ್ದುಕಾಣುವ ವ್ಯಕ್ತಿಲಕ್ಷಣ, ವೈಯಕ್ತಿಕ ಗುಣ.
  • (ಬಹುವಚನದಲ್ಲಿ) ವೈಯಕ್ತಿಕ ಅಭಿರುಚಿಗಳು, ಗುಣಗಳು, ಮೊದಲಾದವು.

  • individualization
    ನಾಮವಾಚಕ
  • ವ್ಯಕ್ತೀಕರಣ; ವ್ಯಕ್ತಿ ಲಕ್ಷಣ ಕೊಡುವಿಕೆ; ವಿಶಿಷ್ಟವೆನ್ನಿಸುವಿಕೆ.
  • ನಿರ್ದಿಷ್ಟವಾಗಿ ಹೇಳುವುದು; ಪೃಥಕ್ಕಾಗಿ ನಿರ್ದೇಶಿಸುವುದು.


  • logo