ವಿಶೇಷ ಗುಣವಿಲ್ಲದೆ; ವೈಶಿಷ್ಟ್ಯವಿಲ್ಲದೆ; ವಿಶಿಷ್ಟತೆಯಿಲ್ಲದೆ.
ವಿವೇಚನೆ ಇಲ್ಲದೆ; ತಾರತಮ್ಯ ಜ್ಞಾನವಿಲ್ಲದೆ.
indistinctly
ಕ್ರಿಯಾವಿಶೇಷಣ
ಅಸ್ಪಷ್ಟವಾಗಿ; ಅಸ್ಫುಟವಾಗಿ.
ಮಬ್ಬಾಗಿ; ಮಸುಕು ಮಸುಕಾಗಿ.
indistinctness
ನಾಮವಾಚಕ
ಅಸ್ಪಷ್ಟತೆ; ಅಸ್ಫುಟತೆ.
ಮಸುಕು; ಮಬ್ಬಾಗಿರುವುದು.
indistinguishable
ಗುಣವಾಚಕ
ಅಸ್ಪಷ್ಟ; ಅಸ್ಫುಟ; ವ್ಯತ್ಯಾಸ ಕಾಣಿಸದ.
ಮಸುಕಾದ; ಸ್ಪಷ್ಟವಾಗಿ ಗೋಚರಿಸದ.
indistinguishably
ಕ್ರಿಯಾವಿಶೇಷಣ
ಅಸ್ಪಷ್ಟವಾಗಿ; ವ್ಯತ್ಯಾಸ ಮಾಡಲು ಕಷ್ಟವೆನಿಸುವಂತೆ; ಹೆಚ್ಚು ವ್ಯತ್ಯಾಸ ತೋರದ ರೀತಿಯಲ್ಲಿ.
indistributable
ಗುಣವಾಚಕ
ಹಂಚಲಾಗದ; ಅವಿತರಣೀಯ.
indite
ಸಕರ್ಮಕ ಕ್ರಿಯಾಪದ
(ಕವಿತೆ, ಭಾಷಣ, ಮೊದಲಾದವನ್ನು) ರಚಿಸು.
(ಸಾಮಾನ್ಯವಾಗಿ ಹಾಸ್ಯ ಪ್ರಯೋಗ) (ಕಾಗದ ಪತ್ರ ಮೊದಲಾದವನ್ನು) ಬರೆ.
indium
ನಾಮವಾಚಕ
(ರಸಾಯನವಿಜ್ಞಾನ) ಇಂಡಿಯಮ್; ಪರಮಾಣು ಸಂಖ್ಯೆ 49, ಪರಮಾಣು ತೂಕ 114.82 ಇರುವ, ಸತು ಮೊದಲಾದವುಗಳ ಜೊತೆ ವಿರಳವಾಗಿ ದೊರೆಯುವ, ಬೆಳ್ಳಿಯಂಥ ಬಿಳಿಯ ಬಣ್ಣದ, ತ್ರಿವೇಲೆನ್ಸೀಯ ಮೃದು ಲೋಹಧಾತು.