logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indisposed
ಗುಣವಾಚಕ
  • (ಸ್ವಲ್ಪ) ಅಸ್ವಸ್ಥವಾಗಿರುವ, ಆರೋಗ್ಯ ಕೆಟ್ಟಿರುವ; (ತುಸು) ಅನಾರೋಗ್ಯವಾದ: I am indisposed ನನಗೆ (ಸ್ವಲ್ಪ) ಆರೋಗ್ಯ ಕೆಟ್ಟಿದೆ.
  • ಹಿಡಿಸದ; ಇಷ್ಟವಿಲ್ಲದ; ಬೇಕಿಲ್ಲದ.

  • indisposition
    ನಾಮವಾಚಕ
  • (ಮುಖ್ಯವಾಗಿ ತೀವ್ರವಲ್ಲದ ಯಾ ಬೇಗ ವಾಸಿಯಾಗುವಂಥ) ಅಸ್ವಸ್ಥತೆ; ಅನಾರೋಗ್ಯ; ಇರಸುಮುರುಸು; ದೇಹಾಲಸ್ಯ; ಮುಜುಗರ; ಜಡ್ಡು.
  • ವಿಮುಖತೆ; ವಿಮನಸ್ಕತೆ; ಒಲವಿಲ್ಲದಿರುವುದು; ಮನಸ್ಸಿಲ್ಲದಿರುವುದು: a certain indisposition to face reality ವಾಸ್ತವತೆಯನ್ನು ಎದುರಿಸಲೊಲ್ಲದ ಒಂದು ರೀತಿಯ ವಿಮುಖತೆ.
  • ಉಪೇಕ್ಷೆ; ಅನಾದರ; ಅಪ್ರೀತಿ: the indisposition of the king towards his subjects ಪ್ರಜೆಗಳ ಬಗ್ಗೆ ದೊರೆಯ ಅನಾದರ.

  • indisputability
    ನಾಮವಾಚಕ
  • ನಿರ್ವಿವಾದತೆ; ಚರ್ಚೆಗೆ ಅವಕಾಶವಿಲ್ಲದಿರುವ ಸ್ಥಿತಿ, ಗುಣ.
  • ಪ್ರಶ್ನಾತೀತತೆ.

  • indisputable
    ಗುಣವಾಚಕ
  • ನಿರ್ವಿವಾದದ; ವಾದಕ್ಕೆಡೆಯಿಲ್ಲದ; ಚರ್ಚೆಗವಕಾಶವಿಲ್ಲದ; ಚರ್ಚಾಸ್ಪದವಲ್ಲದ.
  • ಪ್ರಶ್ನಾತೀತ(ವಾದ); ಪ್ರತಿ ಹೇಳಲಾಗದ.

  • indisputableness
    ನಾಮವಾಚಕ
    = indisputability.

    indisputably
    ಕ್ರಿಯಾವಿಶೇಷಣ
  • ನಿರ್ವಿವಾದವಾಗಿ; ವಾದಕ್ಕೆಡೆಯಿಲ್ಲದಂತೆ; ಚರ್ಚೆಗವಕಾಶವಿಲ್ಲದ ರೀತಿಯಲ್ಲಿ.
  • ಪ್ರಶ್ನಾತೀತವಾಗಿ.

  • indissolubility
    ನಾಮವಾಚಕ
  • ಸ್ಥಿರತೆ; ದೃಢತೆ.
  • ಅವಿಚ್ಛೇದ್ಯತೆ.
  • ಅವಿಲೀನತೆ; ಕರಗಿಹೋಗದಿರುವುದು.

  • indissoluble
    ಗುಣವಾಚಕ
  • ಒಡೆಯಲಾಗದ; ಮುರಿಯಲಾಗದ; ವಿಘಟಿಸಲಾಗದ; ಅವಿಚ್ಛೇದ್ಯ: an indissoluble bond ಅವಿಚ್ಛೇದ್ಯಬಂಧ; ಮುರಿಯಲಾಗದ ಕಟ್ಟು.
  • ಸ್ಥಿರವಾದ; ದೃಢವಾದ.
  • ಕರಗಿಹೋಗದ; ಲೀನವಾಗದ.

  • indissolubly
    ಕ್ರಿಯಾವಿಶೇಷಣ
  • ಒಡೆಯಲಾಗದ ರೀತಿಯಲ್ಲಿ.
  • ಸ್ಥಿರವಾಗಿ; ದೃಢವಾಗಿ.
  • ಕರಗಿಹೋಗದೆ; ಲೀನವಾಗದೆ.

  • indistinct
    ಗುಣವಾಚಕ
  • ಅಸ್ಪಷ್ಟ; ಅಸ್ಫುಟ; ಸ್ಪಷ್ಟವಾಗಿ ಗುರುತಿಸಲಾಗದ: indistinct markings ಅಸ್ಪಷ್ಟ ಗುರುತುಗಳು.
  • ಮಬ್ಬಾದ; ಮಸುಕು ಮಸುಕಾದ.


  • logo