logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

organo-
ಸಮಾಸ ಪೂರ್ವಪದ
  • (ಮುಖ್ಯವಾಗಿ ಜೀವವಿಜ್ಞಾನ) organ.
  • (ರಸಾಯನವಿಜ್ಞಾನ) organic.

  • organoleptic
    ಗುಣವಾಚಕ
    ಇಂದ್ರಿಯ ಪರಿಣಾಮಿ; ಇಂದ್ರಿಯಗಳ ಮೇಲೆ ಪರಿಣಾಮ ಉಂಟುಮಾಡುವ.

    organometallic
    ಗುಣವಾಚಕ
    (ಸಂಯುಕ್ತದ ವಿಷಯದಲ್ಲಿ) ಕಾರ್ಬನಿಕ–ಲೌಹಿಕ; ಲೋಹವಿರುವ ಕಾರ್ಬನಿಕ.

    organon
    ನಾಮವಾಚಕ
  • ಜ್ಞಾನಸಾಧನ ಯಾ ವಿಚಾರ ಸಾಧನ; ಚಿಂತನಕ್ಕೆ ಸಾಧನವಾಗಿರುವ ತರ್ಕ ವ್ಯವಸ್ಥೆ.
  • (ಮುಖ್ಯವಾಗಿ ಅರಿಸ್ಟಾಟಲನ) ತರ್ಕಗ್ರಂಥ.

  • organotherapy
    ನಾಮವಾಚಕ
    ಜೈವಿಕ ಸಾರ ಚಿಕಿತ್ಸೆ; ಪ್ರಾಣಿಗಳ ಅಂಗಗಳಿಂದ ತೆಗೆದ ಸಾರಗಳನ್ನುಪಯೋಗಿಸಿ ನೀಡುವ ಚಿಕಿತ್ಸೆ.

    organum
    ನಾಮವಾಚಕ
    = organon.

    organza
    ನಾಮವಾಚಕ
    ಆರ್ಗ್ಯಾನ್ಸ; ತೆಳುವಾದ ಮತ್ತು ಗಟ್ಟಿಯಾದ, ರೇಷ್ಮೆ ಯಾ ಕೃತಕ ದಾರದ ಬಟ್ಟೆ.

    organzine
    ನಾಮವಾಚಕ
    ಹಾಸುಹೊಕ್ಕುಗಳು ಪರಸ್ಪರ ಎದುರು ದಿಕ್ಕಿನಲ್ಲಿರುವ ರೇಶ್ಮೆಯ ಹುರಿ.

    orgasm
    ನಾಮವಾಚಕ
  • ತೀವ್ರೋದ್ರೇಕ; ರೋಷ; ಕ್ರೋಧ; ಕ್ರೋಧಾವೇಶ.
  • (ಮುಖ್ಯವಾಗಿ ಸಂಭೋಗಕಾಲದಲ್ಲಿ ಉಂಟಾಗುವ) ಸಂಭೋಗೋದ್ರೇಕದ, ಮೈಥುನೋದ್ರೇಕದ–ಪರಾಕಾಷ್ಠೆ, ಚರಮಸ್ಥಿತಿ.

  • orgasmic
    ಗುಣವಾಚಕ
  • ತೀವ್ರೋದ್ರೇಕದ; ಕ್ರೋಧಾವೇಶದ.
  • ಸಂಭೋಗೋದ್ರೇಕದ.


  • logo