logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

organist
ಗುಣವಾಚಕ
ಆರ್ಗನ್‍ ವಾದಕ.

organizable
ಗುಣವಾಚಕ
ಸಂಘಟಿಸಬಲ್ಲ; ಸಂಯೋಜಿಸಬಲ್ಲ; ವ್ಯವಸ್ಥೆ ಮಾಡಲು ಸಾಧ್ಯವಾದ.

organization
ನಾಮವಾಚಕ
  • ಸಾವಯವಗೊಳಿಸುವುದು; ಜೀವಿಯನ್ನಾಗಿ ಯಾ ಅಂಗಾಂಶವನ್ನಾಗಿ ಮಾಡುವುದು.
  • ಸಾವಯವಗೊಳ್ಳುವುದು.
  • (ಅಂಗಾಂಗಿ ಸಂಬಂಧವುಳ್ಳ ಅಂಶಗಳನ್ನು ಸುವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಸಂಯೋಜಿಸಿ) ಒಂದು ಸಾವಯವ ಸಮಷ್ಟಿಯನ್ನು ರಚಿಸುವುದು; ಸಂಘಟನ; ಸಂಯೋಜನ.
  • (ವ್ಯಾಪಾರೀಸಂಸ್ಥೆ, ಸರ್ಕಾರ, ಇಲಾಖೆ, ಮೊದಲಾದ) ಸಂಘಟನೆ; ಸಂಸ್ಥೆ; ರಚನೆ; ಸಂಘ; ಸಮಾಜ.

  • organization man
    ನಾಮವಾಚಕ
    ಸಾಂಸ್ಥಿಕ ಮನುಷ್ಯ; ಸಂಸ್ಥಾನಿಷ್ಠ; ಸೇವೆ ಸಲ್ಲಿಸುವ ಸಂಸ್ಥೆಗೆ ತನ್ನ ವ್ಯಕ್ತಿತ್ವವನ್ನೂ ತನ್ನ ಜೀವನವನ್ನೂ ಮುಡಿಪಾಗಿಟ್ಟಿರುವವ.

    organizational
    ಗುಣವಾಚಕ
  • ಸಾಂಸ್ಥಿಕ; ಸಂಸ್ಥೆಯ ಯಾ ಅದಕ್ಕೆ ಸಂಬಂಧಿಸಿದ.
  • ವ್ಯವಸ್ಥೆಗೆ, ಸಂಘಟನೆಗೆ ಸಂಬಂಧಿಸಿದ.

  • organizationally
    ಕ್ರಿಯಾವಿಶೇಷಣ
  • ಸಾಂಸ್ಥಿಕವಾಗಿ; ಸಂಸ್ಥೆಗೆ ಸಂಬಂಧಿಸಿದಂತೆ.
  • ವ್ಯವಸ್ಥೆಗೆ, ಸಂಘಟನೆಗೆ ಸಂಬಂಧಿಸಿದಂತೆ.

  • organize
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಸಾವಯವ ಸಮಷ್ಟಿಯಾಗು.
    1. ಸಾವಯವಗೊಳಿಸು; ಅಂಗಾಂಗಿಯನ್ನಾಗಿ ಮಾಡು.
    2. ಜೀವಿಯನ್ನಾಗಿ ಯಾ ಜೀವಂತ ಊತಕವನ್ನಾಗಿ, ಅಂಗಾಂಶವನ್ನಾಗಿ ಮಾಡು.
  • (ವಿವಿಧ ಅಂಶಗಳನ್ನು, ಅಂಗಗಳನ್ನು ಸಂಯೋಜಿಸಿ) ಸಾವಯವ ಸಮಷ್ಟಿಯನ್ನು–ರಚಿಸು, ಸಂಘಟಿಸು.
  • ವ್ಯವಸ್ಥೆಗೊಳಿಸು; ಸಂಘಟಿಸು; ಸಂಯೋಜಿಸು; ಕ್ರಮಬದ್ಧವಾದ ರಚನೆ ಕಲ್ಪಿಸು.
  • (ವ್ಯಕ್ತಿಯೊಬ್ಬನ ಯಾ ತನ್ನ) ವ್ಯವಹಾರಗಳನ್ನು–ಕ್ರಮಗೊಳಿಸು, ಕ್ರಮಬದ್ಧವಾಗಿರುವಂತೆ ಮಾಡು.
  • (ವ್ಯಕ್ತಿಯೊಬ್ಬನಿಗೆ) ಅನುಕೂಲಗಳನ್ನು ಏರ್ಪಡಿಸು.
  • (ಯೋಜನೆ ಮೊದಲಾದವುಗಳಿಗೆ) ವ್ಯವಸ್ಥೆಮಾಡು; (ಅವನ್ನು) ಏರ್ಪಡಿಸು; ಪ್ರಾರಂಭಿಸು.
  • (ಹಲವು ಸಲ ಕರ್ಮರಹಿತವಾಗಿ ಪ್ರಯೋಗ)
    1. (ಕಾರ್ಮಿಕ ಸಂಘ, ರಾಜಕೀಯಪಕ್ಷ, ಮೊದಲಾದವುಗಳಿಗೆ) ಸದಸ್ಯರನ್ನು–ಕೂಡಿಸು, ಸೇರಿಸು.
    2. ಕಾರ್ಮಿಕ ಸಂಘ ಯಾ ರಾಜಕೀಯ ಪಕ್ಷವನ್ನು–ಕಟ್ಟು, ರಚಿಸು.

  • organized
    ಗುಣವಾಚಕ
  • ಸಾವಯವಗೊಳಿಸಿದ; ಅಂಗಾಂಗಿಯನ್ನಾಗಿ ಮಾಡಿದ.
  • ಜೀವಿಯನ್ನಾಗಿ ಯಾ ಜೀವಂತ ಊತಕವನ್ನಾಗಿ ಮಾಡಿದ.
  • ಸುಸಂಘಟಿತವಾದ; ಸುವ್ಯವಸ್ಥಿತ; ಸುಸಂಯೋಜಿತ.

  • organizer
    ನಾಮವಾಚಕ
    ಸಂಘಟಕ; ಸಂಯೋಜಕ; ಸಂಘಟನಕಾರ; ವ್ಯವಸ್ಥಾಪಕ.

    organless
    ಗುಣವಾಚಕ
    ಅಂಗಗಳಿಲ್ಲದ; ಅಂಗರಹಿತ; ಅವಯವರಹಿತ; ಅಂಗಶೂನ್ಯ; ನಿರವಯವ.


    logo