logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indiscernible
ಗುಣವಾಚಕ
  • ವಿವೇಚಿಸಲಾಗದ; ಅವಿವೇಚನೀಯ; ಒಂದಕ್ಕೂ ಮತ್ತೊಂದಕ್ಕೂ ಭೇದ ತಿಳಿಯಲಾಗದ.
  • ಅಸ್ಫುಟ; ಅಸ್ಪಷ್ಟ; ಸ್ಪಷ್ಟವಾಗಿ ಗೋಚರಿಸದ: his features were indiscernible ಅವನ ಮುಖಚಹರೆಗಳು ಅಸ್ಪಷ್ಟವಾಗಿದ್ದವು.

  • indiscernible
    ನಾಮವಾಚಕ ಪದಗುಚ್ಛ
    identity of indiscernibles ಅವಿವೇಚಿತಗಳ ತಾದಾತ್ಮ್ಯ; ವಿಶೇಷಣಗಳು ಯಾ ಲಕ್ಷಣಗಳು ಭಿನ್ನವಾಗಿರದಿದ್ದಲ್ಲಿ ವಸ್ತುಗಳು ವಿಭಿನ್ನವಾಗಿರಲಾರವು ಎಂಬ ವಾದ; ಗುಣಗಳು ಬೇರೆ ಬೇರೆಯಾಗಿದ್ದ ಹೊರತು ವಸ್ತುಗಳು ಬೇರೆ ಬೇರೆಯಾಗಿರಲಾರವು ಎಂಬ ಸಿದ್ಧಾಂತ.
  • ವಿವೇಚಿಸಲಾಗದ್ದು; ಅವಿವೇಚನೀಯ; ಒಂದಕ್ಕೂ ಮತ್ತೊಂದಕ್ಕೂ ಭೇದ ತಿಳಿಯಲಾರದಂಥದ್ದು.
  • ಅಸ್ಪಷ್ಟ ಪ್ರಾಣಿ, ವಸ್ತು, ಭಾವನೆ, ಮೊದಲಾದವು.

  • indiscernibly
    ಕ್ರಿಯಾವಿಶೇಷಣ
  • ಅವಿವೇಚನೀಯವಾಗಿ; ವಿವೇಚಿಸಲಾಗದ ರೀತಿಯಲ್ಲಿ.
  • ಅಸ್ಪಷ್ಟವಾಗಿ; ಅಸ್ಫುಟವಾಗಿ.

  • indiscerptibility
    ನಾಮವಾಚಕ
    (ಸಾಹಿತ್ಯಕ)
  • ಅವಿಘಟನೀಯತೆ.
  • ಅವಯವಗಳ ವಿಭಜನೆಯಿಂದ ನಾಶ ಹೊಂದದಿರುವಿಕೆ.

  • indiscerptible
    ಗುಣವಾಚಕ
    (ಸಾಹಿತ್ಯಕ)
  • ಅವಿಘಟನೀಯ; ಅವಿದಳನೀಯ; ಅವಿಭಜನೀಯ; ಅವಯವಗಳು ಒಡೆದು ಬೇರೆ ಬೇರೆಯಾಗಲಾರದ.
  • ಅವಯವಗಳು ಒಡೆದು ಬೇರೆಬೇರೆ ಆಗುವುದರಿಂದ ನಾಶ ಹೊಂದದ.

  • indiscipline
    ಗುಣವಾಚಕ
    ಅಶಿಸ್ತು; ಅಶಿಕ್ಷೆ; ಶಿಸ್ತಿಗೆ, ಕಟ್ಟಿಗೆ, ಅಂಕೆಗೆ – ಒಳಪಡದಿರುವಿಕೆ.

    indiscreet
    ಗುಣವಾಚಕ
  • ಅಚಾತುರ್ಯದ; ವಿವೇಕಶೂನ್ಯ; ವಿವೇಚನೆಯಿಲ್ಲದ.
  • ಅಜಾಗರೂಕ; ಪರಿವೆಯಿಲ್ಲದ; ಎಚ್ಚರವಿಲ್ಲದ; ಬೇಹುಷಾರಿನ.

  • indiscreetly
    ಕ್ರಿಯಾವಿಶೇಷಣ
  • ಅಚಾತುರ್ಯದಿಂದ; ವಿವೇಚನೆಯಿಲ್ಲದೆ.
  • ಅಜಾಗರೂಕತೆಯಿಂದ; ಬೇಹುಷಾರಿನಿಂದ.

  • indiscrete
    ಗುಣವಾಚಕ
    ಅವಿಭಕ್ತ; ಅವಿವಿಕ್ತ; ಅಖಂಡ; ಬೇರೆಬೇರೆ, ಪೃಥಕ್ಕಾದ ಭಾಗಗಳಿಲ್ಲದ: an indiscrete mass of material ಸಾಮಗ್ರಿಯ ಅಖಂಡ ರಾಶಿ.

    indiscretion
    ನಾಮವಾಚಕ ಪದಗುಚ್ಛ
    calculated indiscretion = indiscretion (3).
  • ಅಚಾತುರ್ಯ; ಅವಿವೇಕ; ವಿವೇಚನಶೂನ್ಯತೆ.
  • ಅಚಾತುರ್ಯ; ಸರ್ಕಾರದ ಗುಟ್ಟು ಮೊದಲಾದವನ್ನು ಅಕಸ್ಮಾತ್ತಾಗಿ, ಅವಿಚಾರದಿಂದ ಬಹಿರಂಗಪಡಿಸುವುದು.
  • ಉದ್ದೇಶಪೂರ್ವಕವಾದ ಅಚಾತುರ್ಯ; ಅಕಸ್ಮಾತ್‍ ಎಂದು ತೋರುವಂತೆ ಏರ್ಪಡಿಸಿ, ಉದ್ದೇಶಪೂರ್ವಕವಾಗಿ ಸರ್ಕಾರದ ಗುಟ್ಟು ಮೊದಲಾದವನ್ನು ಬಹಿರಂಗಪಡಿಸುವುದು.
  • ಅವಿವೇಕ; ವಿವೇಚನೆಯಿಲ್ಲದ ಮಾತು ಯಾ ಕಾರ್ಯ.
  • ಅನೌಚಿತ್ಯ; ಅವಿವೇಕ; ಔಚಿತ್ಯೋಲ್ಲಂಘನ; ಅನುಚಿತ ನಡೆವಳಿಕೆ; ಸಮಾಜದ ಮರ್ಯಾದೆ ಯಾ ನೀತಿಯನ್ನು ಅತಿಕ್ರಮಿಸುವುದು: the indiscretions of her earlier life ಅವಳ ಹಿಂದಿನ ಬಾಳಿನ ಅವಿವೇಕಗಳು.


  • logo