logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

organdie
ನಾಮವಾಚಕ
ಆರ್ಗಂಡಿ ಮಸ್ಲಿನ್‍; ಒಂದು ಬಗೆಯ ಬಹು ನವಿರಾದ ಮಸ್ಲಿನ್‍ ಬಟ್ಟೆ.

organdy
ನಾಮವಾಚಕ
(ಅಮೆರಿಕನ್‍ ಪ್ರಯೋಗ) = organdie.

organelle
ನಾಮವಾಚಕ
(ಜೀವವಿಜ್ಞಾನ) ಅಂಗಕ; ಆರ್ಗನೆಲ್‍; ಜೀವಕೋಶದ ಒಂದು ವಿಶೇಷ ಭಾಗ.

organic
ಗುಣವಾಚಕ
  • (ಶರೀರ ವಿಜ್ಞಾನ) ದೈಹಿಕ; ಆಂಗಿಕ; ಆವಯವಿಕ; ಅಂಗಾಂಗಗಳ, ಅವಕ್ಕೆ ಸಂಬಂಧಿಸಿದ: organic changes caused by emotion ಭಾವೋದ್ರೇಕದಿಂದ ಉಂಟಾದ ದೈಹಿಕ ಬದಲಾವಣೆಗಳು.
  • (ಪ್ರಾಣಿಯ ಯಾ ಸಸ್ಯದ ವಿಷಯದಲ್ಲಿ)
    1. ಅಂಗಯುಕ್ತ; ಸಾವಯವ; ಅಂಗಗಳಿರುವ.
    2. ವ್ಯವಸ್ಥಿತವಾದ ಅಂಗಗಳಿಂದ ರಚಿತವಾದ; ಅವಯವ ಘಟಿತ; ಆಂಗಿಕ; ಆವಯವಿಕ: organic structure of animals and plants ಸಸ್ಯ ಮತ್ತು ಪ್ರಾಣಿಗಳ ಆಂಗಿಕ, ಆವಯವಿಕ ರಚನೆ.
  • (ರೋಗಶಾಸ್ತ್ರ) (ವ್ಯಾಧಿಯ ವಿಷಯದಲ್ಲಿ) ಅಂಗವಿಕೃತ; ಆಂಗಿಕ ವ್ಯತ್ಯಾಸಜನ್ಯ; ಅಂಗವಿಕೃತಿಜನ್ಯ; ಅಂಗದ ರಚನೆಯಲ್ಲಾಗಿರುವ ಬದಲಾವಣೆಯಿಂದುಂಟಾದ.
  • ಜೈವಿಕ:
    1. ಜೀವಿಗಳಿಗೆ ಸಂಬಂಧಿಸಿದ: organic remains ಜೈವಿಕ ಅವಶೇಷಗಳು.
    2. (ಕೃಷಿ) ರಾಸಾಯನಿಕ ಗೊಬ್ಬರ, ಕೀಟನಾಶಕ, ಮೊದಲಾದವನ್ನು ಬಳಸದೆ ಬೆಳೆದ, ಉತ್ಪಾದಿಸಿದ: organic farming ಜೈವಿಕ ಕೃಷಿ. organic manure ಜೈವಿಕ ಗೊಬ್ಬರ.
    3. ಜೀವಿಯಂತೆ ಬೆಳೆಯುವ ಮತ್ತು ವಿಕಾಸವಾಗುವ: an organic view of history ಇತಿಹಾಸದ ಬಗ್ಗೆ ಜೈವಿಕ (ಜೀವಿಯಂತೆ ಬೆಳೆದು ವಿಕಾಸವಾಗುತ್ತದೆ ಎಂಬ) ದೃಷ್ಟಿ, ಅಭಿಪ್ರಾಯ.
  • (ರಸಾಯನವಿಜ್ಞಾನ) ಕಾರ್ಬನಿಕ:
    1. (ಸಂಯುಕ್ತಗಳ ವಿಷಯದಲ್ಲಿ) ಕಾರ್ಬನ್‍ ಉಳ್ಳ, ಮುಖ್ಯವಾಗಿ ಕಾರ್ಬನ್‍ ಪರಮಾಣುವಿಗೆ ಹೈಡ್ರೋಜನ್‍ ಬಂಧಿಸಿರುವ: organic compounds ಕಾರ್ಬನಿಕ ಸಂಯುಕ್ತಗಳು.
    2. ಕಾರ್ಬನಿಕ ಸಂಯುಕ್ತಗಳ, ಅವಕ್ಕೆ ಸಂಬಂಧಿಸಿದ: organic chemistry ಕಾರ್ಬನಿಕ ರಸಾಯನ ವಿಜ್ಞಾನ.
  • (ಒಂದರಲ್ಲಿ) ಅಂಶವಾದ; ಆಂತರಿಕ; ಸ್ವರೂಪಭೂತ; ಆಂಗಿಕ.
  • ಸುಸಂಘಟಿತ; ಸುವ್ಯವಸ್ಥಿತ; ಸುಸಂಯೋಜಿತ: organic unity ಸುಸಂಘಟಿತ ಏಕತೆ, ಐಕಮತ್ಯ. organic whole ಸುಸಂಯೋಜಿತ–ಸಮಷ್ಟಿ, ಅಖಂಡತೆ, ಪೂರ್ಣತೆ.
  • (ನ್ಯಾಯಶಾಸ್ತ್ರ) ದೇಶದ ರಾಜ್ಯಾಂಗನ್ಯಾಯಕ್ಕೆ, ಕಾನೂನುಗಳಿಗೆ ಸಂಬಂಧಿಸಿದ.

  • organic chemistry
    ನಾಮವಾಚಕ
    ಕಾರ್ಬನಿಕ ರಸಾಯನ ವಿಜ್ಞಾನ; ಕಾರ್ಬನಿಕ ಸಂಯುಕ್ತಗಳನ್ನು ಅಧ್ಯಯನ ಮಾಡುವ ರಸಾಯನ ವಿಜ್ಞಾನ ವಿಭಾಗ.

    organic law
    ನಾಮವಾಚಕ
    ದೇಶದ ವಿಧ್ಯುಕ್ತ ರಾಜ್ಯಾಂಗ ಶಾಸನ, ರಾಜ್ಯಾಂಗ ಕಾನೂನು.

    organically
    ಕ್ರಿಯಾವಿಶೇಷಣ
  • ಅಂಶಾಂಶಿಯಾಗಿ; ಅಂಗಾಂಗಿಯಾಗಿ.
  • ಸುಸಂಘಟಿತವಾಗಿ; ಸುವ್ಯವಸ್ಥಿತವಾಗಿ; ಸುಸಂಯೋಜಿತವಾಗಿ.

  • organisation
    ನಾಮವಾಚಕ
    = organization.

    organise
    ಕ್ರಿಯಾಪದ
    = organize.

    organism
    ನಾಮವಾಚಕ
  • ಜೀವಿ:
    1. ಪರಸ್ಪರಾವಲಂಬಿಗಳಾದ ಭಾಗಗಳಿಂದ ಸುಸಂಬದ್ಧವಾಗಿ ರಚಿತವಾಗಿ, ಪ್ರಾಣದಿಂದ ಕೂಡಿರುವ ವಸ್ತು.
    2. ಯಾವುದೇ ಪ್ರಾಣಿ ಯಾ ಸಸ್ಯ.
  • (ಪ್ರಾಣಿಯ ಯಾ ಸಸ್ಯದ) ಭೌತದೇಹ; ಶರೀರ.
  • ಸಾವಯವಿ; (ಜೀವಿಗೆ ಹೋಲಿಸಬಹುದಾದ) ಪರಸ್ಪರಾವಲಂಬಿಗಳಾದ ಭಾಗಗಳುಳ್ಳ ಒಂದು ಸಮಷ್ಟಿ ಯಾ ವ್ಯವಸ್ಥೆ: the governmental organism ಸರಕಾರೀ ವ್ಯವಸ್ಥೆ.


  • logo