logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indirect
ಗುಣವಾಚಕ
  • (ದಾರಿ ಮೊದಲಾದವುಗಳ ವಿಷಯದಲ್ಲಿ) ನೇರವಾಗಿಲ್ಲದ; ಬಳಸಾದ.
  • ಸುತ್ತುಬಳಸಿನ; ವಿಷಯಕ್ಕೆ ನೇರವಾಗಿ ಹೋಗದ.
  • (ಅರ್ಥಶಾಸ್ತ್ರ) (ತೆರಿಗೆಗಳ ವಿಷಯದಲ್ಲಿ) ನೇರವಲ್ಲದ; ಅಪ್ರತ್ಯಕ್ಷ; ಪರೋಕ್ಷ; ತೆರಿಗೆ ಹಾಕಿದ ಸರಕಿಗೆ ಬಳಕೆದಾರ ಹೆಚ್ಚಿನ ಬೆಲೆಯ ರೂಪದಲ್ಲಿ ಕೊಡುವ.
  • (ದೀಪದ ವಿಷಯದಲ್ಲಿ) ಪರೋಕ್ಷ; ಅಪ್ರತ್ಯಕ್ಷ; ಬಚ್ಚಿಟ್ಟ ಆಕರದಿಂದ ಬಂದು ಬೆಳಕು ಚದುರಿದ.
  • ಅನುದ್ದಿಷ್ಟ; ಪರೋಕ್ಷ; ನೇರವಾಗಿ ಗುರಿಯಿಡದ, ಉದ್ದೇಶಿಸದ: indirect result ನೇರವಾಗಿ ಗುರಿಯಿಡದ ಫಲ; ಪರೋಕ್ಷಪರಿಣಾಮ.
  • ಮೋಸದ; ಕಪಟದ; ಕುಟಿಲ; ಋಜುವಲ್ಲದ; ನೇರವಲ್ಲದ.

  • indirect aggression
    ನಾಮವಾಚಕ
    ಪರೋಕ್ಷ ದಾಳಿ; ಸೈನ್ಯೇತರ ವಿಧಾನದಿಂದ ಮಾಡುವ ದಾಳಿ.

    indirect evidence
    ನಾಮವಾಚಕ
    (ನ್ಯಾಯಶಾಸ್ತ್ರ) = circumstantial evidence.

    indirect object
    ನಾಮವಾಚಕ
    (ವ್ಯಾಕರಣ) ಗೌಣ ಕರ್ಮಪದ; ಪರೋಕ್ಷ ಕರ್ಮಪದ; ಕ್ರಿಯಾಪದದ ಕ್ರಿಯೆಗೆ ಒಳಗಾಗಿದ್ದರೂ ಪ್ರಧಾನವಾಗಿ ಒಳಗಾಗಿರದ ವ್ಯಕ್ತಿ ಯಾ ವಸ್ತು: I give him the book ಎಂಬ ವಾಕ್ಯದಲ್ಲಿ him ಎಂಬುದು ಗೌಣ ಕರ್ಮಪದ.

    indirect passive
    ನಾಮವಾಚಕ
    (ವ್ಯಾಕರಣ) ಗೌಣ ಕರ್ಮಣಿ; ಪರೋಕ್ಷ ಕರ್ಮಣಿ; ಕರ್ತರಿ ಪ್ರಯೋಗದ ವಾಕ್ಯದಲ್ಲಿ ಗೌಣಕರ್ಮಪದವಾಗಿರುವುದೇ ಕರ್ತೃಪದವಾಗಿರುವ ಕರ್ಮಣಿ ಪ್ರಯೋಗ: he was given the book ಎಂಬ ವಾಕ್ಯದಲ್ಲಿ he.

    indirect question
    ನಾಮವಾಚಕ
    ಪರೋಕ್ಷ ಪ್ರಶ್ನೆ; ಒಬ್ಬನ ಪ್ರಶ್ನೆಯನ್ನು ಮತ್ತೊಬ್ಬನು ವರದಿ ಮಾಡುವಾಗ ಹೇಳುವ ಪ್ರಶ್ನೆ, ಉದಾಹರಣೆಗೆ asked who I was.

    indirect speech
    ನಾಮವಾಚಕ
    = reported speech.

    indirection
    ನಾಮವಾಚಕ
  • (ಕಾರ್ಯದಲ್ಲಿ) ಸುತ್ತು – ಮಾರ್ಗ, ಬಳಸು; ನೇರವಾಗಿಲ್ಲದಿರುವಿಕೆ: by indirection ಸುತ್ತು ಬಳಸಾಗಿ; ಕೊಂಕಣ ಸುತ್ತಿ.
  • ಮೋಸ; ಕೃತ್ರಿಮ; ಕಪಟ.
  • ನಿರುದ್ದೇಶ; ಗೊತ್ತುಗುರಿಯಿಲ್ಲದಿರುವುದು.

  • indirectly
    ಕ್ರಿಯಾವಿಶೇಷಣ
  • ಸುತ್ತು ಬಳಸಿ(ಕೊಂಡು).
  • ವಿಷಯಕ್ಕೆ ನೇರವಾಗಿ ಹೋಗದೆ.
  • ಪರೋಕ್ಷವಾಗಿ; ಅಪ್ರತ್ಯಕ್ಷವಾಗಿ.

  • indirectness
    ನಾಮವಾಚಕ
  • ಪರೋಕ್ಷತೆ; ಅಪ್ರತ್ಯಕ್ಷತೆ.
  • ಸುತ್ತುಬಳಸುವಿಕೆ; ನೇರವಾಗಿಲ್ಲದಿರುವಿಕೆ.
  • ಕಪಟ; ಕುಟಿಲತೆ; ಕೃತ್ರಿಮ: indirectness was entirely foreign to his manly nature ಕಪಟತನ ಅವನ ಧೀರ ಸ್ವಭಾವಕ್ಕೆ ತೀರ ವಿರುದ್ಧವಾಗಿತ್ತು.


  • logo