(ಸಸ್ಯವಿಜ್ಞಾನ) ಸಸ್ಯವಲಯೀಕರಣ; ಪ್ರಧಾನ ಸಸ್ಯಜಾತಿಗಳಿಂದ ಗುರುತಿಸಬಹುದಾದ ವಲಯಗಳಾಗಿ ಯಾವುದೇ ಭೂಪ್ರದೇಶವನ್ನು ವಿಂಗಡಿಸುವುದು.
zonda
ನಾಮವಾಚಕ
(ಅರ್ಜೆಂಟೈನಾದ) ಧೂಳು ತುಂಬಿದ, ಉತ್ತರದ ಬಿಸಿಗಾಳಿ.
zone
ನಾಮವಾಚಕ
ಪದಗುಚ್ಛ
ವಲಯ:
ಪಟ್ಟೆ; ಹೆಚ್ಚುಕಡಮೆ ಪಟ್ಟಿಯಂತಿರುವ ಯಾವುದೇ ನಿರ್ದಿಷ್ಟ ಪ್ರದೇಶ.
ಎರಡು ಹೆಚ್ಚುಕಡಮೆ ಏಕಕೇಂದ್ರೀಯ ವೃತ್ತಗಳ ನಡುವಣ ಪ್ರದೇಶ.
ಗೋಲದ ಮೈಮೇಲೆ ಎರಡು ಸಮಾಂತರ ರೇಖೆಗಳಿಂದ ಆವೃತವಾದ ಪ್ರದೇಶ.
ಶಂಕು ಯಾ ಸಿಲಿಂಡರಿನ ಅಕ್ಷಕ್ಕೆ ಲಂಬವಾಗಿರುವ ಎರಡು ವೃತ್ತಗಳ ನಡುವಣ ಪ್ರದೇಶ.
ಏಕಕಾಲಮಾನ ವಲಯ; (ಭೂಮಿಯ ಮೇಲೆ) ಪ್ರಮಾಣದ ಯಾ ಒಂದೇ ಕಾಲಮಾನವನ್ನು ನಿಗದಿಮಾಡಲು ಆಯ್ದುಕೊಂಡ ಎರಡು ರೇಖಾಂಶಗಳ ನಡುವಣ ಪ್ರದೇಶ, ವ್ಯಾಪ್ತಿ.
(ಭೂವಿಜ್ಞಾನ) ವಿಶಿಷ್ಟ ಹಾಸಿಲ್‍ಗಳ ಆಧಾರದ ಮೇಲೆ ಭೂಮಿಯ ಆಳದಲ್ಲಿ ಯಾ ಪರ್ವತಗಳ ಮೇಲೆ ವಿಂಗಡಿಸಲಾದ ಸ್ತರ ಪ್ರದೇಶ.
(ಭೂಗೋಳಶಾಸ್ತ್ರ) ಭೂಗೋಳದ ಮೈಮೇಲೆ ವಿಷುವದ್ ವೃತ್ತಕ್ಕೆ ಸಮಾಂತರವಾಗಿ ಎಳೆದ ವೃತ್ತಗಳ ನೆರವಿನಿಂದ ವಿಂಗಡಿಸಲಾಗಿರುವ ಒಂದು ಉಷ್ಣವಲಯ, ಎರಡು ಸಮಶೀತೋಷ್ಣ ವಲಯಗಳು ಮತ್ತು ಎರಡು ಶೀತವಲಯಗಳು ಎಂಬ ಐದು ವಲಯಗಳಲ್ಲಿ ಒಂದು.
ಕಾಯ ಒಂದನ್ನು ಸುತ್ತುವರಿದಿರುವ ಒಂದೇ ಬಣ್ಣದ ಯಾ ಬೇರಾವುದೇ ಗುಣದ ನೆರವಿನಿಂದ ಗುರುತಿಸಬಹುದಾದ ಸುತ್ತುಪಟ್ಟಿ.
ವಿಶಿಷ್ಟ ಗುಣಲಕ್ಷಣಗಳುಳ್ಳ, ವಿಶಿಷ್ಟ ಉದ್ದೇಶ, ಪ್ರಯೋಜನಗಳಿರುವ – ಪ್ರದೇಶ, ಪರಿಧಿ: danger zone ಅಪಾಯ ವಲಯ, ಕ್ಷೇತ್ರ.
(ಪ್ರಾಚೀನ ಪ್ರಯೋಗ) ನಡುಪಟ್ಟಿ; ‘ಬೆಲ್ಟು’; ಡಾಬು.
zone
ಸಕರ್ಮಕ ಕ್ರಿಯಾಪದ
(ಮಂಡಲ ಯಾ ವಲಯದಂತೆ) ಸುತ್ತುವರಿ; ಸುತ್ತುಕಟ್ಟು.
ವಲಯಗಳಾಗಿಸು; ವಲಯಗಳಾಗಿ ವಿಭಾಗಿಸು; ವಲಯಗಳ ಪ್ರಕಾರ ವ್ಯವಸ್ಥೆಗೊಳಿಸು.
ವಲಯಕ್ಕಿಷ್ಟೆಂದು ನಿಗದಿಮಾಡು, ಹಂಚು.
ವಲಯದ ವ್ಯಾಪ್ತಿ ಗೊತ್ತುಮಾಡು, ನಿರ್ಧರಿಸು.
zoning
ನಾಮವಾಚಕ
ವಲಯರಚನೆ; ವಲಯಗಳಾಗಿ ವಿಭಾಗಿಸುವುದು.
zonk
ನಾಮವಾಚಕ
(ಅನೇಕವೇಳೆ ಭಾವಸೂಚಕಅವ್ಯಯವಾಗಿ ಪ್ರಯೋಗ) ಏಟಿನ ಯಾ ಬಲವಾದ ಸಂಘಟ್ಟನದ ಶಬ್ದ.