logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

umbonate
ಗುಣವಾಚಕ
  • ಗುಬಟು ಯಾ ಉಬಉ ಯಾ ಗ್ರಂಥಿಯಿರುವ; ಗಂತಿಯುಳ್ಳ.
  • ಗುಬಟಿನಾಕಾರದ: an umbonate fungus ಗುಬಟಿನಾಕಾರದ ಶಿಲೀಂಧ್ರ, ಅಣಬೆ.

  • umbra
    ನಾಮವಾಚಕ
    ಪೂರ್ತಿ ನೆರಳು; ಪೂರ್ಣಛಾಯೆ:
  • ಬೆಳಕಿನ ಆಕರದಿಂದ ಬರುತ್ತಿರುವ ಬೆಳಕು ಸ್ವಲ್ಪವೂ ತಲಪದಿರುವಂಥ ನೆರಳಿನ ಭಾಗ.
  • ಸೂರ್ಯನ ಕಲೆಯ ಮಧ್ಯದಲ್ಲಿರುವ ಕಪು ಭಾಗ.
  • ದಟ್ಟನೆರಳು; ಸಾಮಾನ್ಯವಾಗಿ ಸೂರ್ಯಗ್ರಹಣದ ಕಾಲದಲ್ಲಿ ಚಂದ್ರನಿಂದ ಭೂಮಿಯ ಮೇಲೆ ಬೀಳುವ, ಪೂರ್ಣ ನೆರಳಿನ ಭಾಗ.

  • umbrage
    ನಾಮವಾಚಕ ಪದಗುಚ್ಛ
  • ಅಸಮಾಧಾನ; ಮುನಿಸು; ಅಪಚಾರ ಭಾವನೆ; ತಿರಸ್ಕಾರ, ಅಪಚಾರ, ಘಾಸಿ ಆಯಿತೆಂಬ ಭಾವನೆ.
  • (ಪ್ರಾಚೀನ ಪ್ರಯೋಗ)
    1. ನೆರಳು.
    2. ನೆರಳು ಕೊಡುವ ವಸ್ತು ಮೊದಲಾದವು.

  • umbrageous
    ಗುಣವಾಚಕ
  • ನೆರಳು ಕೊಡುವಂಥ; ನೆರಳಾದ: an umbrageous tree ನೆರಳು ಕೊಡುವ ಮರ.
  • ಅಸಮಾಧಾನಗೊಳಿಸುವಂಥ; ಅಪಚಾರವೆಸಗತಕ್ಕ.

  • umbrella
    ನಾಮವಾಚಕ
  • ಕೊಡೆ; ಛತ್ರಿ. Figure: umbrella
  • ಶತ್ರು ವಿಮಾನಗಳ ವಿರುದ್ಧ ರಕ್ಷಣೆ ನೀಡಲು ನಿಯೋಜಿಸಿದ ಯುದ್ಧವಿಮಾನಗಳ ತೆರೆ ಯಾ ಬೆಂಕಿಯ ಮರೆ.
  • (ವಿಭಿನ್ನ ಅಭಿಪ್ರಾಯದವರು ಒಟ್ಟಾಗಲು ಸಹಾಯಕವಾದ ಸೂತ್ರ, ರಾಜಿ, ಮೊದಲಾದವುಗಳ) ನೆರಳು; ಆಶ್ರಯ; ರಾಜಕೀಯ ರಕ್ಷಣೆ: under the umbrella of the UNO ಯುಎನ್‍ಓ ಆಶ್ರಯದ ಅಡಿಯಲ್ಲಿ.
  • (ಲೋಳೆಮೀನು ಮೊದಲಾದವುಗಳ) ಜಿಲೆಟಿನ್ನಿನಂಥ ಈಜುಬಿಲ್ಲೆ.
  • ಕೊಡೆಚಿಪ್ಪು ಪ್ರಾಣಿ; ಕೊಡೆಯಂಥ ಚಿಪು ಳ್ಳ ಒಂದು ಉದರ ಪಾದಿ.
  • ರಕ್ಷಣೆ; ಆಶ್ರಯ; ನೆರಳು.

  • umbrella bird
    ನಾಮವಾಚಕ
    ಕೊಡೆ ಹಕ್ಕಿ; ಸೆಹಲಾಪ್ಟರಸ್‍ ಕುಲದ, ಕೊಡೆಯಂತೆ ಬಿಚ್ಚಿದ ಕಪ್ಪುಶಿಖೆ ಮತ್ತು ಉದ್ದವಾದ ಜೋಲು ಮಾಂಸಲಭಾಗಗಳು ಉಳ್ಳ, ದಕ್ಷಿಣ ಅಮೆರಿಕದ ಹಲವು ಬಗೆಯ ಹಕ್ಕಿಗಳಲ್ಲೊಂದು.

    umbrella pine
    ನಾಮವಾಚಕ
  • = stone pine.
  • ಛತ್ರಿ ಎಲೆಯ ಮರ; ಕೊಂಬೆಗಳ ತುದಿಯಲ್ಲಿ ಛತ್ರಿಯಂತೆ ಸುರುಳಿ ಸುತ್ತಿದ ಎಲೆಗಳುಳ್ಳ, ಎತ್ತರವಾದ, ಸಡಾಪಿ ವರ್ಟಿಸಿಲಾಟ ಕುಲದ, ಜಪಾನಿನ, ನಿತ್ಯಹಸುರು ಶಂಕು ಮರ.

  • umbrella shell
    ನಾಮವಾಚಕ
    = umbrella \((5)\).

    umbrella stand
    ನಾಮವಾಚಕ
    ಕೊಡೆ ನಿಲುವು; ಛತ್ರಿ ಸ್ಟ್ಯಾಂಡು; ಮುಚ್ಚಿದ ಕೊಡೆಗಳನ್ನಿಡುವ, ಸಾಮಾನ್ಯವಾಗಿ ತೊಟ್ಟಿಕ್ಕುವ ನೀರಿಗಾಗಿ ಕೆಳಗೆ ತಟ್ಟೆಯಿರುವ, ನಿಲುವು.

    umbrella tree
    ನಾಮವಾಚಕ
    ಛತ್ರಿಮರ; ಕೊಂಬೆ ತುದಿಯಲ್ಲಿ ಛತ್ರಿಯಂತೆ ಸುರುಳಿ ಸುತ್ತಿದ ಎಲೆ ಬಿಡುವ, ಮ್ಯಾಗ್ನೊಲಿಯ ಟ್ರಿಪೆಟಲ ಕುಲದ, ಸಣ್ಣ ಮ್ಯಾಗ್ನೋಲಿಯ ಮರ.


    logo