logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tactual
ಗುಣವಾಚಕ
ಸ್ಪರ್ಶ್ಯ; ಸ್ಪಾರ್ಶ; ಸ್ಪರ್ಶಗ್ರಾಹ್ಯ; ಸ್ಪರ್ಶೇಂದ್ರಿಯಕ್ಕೆ ಸಿಗುವ; ಮುಟ್ಟಿ ತಿಳಿಯುವ.

tad
ನಾಮವಾಚಕ
(ಅಮೆರಿಕನ್‍ ಪ್ರಯೋಗ, ಆಡುಮಾತು) ಸ್ವಲ್ಪ; ತುಸು; ಅಲ್ಪಪ್ರಮಾಣ (ಹಲವೊಮ್ಮೆ ಕ್ರಿಯಾವಿಶೇಷಣವಾಗಿ ಬಳಕೆ): a tad too salty ಉಪ್ಪು ಸ್ವಲ್ಪ ಜಾಸ್ತಿ (ಆಗಿದೆ).

tadpole
ನಾಮವಾಚಕ
(ಉಭಯಚರ ಜೀವಿಯ) ಗೊದಮೊಟ್ಟೆ ಮರಿ; ಮುಖ್ಯವಾಗಿ ಜಲವಾಸದ ಹಂತದಲ್ಲಿ ಕಿವಿರುಗಳ ಮೂಲಕ ಉಸಿರಾಡುವಾಗಿನ ಕಪ್ಪೆ ಮೊದಲಾದವುಗಳ ಬಾಲದ ಮರಿ.

taedium vitae
ನಾಮವಾಚಕ
ಜೀವನ ಜುಗುಪ್ಸೆ; ಕೆಲವೊಮ್ಮೆ ಆತ್ಮಹತ್ಯೆಯ ಪ್ರವೃತ್ತಿಯುಳ್ಳ ರೋಗದಂಥ ಜೀವನದ ಬೇಸರಿಕೆ, ಸ್ಥಿತಿ.

taenia
ನಾಮವಾಚಕ
  • (ಪುರಾತನ ಗ್ರೀಕ್‍ ವಾಸ್ತುಶಿಲ್ಪ) ಕಂಬದ ಬೋದಿಗೆಯ ಮೇಲಿನ ತೊಲೆ ಹಾಗೂ ಕಾರ್ನೀಸಿನ ನಡುವಣ ಗೋಲು ಪಟ್ಟೆ.
  • (ಅಂಗರಚನಾಶಾಸ್ತ್ರ) ಪಟ್ಟಿಯಂಥ ಭಾಗ (ಮುಖ್ಯವಾಗಿ ಮಿದುಳಿನ ಯಾ ದೊಡ್ಡ ಕರುಳಿನ ಸ್ನಾಯುಗಳು).
  • (ಜೀವವಿಜ್ಞಾನ) ಟೀನಿಅ ಕುಲದ, ಮುಖ್ಯವಾಗಿ ಟೀನಿಅ ಸ್ಯಾಜಿನಾಟ ಮತ್ತು ಟೀನಿಅ ಸೋಲಿಯಮ್‍ ಕುಲದ, ಮನುಷ್ಯರಲ್ಲಿ ಪರೋಪಜೀವಿಯಾಗಿ ವಾಸಿಸುವ, ದೊಡ್ಡ ಲಾಡಿಹುಳು.
  • (ಗ್ರೀಕ್‍ ಪ್ರಾಕ್ತನಶಾಸ್ತ್ರ) ತಲೆಪಟ್ಟಿ; ಕೂದಲು ಕಟ್ಟು.

  • taenioid
    ಗುಣವಾಚಕ
  • ಪಟ್ಟಿಯಾಕಾರದ.
  • ಲಾಡಿಹುಳುಗಳ.

  • taffeta
    ನಾಮವಾಚಕ
    ಟ್ಯಾಹೆಟ; (ಸಾದಾ ನೇಯ್ಗೆಯ) ಹೊಳೆಯುವ, ಉತ್ತಮ ರೇಷ್ಮೆ ಯಾ ರೇಷ್ಮೆಯಂಥ ಬಟ್ಟೆ.

    taffrail
    ನಾಮವಾಚಕ
    (ನೌಕಾಯಾನ) ಹಡಗಿನ ಹಿಂಗೋಟಿನ ಯಾ ಹಿಂಭಾಗದ ಸುತ್ತ ಹಾಕಿರುವ ಹಳಿ, ಕಂಬಿ (ಸಾಲು), ಕಟಕಟೆ.

    Taffy
    ನಾಮವಾಚಕ
    (ಆಡುಮಾತು) (ಅಡ್ಡಹೆಸರು) ವೇಲ್ಸಿನವನು (ಕೆಲವೊಮ್ಮೆ ಅವಮಾನಕರವಾಗಿ ಬಳಕೆ).

    taffy
    ನಾಮವಾಚಕ
    (ಅಮೆರಿಕನ್‍ ಪ್ರಯೋಗ)
  • ಒಂದು ಬಗೆಯ ಮಿಠಾಯಿ.
  • ಅಪ್ರಾಮಾಣಿಕ ಮುಖಸ್ತೋತ್ರ; ಪೊಳ್ಳು ಹೊಗಳಿಕೆ.


  • logo