logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

madonna
ನಾಮವಾಚಕ ಪದಗುಚ್ಛ
madonna lily ಬಿಳಿ ಲಿಲಿ; ಶುದ್ಧ ಬಿಳಿಯ ಬಣ್ಣದ ಒಂದು ಬಗೆಯ ಲಿಲಿ ಹೂವು.
  • (the Madonna) ಮೇರಿ ಕನ್ಯೆ.
  • ಮೇರಿ ಕನ್ಯೆಯ ಚಿತ್ರ, ಪ್ರತಿಮೆ.

  • madras
    ನಾಮವಾಚಕ
    ಚೌಕಳಿಬಟ್ಟೆ; ಬಣ್ಣದ ಯಾ ಬಿಳಿಯ ಪಟ್ಟೆಗಳು, ಚೌಕಳಿಗಳು, ಮೊದಲಾದವುಗಳುಳ್ಳ ಗಟ್ಟಿಯಾದ ಹತ್ತಿಬಟ್ಟೆ.

    madrepore
    ನಾಮವಾಚಕ
  • ತೂತು ಹವಳ; ಸರಂಧ್ರ ಪ್ರವಾಳ; ರಂಧ್ರಗಳಿರುವ ಹವಳದ ಜಾತಿ.
  • (ರಂಧ್ರಗಳನ್ನು ಮಾಡುವ) ಹವಳದ ಹುಳು.

  • madreporic
    ಗುಣವಾಚಕ
  • ತೂತು ಹವಳದ; ತೂತು ಹವಳಕ್ಕೆ ಸಂಬಂಧಿಸಿದ.
  • (ರಚನೆಯಲ್ಲಿ) ತೂತು ಹವಳದಂಥ.

  • madreporiform
    ಗುಣವಾಚಕ
    ತೂತು ಹವಳದಂಥ; ತೂತು ಹವಳದ ರಚನೆಯುಳ್ಳ ಯಾ ಲಕ್ಷಣವುಳ್ಳ.

    madrigal
    ನಾಮವಾಚಕ
  • ಚಿಕ್ಕ – ಪ್ರಣಯ ಕವನ, ಪ್ರೇಮಗೀತೆ; ಲಘು ಶೃಂಗಾರಗೀತೆ.
  • (ಸಾಮಾನ್ಯವಾಗಿ 16ನೆ ಯಾ 17ನೆ ಶತಮಾನದ ಒಂದು ಬಗೆಯ) ಸಂವಾದ ಗೀತ; ಪಕ್ಕವಾದ್ಯಗಳಿಲ್ಲದೆ ಹಲವರು ದನಿಗೂಡಿಸಿ ಹಾಡುವ ಒಂದು ಬಗೆಯ ಸಂವಾದ ಗೀತೆ.

  • madrigalesque
    ಗುಣವಾಚಕ
  • ಲಘು ಶೃಂಗಾರಗೀತೆಯ ಯಾ ಅದರ ಲಕ್ಷಣಗಳುಳ್ಳ.
  • (ಅನೇಕರು ಕೂಡಿ ಹಾಡುವ) ಸಂವಾದಗೀತದ ಯಾ ಅದರ ಲಕ್ಷಣಗಳುಳ್ಳ.

  • madrigalian
    ಗುಣವಾಚಕ
  • ಚಿಕ್ಕ ಪ್ರಣಯ ಕವನಗಳಂಥ; ಲಘು ಶೃಂಗಾರಗೀತದಂತಿರುವ.
  • (ಹಲವರು ಕೂಡಿ ಹಾಡುವ) ಸಂವಾದಗೀತದಂಥ.

  • madrigalist
    ನಾಮವಾಚಕ
  • ಲಘು ಶೃಂಗಾರಗೀತಕಾರ.
  • (ಹಲವರು ಕೂಡಿ ಹಾಡುವ) ಸಂವಾದಗೀತಕಾರ.

  • madwoman
    ನಾಮವಾಚಕ
    ಹುಚ್ಚಿ.


    logo