(ಛಾಯಾಚಿತ್ರಣ) ಬಿಂಬಮಾಪಕ; ಕ್ಯಾಮರಾಕ್ಕೆ ಲಗತ್ತಿಸಿರುವ, ಯಾ ಬಿಡಿಯಾಗಿದ್ದು ಬೇರೆಬೇರೆ ಲೆನ್ಸು ಮತ್ತು ಛಾಯಾಚಿತ್ರ ಪ್ಲೇಟುಗಳಿಗೆ ಅಳವಡಿಸಬಹುದಾಗಿರುವ, ನೇರ ದೃಶ್ಯದರ್ಶಕ; ಕ್ಯಾಮರಾದಲ್ಲಿ ಹಿಡಿಯಬಹುದಾದಷ್ಟು ಇದಿರಿನ ದೃಶ್ಯದ ಪ್ರಮಾಣವನ್ನು ತೋರಿಸುವ ಸಾಧನ.
(ಸರ್ವೇಕ್ಷಣೆಯಲ್ಲಿ) ಬಿಂಬಮಾಪಕ; ವಸ್ತುವಿನ ಗಾತ್ರ ಯಾ ದೂರವನ್ನು ತಿಳಿದುಕೊಳ್ಳಲು ಬಳಸುವ ದ್ಯುತಿ ಉಪಕರಣ.
iconometry
ನಾಮವಾಚಕ
ಬಿಂಬಮಾಪನ; ಒಂದು ಪ್ರದೇಶದ ಛಾಯಾಚಿತ್ರಗಳಿಂದ ಅದರ ಅಳತೆಗಳನ್ನು ತೆಗೆದುಕೊಂಡು ಅವನ್ನು ನಕಾಸೆಗೆ ಯಾ ಸರ್ವೆಗೆ ಬಳಸುವುದು.
iconoscope
ನಾಮವಾಚಕ
(ಟೆಲಿವಿಷನ್) ಬಿಂಬದರ್ಶಕ; ದ್ಯುತಿಚಿತ್ರವನ್ನು ರೇಡಿಯೋ ಅಲೆಗಳಾಗಿ ಪರಿವರ್ತಿಸುವುದಕ್ಕೆ ಪೂರ್ವಭಾವಿಯಾಗಿ ಅದನ್ನು ವಿದ್ಯುತ್ ಪ್ರವಾಹಗಳನ್ನಾಗಿ ಪರಿವರ್ತಿಸುವ ಉಪಕರಣ.
iconostasis
ನಾಮವಾಚಕ
ಗ್ರೀಕ್ ಚರ್ಚಿನಲ್ಲಿ ಪವಿತ್ರ ಪ್ರದೇಶವನ್ನು ಮಂದಿರದ ಪ್ರಧಾನ ಭಾಗದಿಂದ ಪ್ರತ್ಯೇಕಿಸುವ, ಮತ್ತು ಪ್ರತಿಮೆಗಳನ್ನು ಇಟ್ಟಿರುವ ಅಡ್ಡ ತಡೆ.
icosahedral
ಗುಣವಾಚಕ
ವಿಂಶತಿಮುಖಿಯ; ಇಪ್ಪತ್ತು ಸಮತಲಮುಖಗಳಿರುವ ಘನಾಕೃತಿಯ ಯಾ ಅದಕ್ಕೆ ಸಂಬಂಧಿಸಿದ.